ಬ್ರೇಕಿಂಗ್ ನ್ಯೂಸ್
18-06-23 10:54 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 18: ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ಗೆ ಅಧಿಕಾರ ಬಿಟ್ಟು ಕೊಡಲ್ಲ. ಡಿ.ಕೆ. ಶಿವಕುಮಾರ್ ಅವರ ಕನಸು ತಿರುಕನ ಕನಸು ಆಗಲಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನೊಳಗೆ ನಡೆಯುತ್ತಿರುವ ಸಿಎಂ ಉತ್ತರಾಧಿಕಾರ ಫೈಟ್, ಅಕ್ಕಿ ವಿಷಯದಲ್ಲಿ ಕೇಂದ್ರದ ಮೇಲೆ ಮಾಡುತ್ತಿರುವ ಆಪಾದನೆಗಳು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದರು.
ಬಿಟ್ಟು ಕೊಡ್ತೀನಿ ಅಂತ ಹೇಳಲಿ ನೋಡೋಣ! ;
ʻʻನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಹಾಕ್ತೇನೆ. ಅವರು ನಾನು ಎರಡು ವರ್ಷದ ನಂತರ ಸಿಎಂ ಹುದ್ದೆಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಹೇಳಬೇಕು. ಆದರೆ, ಯಾವ ಕಾರಣಕ್ಕೂ ಅವರು ಹಾಗೆ ಹೇಳುವುದಿಲ್ಲ. ಯಾಕೆಂದರೆ ಇದೇ ಕಾರಣಕ್ಕಾಗಿ ಅವರು ತಮ್ಮ ಆಪ್ತ ಸಚಿವರ ಮೂಲಕ ತಾನೇ ಐದು ವರ್ಷ ಸಿಎಂ ಎಂದು ಹೇಳಿಕೆ ಕೊಡಿಸುವುದುʼʼ ಎಂದು ಗೇಲಿ ಮಾಡಿದರು.
ʻʻಸಚಿವರಾದ ಎಚ್.ಸಿ. ಮಹದೇವಪ್ಪ , ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಹಾಕಿದ ಗೆರೆ ದಾಟಲ್ಲ. ಸಿದ್ದರಾಮಯ್ಯ ಅವರ ಮನಸ್ಸಲ್ಲಿ ಇರುವುದನ್ನಷ್ಟೇ ಅವರು ಹೇಳವುದು. ಮಹದೇವಪ್ಪ ಸತ್ಯವನ್ನೇ ಹೇಳಿದ್ದಾರೆ. ಎಂಬಿ ಪಾಟೀಲ್ ಅದನ್ನೇ ಹೇಳಿರೋದು. ಕಳೆದ ಒಂದು ವರ್ಷದಿಂದ ಜಮೀರ್ ಇದನ್ನೇ ಡಂಗೂರ ಸಾರ್ತಿದಾರೆʼʼ ಎಂದು ನುಡಿದರು ಅಶೋಕ್.
ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತ ಅವರೆಲ್ಲ ಫಿಕ್ಸ್ ಆಗಿದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಇಷ್ಟೆಲ್ಲ ಕಷ್ಟಪಟ್ಟಿದ್ದು ಉಪಯೋಗಕ್ಕೆ ಬರುವುದಿಲ್ಲ. ಅವರು ಬರೀ ತಿರುಕನ ಕನಸು ಕಾಣಬೇಕು ಅಷ್ಟೆʼʼ ಎಂದರು.
ಸಿದ್ದರಾಮಯ್ಯ ಮಹಾ ಚಾಣಕ್ಯ ;
ಸಿದ್ದರಾಮಯ್ಯ ಅವರು ಮಹಾ ಚಾಣಕ್ಯ. ರಾಜಕಾರಣದಲ್ಲಿ ದೇವೇಗೌಡರೇ ಮಹಾ ತಂತ್ರಗಾರ ಎಂದು ಇತ್ತು. ಈ ಸಿದ್ದರಾಮಯ್ಯ ಅವರನ್ನೇ ಬಿಟ್ಟಿಲ್ಲ. ದೇವೇಗೌಡ ಅವರನ್ನೇ ಸಿದ್ದರಾಮಯ್ಯ ಆಟ ಆಡಿಸಿದವರು. ದೇವೇಗೌಡರೇ ಸಿದ್ದರಾಮಯ್ಯ ರನ್ನು ನೋಡಿ ಹೆದರ್ತಾರೆ. ಇಂಥ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರನ್ನು ಬಿಡುತ್ತಾರಾ? ಅವರು ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಬಿಟ್ಕೊಡಲ್ಲ. ಹೀಗಾಗಿ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ಬೀದಿ ರಂಪಾಟ ಆಗೋದು ಪಕ್ಕಾ ಎಂದು ಆರ್. ಅಶೋಕ್ ಭವಿಷ್ಯ ನುಡಿದರು.
ಎಲ್ಲರೂ ಬೇಗ ಬೇಗ ಟೂರ್ ಮುಗಿಸಿಕೊಳ್ಳಿ!
ʻʻರಾಜ್ಯದ ಮಹಿಳೆಯರಿಗೆ ಹೇಳ್ತೇನೆ, ಈ ಫ್ರೀ ಬಸ್ ಸರ್ವಿಸ್ ಹೆಚ್ಚು ದಿನ ಇರುವುದಿಲ್ಲ. ಬೇಗ ಬೇಗ ಎಲ್ಲೆಲ್ಲಿ ಟೂರ್ ಹೋಗಬೇಕೋ ಹೋಗಿಬನ್ನಿ. ಆಮೇಲೆ ನಿಮಗೆ ಅವಕಾಶ ಸಿಗಲ್ಲ. ಬೇಗ ಬೇಗ ಯೂಸ್ಮಾಡ್ಕೊಳ್ಳಿ. ಇನ್ನೊಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ಎಲ್ಲಾ ಯೋಜನೆಗಳನ್ನು ವಾಪಸ್ ಪಡೀತಾರೆʼʼ ಎಂದು ಹೇಳಿದ ಅಶೋಕ್ ಈಗಲೇ ಎಲ್ಲ ಹರಕೆ ತೀರಿಸಿಕೊಳ್ಳಿ ಎಂದರು.
ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯರನ್ನೇ ಓವರ್ಟೇಕ್ ಮಾಡ್ತಿದ್ದಾರೆ
ʻʻಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಓವರ್ ಟೇಕ್ ಮಾಡುತ್ತಿದ್ದಾರೆ. ಶಿವಕುಮಾರ್ ವರ್ತನೆಗೆ ಸಿದ್ದರಾಮಯ್ಯನ ಕೋಪ ಯಾವಾಗ ಸ್ಫೋಟ ಆಗುತ್ತೋ ಗೊತ್ತಿಲ್ಲ. ಹನಿಮೂನ್ ಪೀರಿಯೆಡ್ ಮುಗಿದ ಕೂಡಲೇ ಸರ್ಕಾರದ ಒಡಕು ಹೊರಗೆ ಬರೋದು ಸತ್ಯ. ಸಿದ್ದರಾಮಯ್ಯ ಬಣದಿಂದ ಯಾವಾಗ ಸಿಎಂ ಬಗ್ಗೆ ಮಾತುಕತೆ ಮಾತಾಡೋಕೆ ಶುರು ಮಾಡಿದ್ರೋ ಈಗ ಶಿವಕುಮಾರ್ ಬಣದವ್ರು ಕೂಡ ಸಿಎಂ ಬಗ್ಗೆ ಮಾತಾಡ್ತಿದ್ದಾರೆ. ಇವರಿಬ್ಬರ ಬಣದ ಕಚ್ಚಾಟದಿಂದ ಮುಂದೆ ಸರ್ಕಾರ ಏನ್ ಆಗುತ್ತೋ ಏನೋ ಗೊತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಈ ಸರ್ಕಾರದ ಪರಿಸ್ಥಿತಿ ಏನಾಗಿರುತ್ತೋʼʼ ಎಂದು ಅಶೋಕ್ ವ್ಯಂಗ್ಯವಾಡಿದರು.
DK Shivakumar is just dreaming of becoming CM, Siddaramaiah will never share his post slams BJP leader R Ashok. Siddaramaiah didn't care about HD Devegowda then why will he care DK Shivakumar kumar he added. Let Siddaramaiah boldy confess of giving his cm post after 2.5 years he questioned
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
07-07-25 12:20 pm
Mangalore Correspondent
Tamilnadu Lock up death, Kannada News: ತಮಿಳುನ...
06-07-25 10:52 pm
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm