ಬ್ರೇಕಿಂಗ್ ನ್ಯೂಸ್
16-06-23 10:40 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 16: ರಾಜಧಾನಿಯಲ್ಲಿ ಮಾದಕ ವ್ಯಸ್ಯನ ದಂಧೆ ಹೆಚ್ಚಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ದಂಧೆಕೋರರ ವಿರುದ್ಧ ಕಠಿಣ ಕ್ರಮಗೊಳ್ಳಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಮಾತನಾಡಿ, " ವೀಸಾ ಅವಧಿ ಮೀರಿದರೂ ಅಕ್ರಮ ವಾಸ ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿರುವ 106 ಮಂದಿ ಆರೋಪಿಗಳನ್ನ ಗಡಿಪಾರು ಮಾಡಲಾಗಿದೆ. ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ವಿದೇಶಾಂಗ ಇಲಾಖೆ ಮೂಲಕ ಅವರಿಗೆ ಮಾಹಿತಿ ನೀಡಲಾಗುವುದು " ಎಂದರು.

ಪೊಲೀಸ್ ಇಲಾಖೆಯು ವರ್ಗಾವಣೆ ದಂಧೆಯಾಗುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಅವಧಿಯಲ್ಲಿ ವರ್ಗಾವಣೆ ದಂಧೆಯಾಗಿತ್ತು. ಈಗ ದಂಧೆ ಮಾಡಲು ಯಾವುದೇ ಕಾರಣಕ್ಕೂ ಬಿಡೋದಿಲ್ಲ. ಪಿಎಸ್ಐ ಕೇಸ್ ಬಗ್ಗೆ ತನಿಖೆ ನಡೆಯುತ್ತಿದೆ. ನೇಮಕಾತಿ ಬಗ್ಗೆ ಕೋರ್ಟ್ನಲ್ಲಿ ತಡೆಯಾಜ್ಞೆ ಇದ್ದು, ಹೆಚ್ಚು ಮಾತನಾಡುವುದಿಲ್ಲ ಎಂದರು.
ಇನ್ನು ಬೆಂಗಳೂರು ನಗರ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿದೆ. ಹೀಗಾಗಿ ನಗರ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್ಮುಕ್ತ ನಗರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದರು.

ಟ್ರಾಫಿಕ್ ಸರ್ವೆಲೆನ್ಸ್ ಮಾಡುವುದಕ್ಕಾಗಿ ಡ್ರೋನ್ಗಳ ಬಳಕೆ ;
ಜನಸಂದಣಿ ಪ್ರದೇಶ ಹಾಗೂ ಟ್ರಾಫಿಕ್ ಆಗುವ ಪ್ರದೇಶಗಳಲ್ಲಿ ಸರ್ವೆಲೆನ್ಸ್ ಮಾಡುವುದಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡ್ರೋನ್ಗಳನ್ನು ಬಳಸಲಾಗುತ್ತಿದೆ. ಅಲ್ಲದೆ ಪೀಕ್ ಅವರ್ನಲ್ಲಿ ಸಂಚಾರ ದಟ್ಟಣೆ ಸುಧಾರಿಸಲು ಟ್ರಾಫಿಕ್ ಪೊಲೀಸರ ಜೊತೆಗೆ ಹೆಚ್ಚುವರಿಯಾಗಿ 10 ಮಂದಿ ಕಾನೂನು ವಿಭಾಗದ ಪೊಲೀಸರು ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ರಾಜಧಾನಿಯಲ್ಲಿ ಸಂಚಾರ ದಟ್ಟಣೆಯ ದೂರುಗಳು ಬರದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ಸಿಟಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
Drug free Bengalore is our aim, Initiatives to make Bengaluru safe for women says Homeminister G. Parameshwara. In an aim to make the tech city traffic snarl-free, Home Minister G. Parameshwara told all Deputy Commissioner of Police rank officers to spend four hours every day on the roads during peak hours, during a review of Bengaluru City Police on June 16.
20-01-26 02:15 pm
Bangalore Correspondent
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
ಇವಿಎಂಗೆ ಗುಡ್ ಬೈ, ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ;...
20-01-26 12:03 pm
ನನ್ನ ವಿರುದ್ಧ ಯಾರೋ ಅಪರಿಚಿತರು ಷಡ್ಯಂತ್ರ ಮಾಡಿದ್ದಾ...
19-01-26 08:42 pm
19-01-26 11:03 pm
HK News Desk
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
19-01-26 10:55 pm
Mangalore Correspondent
Kukke Subramanya, Drowning: ಕುಕ್ಕೆ ಸುಬ್ರಹ್ಮಣ್...
18-01-26 09:58 pm
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
20-01-26 05:01 pm
Bangalore Correspondent
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm