ಬ್ರೇಕಿಂಗ್ ನ್ಯೂಸ್
23-05-23 01:03 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 23: ಕಾಫಿ ನಾಡು ಚಿಕ್ಕಮಗಳೂರಿನ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಶಾಸಕಿಯಾಗಿರುವ ನಯನಾ ಮೋಟಮ್ಮ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ನನ್ನ ಮೇಲೆ ಸೈಬರ್ ದಾಳಿ ತೀವ್ರವಾಗಿದೆ ಎಂದು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸ್ವತಃ ಈ ವಿಡಿಯೋವನ್ನು ನಯನಾ ಮೋಟಮ್ಮ ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ವಿಡಿಯೋಗೆ ʼಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ. ಹೌದು... ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು.ʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ನಯನಾ ಅವರ ಈ ನೇರ ನಡೆ ಮತ್ತು ಧೈರ್ಯ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.
ನಯನ ಮೋಟಮ್ಮ ಯಾರು ಅಂತ ನೋಡುವುದಾದರೆ ಇವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ದಲಿತವಾದಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ.
ಚುನಾವಣೆಯಲ್ಲಿ ನನ್ನ ವಿರುದ್ಧ ಸೋತವರು ಭ್ರಮನಿರಸನಗೊಂಡು ಸೈಬರ್ ದಾಳಿ ಮಾಡಿಸುತ್ತಿದ್ದಾರೆ ಎಂದು ನಯನಾ ಪ್ರತಿಕ್ರಿಯಿಸಿದ್ದಾರೆ. ಇಂತ ದುಷ್ಕೃತ್ಯಗಳಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ ಎಂದಿರುವ ನಯನಾ, ಈ ಮೂರ್ಖರಿಗೆ ರಾಜಕೀಯ ಜೀವನ ಮತ್ತು ಖಾಸಗಿ ಜೀವನದ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ರಾಜಕಾರಣಿಯಾದ ಮಾತ್ರಕ್ಕೆ ಸಾಮಾನ್ಯವಾಗಿ ಇರಬಾರದಾ? ಮುಖವಾಡ ಹಾಕಿಕೊಂಡು ಯಾಕೆ ಜೀವನ ಮಾಡಬೇಕು? ರಾಜಕಾರಣಿಗಳು ಅಂದರೆ ಅವರು ಕೂಡ ಬೇರೆಯವರ ರೀತಿಯಲ್ಲಿ ಸಾಮಾನ್ಯರು. ನಾನು ಕೆಲವೊಮ್ಮೆ ಗೋವಾಗೆ ಹೋಗುತ್ತೇನೆ. ಅಲ್ಲಿ ಸೀರೆ ಉಟ್ಟಿಕೊಳ್ಳಲು ಆಗುತ್ತಾ? ಎನ್ನುವ ಮೂಲಕ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಯನಾ ಅವರು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ವಿರೋಧದ ನಡುವೆಯೂ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಗೆದ್ದು ಬಂದಿದ್ದಾರೆ. ಬಿಜೆಪಿಯ ಶಾಸಕರಾಗಿದ್ದ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಸಿಗದ ಹಿನ್ನೆಲೆ ಅವರು ಜೆಡಿಎಸ್ನಿಂದ ಸ್ಪರ್ಧಿಸಿದ್ದರು. ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿತ್ತು. ಆದ್ರೆ ನಯನಾ ಮೊಟಮ್ಮ ಗೆಲುವು ಸಾಧಿಸಿ ಶಾಸಕಿಯಾಗಿದ್ದಾರೆ.
ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ.
— Nayana Jhawar /Nayana Motamma (@NayanaJhawar) May 20, 2023
ಹೌದು... ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು. pic.twitter.com/04RJWUFeoH
Mudigere MLA Nayana Motamma private pictures videos go viral on social media, Nayana slams Troller with epic answer. Don't let the frustration of defeat haunt you further. Yes...politics, me, myself, and my personal life is the answer for those fools who don't know the difference,” Nayana said.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 01:23 pm
HK News Desk
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm