ಬ್ರೇಕಿಂಗ್ ನ್ಯೂಸ್
22-05-23 10:47 pm HK News Desk ಕರ್ನಾಟಕ
ಕಲಬುರಗಿ, ಮೇ 22 : ನೂತನ ಸಂಸತ್ ಭವನ ರಾಷ್ಟ್ರದ ಪ್ರಥಮ ಪ್ರಜೆಯಿಂದಲೇ ಉದ್ಘಾಟನೆ ಆಗಬೇಕು. ಎಲ್ಲವನ್ನೂ ಮೋದಿಯೇ ಏಕೆ ಮಾಡಬೇಕು ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಅಡಿಗಲ್ಲು ಹಾಕಲೂ ಮೋದಿನೇ, ಉದ್ಘಾಟನೆಗೂ ಮೋದಿನೇ, ಸಿಂಹ ಅಳವಡಿಕೆಗೂ ಮೋದಿನೇ ಬೇಕಾ ? ಎಂದು ಪರೋಕ್ಷವಾಗಿ ಸಂಸತ್ ಭವನದ ಉದ್ಘಾಟನೆಗೆ ಹೊರಟಿರುವ ಮೋದಿಯನ್ನು ಖರ್ಗೆ ಟೀಕಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ರೈಲು ಬಿಟ್ರಿ.. ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರಿಗೆ ಕೊಡಬಾರದಾ ? ಹಿಂದುಳಿದವರಿಗೆ ರಾಷ್ಟ್ರಪತಿ ಮಾಡಿದ್ದೀವಿ ಅಂತೀರಿ.. ಆದ್ರೆ ಇಂತದ್ದಕ್ಕೆಲ್ಲಾ ನೀವೆ ಮುಂದಾಗ್ತಿರಿ. ಇದು ರಾಷ್ಟ್ರದ ಪ್ರತಿಷ್ಠೆಯ ಪ್ರಶ್ನೆ. ಯಾಕೆ ರಾಷ್ಟ್ರಪತಿ ಅವರಿಗೆ ಕರೆಸ್ತಿಲ್ಲ. ಮೋದಿ ಎಲ್ಲಾನೂ ತಾನೇ ಅಂತಾನೆ.. ಬರೀ ತೋರಿಸಲಿಕ್ಕೆ ಹಿಂದುಳಿದವರನ್ನು ರಾಷ್ಟ್ರಪತಿ ಮಾಡಿದ್ರೆ ಏನ್ ಉಪಯೋಗ ? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಸದ್ಯದಲ್ಲಿಯೇ ಸಂಪುಟ ವಿಸ್ತರಣೆ ನಡೆಯಲಿದೆ. ಕಲ್ಯಾಣ ಕರ್ನಾಟಕಕ್ಕೆ ಇನ್ನೂ ನಾಲ್ಕೈದು ಮಂತ್ರಿ ಸ್ಥಾನ ಸಿಗಲಿವೆ. ಕಲ್ಯಾಣ ಕರ್ನಾಟಕಕ್ಕೆ ನಾಲ್ಕೈದು ಸ್ಥಾನ, ಮುಂಬೈ ಕರ್ನಾಟಕಕ್ಕೆ ನಾಲ್ಕೈದು ಸ್ಥಾನ ಸಿಗಲಿವೆ ಎಂದು ಈ ಕುರಿತ ಪ್ರಶ್ನೆಗೆ ಖರ್ಗೆ ಉತ್ತರಿಸಿದ್ದಾರೆ.
ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ. ಆದ್ರೂ ರಾಜ್ಯದ ಜನರ ಈ ತೀರ್ಮಾನ ನೋಡಿದ್ರೆ ರಾಜ್ಯದಲ್ಲಿ ಎಂ.ಪಿ ಚುನಾವಣೆಯಲ್ಲೂ ನಮಗೆ ಬಹುಮತ ಬರುತ್ತೆ. ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ದೆಹಲಿಯ ನನ್ನ ನಿವಾಸದಲ್ಲಿ ಪ್ರತಿಪಕ್ಷಗಳ ಸಂಘಟನೆಗಾಗಿ ಸಭೆ ಕರೆದಿದ್ದೇನೆ. ಸಮಾನ ಮನಸ್ಕರನ್ನ ಕರೆಸಿ ಮಾತನಾಡುತ್ತೇವೆ. ಶುಭ ಸೂಚನೆ ಇದೆ, ಅಪೋಜಿಸನ್ ಗೆ ಯಶಸ್ಸು ಸಿಗುತ್ತೇ ಎನ್ನುವ ನಂಬಿಕೆ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Congress chief Mallikarjun Kharge on Monday targeted Centre for not inviting President Droupadi Murmu for the inauguration of the new Parliament building and accused the Prime Minister Narendra Modi-led government of electing the President of India from the Dalit and the Tribal communities for electoral reasons.
24-04-26 02:35 pm
HK News Staffer
‘ಪಿಯುಸಿ ಸೈನ್ಸ್’ ಗುಮ್ಮ ಮುಂದಿಟ್ಟು ದಂಧೆಗಿಳಿದ ಖಾಸ...
23-04-26 07:06 pm
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
ಪುತ್ತೂರಿನಲ್ಲಿ ಸಹಪಾಠಿ ಯುವತಿಗೆ ಮಗು ಪ್ರಕರಣ ; ಮದು...
23-04-26 01:07 pm
SSLC Results 2026: ಇಂದು ಮಧ್ಯಾಹ್ನ SSLC ಫಲಿತಾಂಶ...
23-04-26 10:54 am
23-04-26 10:22 am
HK News Staffer
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
ರಾಹುಲ್ ದ್ವಿಪೌರತ್ವ ಪ್ರಕರಣ ; ವಿಚಾರಣೆಯಿಂದ ಹಿಂದೆ...
20-04-26 10:54 pm
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
23-04-26 04:43 pm
HK News Staffer
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ -...
21-04-26 02:36 pm
ಮಹಿಳಾ ಮೀಸಲು ; ಚುನಾವಣೆ ಸಮಯದಲ್ಲಿ ಗೊಂದಲ ಎಬ್ಬಿಸುತ...
20-04-26 09:40 pm
24-04-26 04:37 pm
HK News Staffer
ಪುತ್ತೂರಿನಲ್ಲಿ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ ;...
24-04-26 01:51 pm
ಮಡಿಕೇರಿಯಿಂದ ಬಂದು ತಣ್ಣೀರುಬಾವಿಯಲ್ಲಿ ಹುಟ್ಟುಹಬ್ಬ...
22-04-26 10:13 pm
ಖಾಸಗಿ ಬಸ್ಸಿನ ನಿರ್ಲಕ್ಷ್ಯದ ಚಾಲನೆ, ತಂದೆ- ಮಗಳಿದ್ದ...
22-04-26 08:41 pm
ಕ್ಷುಲ್ಲಕ ಕಾರಣಕ್ಕೆ ನೆರೆಕರೆ ಮನೆಯವರ ಬೀದಿ ಜಗಳ ; ತ...
22-04-26 04:02 pm