ಬ್ರೇಕಿಂಗ್ ನ್ಯೂಸ್
01-03-23 11:44 am Bangalore Correspondent ಕರ್ನಾಟಕ
ಬೆಂಗಳೂರು, ಮಾ.1: ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು, ಒಂದು ವರ್ಷದಿಂದ ಆಮ್ ಆದ್ಮಿ ಪಕ್ಷದಲ್ಲಿ ರಾಜಕಾರಣ ಆರಂಭಿಸಿದ್ದ ಭಾಸ್ಕರ ರಾವ್ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಭಾಸ್ಕರ ರಾವ್ ಬಿಜೆಪಿ ಸೇರಿದ್ದು, ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಆಪ್ ಪಕ್ಷದಲ್ಲಿದ್ದಾಗ ಪಿಎಸ್ಐ ಪರೀಕ್ಷೆ ಮತ್ತು ಹಗರಣದಲ್ಲಿ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿದ್ದ ಭಾಸ್ಕರ ರಾವ್ ಇದೀಗ ಆಡಳಿತ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನೆ ಹಾಕಿದರು. ತಪ್ಪು ಸರಿಪಡಿಸಲು ಅವಕಾಶಗಳಿವೆ. ಆಡಳಿತ ಪಕ್ಷಕ್ಕೆ ಬಂದು ಅದನ್ನೆಲ್ಲ ಸರಿಪಡಿಸಬಹುದು ಅಂದ್ಕೊಂಡಿದ್ದೇನೆ ಎಂದರು. ನೀವು ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಆರೋಪ ಮಾಡಿದ್ದೀರಲ್ಲ, ಈಗ ಆರೋಪ ಮುಚ್ಚಿಹೋಯ್ತಾ, ಸ್ಕ್ಯಾಮ್ ಆಗಿಲ್ಲ ಅಂತೀರಾ ಎಂದು ಕೇಳಿದ ಪ್ರಶ್ನೆಗೆ, ನಾನು ಯಾವುದೇ ವ್ಯಕ್ತಿಯ ಬಗ್ಗೆ ಆರೋಪ ಮಾಡಿಲ್ಲ. ಯುಪಿಎಸ್ಸಿಯಲ್ಲಿ ಈ ಹಿಂದೆಯೂ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದಿದೆ. 1991ರಲ್ಲಿ ನಾನು ತೇರ್ಗಡೆಯಾಗಿದ್ದಾಗಲೂ ಆ ರೀತಿ ಆಗಿತ್ತು. ಆನಂತರ, ಮರು ಪರೀಕ್ಷೆ ನಡೆಸಿದ್ದು ಆಗಿದೆ. ಹಾಗೆಯೇ ಮರು ಪರೀಕ್ಷೆ ನಡೆಸಿ, ತಪ್ಪನ್ನು ಸರಿಪಡಿಸಬೇಕಾಗಿದೆ ಎಂದರು. ಮತ್ತಷ್ಟು ಪ್ರಶ್ನೆಗಳು ಎದುರಾದಾಗ ಭಾಸ್ಕರ ರಾವ್ ಇರಿಸುಮುರಿಸಿಗೆ ಒಳಗಾಗಿದ್ದು ಬಿಜೆಪಿ ನಾಯಕರು ಧನ್ಯವಾದ ಎನ್ನುತ್ತಾ ಸುದ್ದಿಗೋಷ್ಟಿಯಿಂದ ಎದ್ದು ನಡೆದರು.
ಇದಕ್ಕೂ ಮುನ್ನ, ಪಕ್ಷಕ್ಕೆ ಯಾವುದೇ ಬೇಡಿಕೆ ಇಲ್ಲದೆ ಸೇರಿದ್ದಾರೆ. ಅವರನ್ನು ಹಾರ್ದಿಕವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ. ಅವರ ಅನುಭವಗಳನ್ನು ಪಕ್ಷದಲ್ಲಿ ಬಳಸಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಜೊತೆಗೆ ವೈಮನಸ್ಸು ಹೊಂದಿದ್ದ ಭಾಸ್ಕರ ರಾವ್ ಕೆಲವು ತಿಂಗಳಿಂದ ಪಕ್ಷದ ಚಟುವಟಿಕೆಯಲ್ಲಿ ದೂರ ನಿಂತಿದ್ದರು. ಇತ್ತೀಚೆಗೆ ಪಕ್ಷದ ಪದಾಧಿಕಾರಿಗಳ ಬದಲಾವಣೆ ಆಗಿದ್ದರೂ, ಪೃಥ್ವಿ ರೆಡ್ಡಿ ಬದಲಾವಣೆ ಆಗಿರಲಿಲ್ಲ. ಅಲ್ಲದೆ, ರಾಜ್ಯಾಧ್ಯಕ್ಷ ಹುದ್ದೆಯ ನಿರೀಕ್ಷೆಯಲ್ಲಿದ್ದ ಭಾಸ್ಕರ ರಾವ್ ಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿ ಮಾಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಭಾಸ್ಕರ ರಾವ್ ಇದೀಗ ಚುನಾವಣೆ ಹೊತ್ತಿನಲ್ಲೇ ಬಿಜೆಪಿ ಸೇರಿ ಆಪ್ ಪಕ್ಷಕ್ಕೆ ಗುನ್ನ ಇಟ್ಟಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅಣ್ಣಾಮಲೈ ಉಸ್ತುವಾರಿಯಲ್ಲಿ ಭಾಸ್ಕರ ರಾವ್ ಬಿಜೆಪಿ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಆದರೆ ಮಾರ್ಚ್ 4ರಂದು ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬೃಹತ್ ರ್ಯಾಲಿ ಹಮ್ಮಿಕೊಂಡಿರುವ ಹೊತ್ತಲ್ಲೇ ಭಾಸ್ಕರ ರಾವ್ ಆಪ್ ತೊರೆದು ಬಿಜೆಪಿ ಸೇರಿರುವುದು ಒಂದು ರೀತಿಯಲ್ಲಿ ಆಪ್ ಪಕ್ಷಕ್ಕೆ ಹಿನ್ನಡೆ ಅನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ರೀತಿ ಪಕ್ಷ ಬದಲಾವಣೆ ಮಾಡಿರುವುದು ಭಾಸ್ಕರ ರಾವ್ ಪಾಲಿಗೂ ನೈತಿಕವಾಗಿ ಹಿನ್ನಡೆ ಆಗಬಲ್ಲದು ಅನ್ನುವ ವಿಶ್ಲೇಷಣೆಯೂ ನಡೆದಿದೆ.
Less than a year after joining the Aam Aadmi Party (AAP), former Bengaluru Commissioner of Police Bhaskar Rao has decided to join the Bharatiya Janata Party (BJP). Speaking to TNM, Bhaskar Rao said that he did not find any scope for growth in AAP and that was the reason why he chose to move out. He visited the BJP’s state office on Tuesday, February 28, and held meetings with state president of the party Nalin Kumar Kateel, party Karnataka in-charge K Annamalai, state Minister R Ashoka and Union Minister Prahalad Joshi.
03-07-25 10:54 am
HK News Desk
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
Bengaluru Rural Name: ಬೆಂಗಳೂರು ಗ್ರಾಮಾಂತರ ಜಿಲ್...
02-07-25 10:05 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 02:33 pm
Mangalore Correspondent
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
Mangalore Bus Accident, Surathkal, Video: ಸುರ...
02-07-25 08:05 pm
Puttur Bjp, Krishna Rao, Pregnant: ಬಿಜೆಪಿ ಮುಖ...
02-07-25 11:39 am
ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಬಗ್ಗೆ ವರದಿ ಕೇಳಿದ್ದೇ...
30-06-25 10:59 pm
02-07-25 10:15 pm
Bangalore Correspondent
Massive Scam, Mangalore City Corporation, Fak...
02-07-25 12:24 pm
Mulki Abdul Latif Murder Case, Accused Arrest...
01-07-25 04:36 pm
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm