ಬ್ರೇಕಿಂಗ್ ನ್ಯೂಸ್
15-02-23 09:46 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.15 : ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ವಿರುದ್ಧ ಬೆಂಗಳೂರಿನ ಕೋರ್ಟ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನ ವಾರಂಟ್ ಜಾರಿಗೊಳಿಸಿದೆ.
ಸಿ.ಎಸ್.ಸೋಮೇಗೌಡ ಎನ್ನುವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ಕೋರ್ಟ್, ವೈಎಸ್ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಕೋರ್ಟ್ಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶೆ ಜೆ.ಪ್ರೀತ್ ಅವರು ಮಾರ್ಚ್ 27ಕ್ಕೆ ದತ್ತಾ ಅವರನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಬೆಂಗಳೂರು ಉತ್ತರ ಡಿಸಿಪಿಗೆ ಸೂಚನೆ ನೀಡಿದ್ದಾರೆ.
ಉದ್ಯಮಿ ಸಿ.ಎಸ್. ಸೋಮೇಗೌಡರಿಗೆ ದತ್ತಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಸಾಲ ಪಡೆದಿದ್ದ ದತ್ತಾ ಅದಕ್ಕೆ ಬದಲಾಗಿ ಚೆಕ್ ನೀಡಿದ್ದರು. ಆದರೆ ಅದು ಅನೂರ್ಜಿತವಾಗಿದ್ದು ದತ್ತಾ ವಿರುದ್ಧ ದೂರು ದಾಖಲಾಗಿತ್ತು. ಇದೀಗ ನ್ಯಾಯಾಲಯ ವಾರೆಂಟ್ ಜಾರಿ ಮಾಡಿರುವುದರಿಂದ ದತ್ತಾ ಕೋರ್ಟ್ ಗೆ ಹಾಜರಾಗುವುದು ಅನಿವಾರ್ಯವಾಗುತ್ತದೆ. ಜೆಡಿಎಸ್ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದ ದತ್ತಾ, ಜೆಡಿಎಸ್ ವರಿಷ್ಠ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ, ಇತ್ತೀಚೆಗೆ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು, ಕಡೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದತ್ತಾ ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರು ಪಡೆದುಕೊಂಡಿದ್ದಾರೆ.
Special court issues arrest warrant against YSV Datta in cheque bounce case.
19-01-26 08:42 pm
Bangalore Correspondent
ಐಪಿಎಸ್ ರಾಮಚಂದ್ರ ರಾವ್ ಸರಸ ವಿಡಿಯೋ ; ಎಷ್ಟೇ ದೊಡ್ಡ...
19-01-26 08:34 pm
ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ಬೆತ್ತಲೆ, ರಾಸ...
19-01-26 05:04 pm
ಲಕ್ಕುಂಡಿ ಗ್ರಾಮದಲ್ಲಿ ಸಾವಿರ ಕೇಜಿಯ ಶಿವಲಿಂಗ ಇದೆ ;...
19-01-26 03:33 pm
ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿ ;...
19-01-26 03:08 pm
19-01-26 11:03 pm
HK News Desk
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
19-01-26 10:55 pm
Mangalore Correspondent
Kukke Subramanya, Drowning: ಕುಕ್ಕೆ ಸುಬ್ರಹ್ಮಣ್...
18-01-26 09:58 pm
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
19-01-26 10:20 pm
HK News Desk
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm