ಬ್ರೇಕಿಂಗ್ ನ್ಯೂಸ್
19-10-20 05:41 pm Headline Karnataka News Network ಕರ್ನಾಟಕ
ಬೆಂಗಳೂರು, ಅಕ್ಟೋಬರ್ 19 : ಸಿಎಂ ಬಿಎಸ್ ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರ ಪ್ರವಾಸದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತತ್ತರಿಸಿದ್ದಾರೆ. ನಾಡಿದ್ದು ಸಿಎಂ ವೈಮಾನಿಕ ಸಮೀಕ್ಷೆ ಮಾಡ್ತಾರೆ ಅಂತ ನೋಡಿದ್ದೇನೆ. ಸಿಎಂಗೆ ಹೃದಯದಲ್ಲಿ ಗಾಂಭೀರ್ಯ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹೊತ್ತಿಕೊಂಡು ಉರಿಯುತ್ತಿದೆ, ಜಿಲ್ಲೆಗಳು ನೀರಿನಲ್ಲಿ ಮುಳುಗಿದೆ. ಪರಿಸ್ಥಿತಿ ಹೀಗಿದ್ದರೂ ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್ವೈ ಶಿಕಾರಿಪುರವನ್ನು ಮಾಡಲ್ ಮಾಡಲು ಹೊರಟಿದ್ದಾರೆ. ಹಿಂದೆ ನಾನು ಬಜೆಟ್ ಮಂಡನೆ ಮಾಡಿದ್ದಾಗ ರಾಮನಗರ, ಮಂಡ್ಯ ಬಜೆಟ್ ಅಂದ್ರು, ಇವಾಗ ಯಡಿಯೂರಪ್ಪ ಏನು ಶಿಕಾರಿಪುರದ ಸಿಎಂ ಆಗಿದ್ದಾರಾ...? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಿಎಸ್ವೈ ವಿರುದ್ಧ ಸಿಡಿದಿದ್ದೆರು. ಜನರಿಗೆ ಈ ಸರ್ಕಾರ ಸ್ಪಂದನೆ ಮಾಡ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಮಳೆ ಬಂದು ಸಂತ್ರಸ್ತರು ನರಳುತ್ತಿದ್ದಾರೆ. ಸಹಾಯ ಮಾಡುವ ಕನಿಷ್ಠ ಸೌಜನ್ಯ ಕೂಡ ಈ ಸರ್ಕಾರಕ್ಕೆ ಇಲ್ಲ. ಯಾವ ಮಂತ್ರಿಗೂ ಜವಾಬ್ದಾರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಚುನಾವಣೆಗೆ ಕೋಟಿ ಕೋಟಿ ಹಣ ಖರ್ಚು ಮಾಡ್ತಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾ ಚುನಾವಣೆ ಮಾಡ್ತಿದ್ದೀರಾ? ಆ ಹಣವನ್ನ ಸಿಎಂ ಮಾಡಲು ಸ್ಥಾನ ಕೊಟ್ಟ ಜನರಿಗೆ ಕೊಡಿ. ಸರ್ಕಾರದ ಪರಿಹಾರಕ್ಕೆ ನಾನು ಕಾಯಲ್ಲ. ಬುಧವಾರ ಪ್ರವಾಹ ಪ್ರದೇಶಕ್ಕೆ ನಾನೇ ಅಕ್ಕಿ, ಬೇಳೆ, ಬಟ್ಟೆ ಕಳಿಸ್ತಿದ್ದೇನೆ. ನನ್ನ ಕರ್ತವ್ಯ ನಾನು ಮಾಡ್ತಿದ್ದೇನೆ. ಆ ಭಾಗದ ಜನ ಮತ ಕೊಡದೇ ಹೋದ್ರು ನನ್ನ ಪ್ರಾಮಾಣಿಕ ಹಣದಲ್ಲಿ ಸಹಾಯ ಮಾಡ್ತಿದ್ದೇನೆ. ಬುಧವಾರ ಎಲ್ಲ ಸಾಮಗ್ರಿಗಳನ್ನು ನಮ್ಮ ಪಕ್ಷದಿಂದ ಕೊಡ್ತಿದ್ದೇವೆ ಎಂದರು.
ಇದೇ ವೇಳೆ, ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕಿಡಿಕಾರಿದ ಎಚ್ಡಿಕೆ, ಕೆಆರ್ ಪೇಟೆಯಂತೆ ಶಿರಾ ಮುಗಿಸ್ತೀನಿ ಅಂತಾ ಸಿಎಂ ಪುತ್ರ ಹೇಳಿದ್ದಾರೆ. ಅವರು ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಇದು ಮಾಧ್ಯಮಗಳಲ್ಲೇ ಬಂದಿದೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಅದೇ ದುಡ್ಡನ್ನು ತಗೊಂಡು ಹೋಗಿ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm