ಬ್ರೇಕಿಂಗ್ ನ್ಯೂಸ್
06-01-23 11:45 am HK News Desk ಕರ್ನಾಟಕ
ಬೆಳಗಾವಿ, ಜ.6 : ರಾಜ್ಯ ಬಿಜೆಪಿ ಸರ್ಕಾರ ನೀಡಿರುವ 2ಡಿ ಮೀಸಲಾತಿ ಪ್ರವರ್ಗವನ್ನು ತಿರಸ್ಕರಿಸಿರುವ ಪಂಚಮಸಾಲಿ ಸಮುದಾಯದ ನಾಯಕರು ತಮಗೆ 2ಎ ಮೀಸಲಾತಿಯೇ ಬೇಕು ಎಂದು ಮತ್ತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಸಮುದಾಯದ ನಾಯಕರು ಮಹತ್ವದ ಸಭೆ ನಡೆಸಿ ಚರ್ಚಿಸಿದ್ದಾರೆ.
ಮೀಸಲಾತಿ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿದ್ದಾರೆ. ಬಸವರಾಜ ಬೊಮ್ಮಾಯಿಯವರು ಸಿಎಂ ಆದಾಗಿನಿಂದ ಈವರೆಗೂ ಹಾದಿ ತಪ್ಪಿಸುವ ಕೆಲಸವನ್ನೇ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಹಿಂದುಳಿದ ಆಯೋಗದ ವರದಿ ತರಿಸುತ್ತಾರೆ. ಪಂಚಮಸಾಲಿಗಳಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ. ಮುಂದಿನ 24 ಗಂಟೆಯಲ್ಲಿ ಮೀಸಲಾತಿ ಕೊಡ್ತಿರೋ ಇಲ್ಲವೋ ಹೇಳಬೇಕು' ಅಂತಾ ಸಿಎಂಗೆ ಅಂತಿಮ ಗಡುವು ನೀಡಿದ್ದಾರೆ.
ಮೀಸಲಾತಿ ವಿಚಾರವಾಗಿ ಹೋರಾಡುತ್ತಿರುವ ನನಗೆ ಏನು ಮಾಡ್ತಾರೆ, ಪಕ್ಷದಿಂದ ಉಚ್ಛಾಟನೆ ಮಾಡ್ತಾರೆ ಅಷ್ಟೇ. ಸರ್ಕಾರದ ಮಂತ್ರಿಗಳಿಗೆ 2ಡಿ ಅಂದ್ರೆ ಏನೂ ಅಂತಾನೇ ಗೊತ್ತಿಲ್ಲ. ಸಿಎಂ ಬೋಮ್ಮಾಯಿಯವರೇ ನಮಗೆ ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ, ಮೀಸಲಾತಿ ಕೊಡುವುದಿಲ್ಲ ಅಂತನಾದ್ರೂ ಹೇಳಿ ಬಿಡಿ ಎಂದು ವಾಗ್ದಾಳಿ ನಡೆಸಿದ ಯತ್ನಾಳ್, 'ನಮ್ಮ ಸಮಾಜದ ಮಂತ್ರಿಗೆ ಅಧಿಕಾರ ಬೇಕಿದೆ' ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿಗೆ ಟಾಂಗ್ ನೀಡಿದರು.
ಮೀಸಲಾತಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು 24 ಗಂಟೆಯಲ್ಲಿ ಸ್ಪಷ್ಟ ನಿರ್ಧಾರ ತಿಳಿಸಬೇಕು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡ್ತಿರೋ ಇಲ್ಲವೋ ಅನ್ನೋದನ್ನು ಸ್ಪಷ್ಟಪಡಿಸಬೇಕು. ಸಿಎಂ ಬೊಮ್ಮಾಯಿಯವರು ಇಡೀ ಸಮಾಜಕ್ಕೆ ಮೋಸ ಮಾಡಿದ್ದಾರೆ. ನಮ್ಮ ನಮ್ಮಲ್ಲಿಯೇ ಜಗಳ ಹಚ್ಚಲು ಪ್ರಯತ್ನ ಮಾಡಿದ್ದಾರೆ. ನಮಗೆ ಹೇಳಿದ್ರಿ 2ಡಿ ಮೀಸಲಾತಿ, ಉದ್ಯೋಗ, ಶಿಕ್ಷಣ ಸಮಾನವಾಗಿ ಕೊಡ್ತಿವಿ ಅಂತ. ಆದರೆ ನಮಗೆ ನೀವು ಮೋಸ ಮಾಡಿದ್ದೀರಿ' ಎಂದು ಯತ್ನಾಳ್ ಬೇಸರ ವ್ಯಕ್ತಪಡಿಸಿದರು.
The Panchamasali Reservation Agitation Committee has rejected the State government’s offer to include the community in the new 2D category of reservation. “We stick to our demand for inclusion in 2A category. We will continue our agitation,’‘ BJP MLA Basanagouda Patil Yatnal told journalists in Belagavi after the State-level executive committee meeting on Thursday.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm