ಬ್ರೇಕಿಂಗ್ ನ್ಯೂಸ್
03-01-23 02:35 pm HK News Desk ಕರ್ನಾಟಕ
ವಿಜಯಪುರ,ಜ.3: ಸರಳ ಜೀವನಕ್ಕೆ, ನೇರ ನಡೆನುಡಿಗಳಿಗೆ ಹೆಸರಾಗಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಇಹದ ಬದುಕು ಮಾತ್ರವಲ್ಲ, ಮೃತ್ಯು ಆವರಿಸಿದ ನಂತರ ತನ್ನ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂದು ಕೂಡಾ ಮೊದಲೇ ಬರೆದಿಟ್ಟಿದ್ದರು.
೨೦೧೪ರ ಗುರುಪೂರ್ಣಿಮೆಯಂದು ಅವರು ಬರೆದಿಟ್ಟ ಅಭಿವಂದನ ಪತ್ರದಲ್ಲಿ ತನ್ನ ಅಂತ್ಯಕ್ರಿಯೆ ಹೇಗೆ ಮಾಡಬೇಕು ಎಂದೂ ಹೇಳಿದ್ದಾರೆ. ಅಚ್ಚರಿ ಎಂದರೆ, ಎಂಟು ವರ್ಷದ ಬಳಿಕ ೨೦೨೨ರ ವೈಕುಂಠ ಏಕಾದಶಿಯಂದು ಅವರು ದೇಹ ತ್ಯಾಗ ಮಾಡಿದ್ದಾರೆ.

ಅಂತ್ಯ ಸಂಸ್ಕಾರದ ಬಗ್ಗೆ ಅವರು ಬರೆದಿಟ್ಟಿರುವ ಅಂಶಗಳು ಇಂತಿವೆ. ತನ್ನ ಪಾರ್ಥಿವ ಶರೀರವನ್ನು ಭೂಮಿಯಲ್ಲಿ ಇಡುವ ಬದಲು ಪಂಚಭೂತಗಳಲ್ಲಿ ಲೀನವಾಗಲು ಸಾಧ್ಯವಾಗುವಂತೆ ಅಗ್ನಿಗರ್ಪಿಸುವಂತೆ ಸೂಚಿಸಿದ್ದಾರೆ. ಯಾವ ಕಾರಣಕ್ಕೂ ಶ್ರಾದ್ಧಾದಿ ವಿಧಿ ವಿಧಾನಗಳನ್ನು ಮಾಡುವುದು ಅನಗತ್ಯ ಎಂದು ಹೇಳಿದ್ದಾರೆ.
ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು ಎಂದು ಸೂಚಿಸಿರುವ ಅವರು, ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.


ನನ್ನದು ಸಾವಧಾನದ ಸಾಮಾನ್ಯ ಬದುಕು
ಎಂಟು ವರ್ಷಗಳ ಹಿಂದೆ ಬರೆದ ಪತ್ರದಲ್ಲಿ ತನ್ನ ಬದುಕನ್ನು ತಾನೇ ವಿಮರ್ಶಿಸಿಕೊಂಡಿದ್ದು ಹೀಗೆ: ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು 'ಗುರುದೇವರು, ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ. ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ 'ಉಪಕೃತ' ಎಂದಿದ್ದಾರೆ.

ಸಾವಿನ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಅವರು, ʻʻಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು. ಮಹಾಮೌನ. ಶೂನ್ಯಸತ್ಯʼʼ ಎಂದಿದ್ದಾರೆ.
ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ 'ಅಂತಿಮ ಅಭಿವಂದನ ಪತ್ರʼ ಎಂದಿದ್ದಾರೆ ಅವರು.
Siddeshwar Swamiji had written a letter 8 years ago about how his final rites should be performed. Arrangements have been made for the devotees to pay their last respects to his mortal remains till Tuesday 4.30 p.m. Siddeshwar Swamiji’s last rites will be performed on the ashram premises as per his wishes.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
27-04-26 10:29 am
HK News Staffer
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
ತಾಕೋಡೆ ಧರ್ಮನೇಮಕ್ಕೆ ಭಂಡಾರ ಒಯ್ಯುತ್ತಿದ್ದಾಗ ಕುಸಿದ...
25-04-26 01:45 pm
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
27-04-26 05:42 pm
HK News Staffer
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm
ನಿಶ್ಚಿತಾರ್ಥ ಮುನ್ನಾ ದಿನವೇ ಯುವತಿ ನಾಪತ್ತೆ ; ಮುಸ್...
26-04-26 08:07 pm
ಮದುವೆ ಮಂಟಪದಲ್ಲೇ ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ...
26-04-26 12:45 pm