ಬ್ರೇಕಿಂಗ್ ನ್ಯೂಸ್
03-01-23 01:31 am HK News Desk ಕರ್ನಾಟಕ
ವಿಜಯಪುರ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (82) ಸೋಮವಾರ ಇಹಲೋಕ ತ್ಯಜಿಸಿದರು. ಕೆಲವು ದಿನಗಳಿಂದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಪ್ರಕಟಿಸಿದರು.
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಜೆ 6 ಗಂಟೆಗೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ನಸುಕಿನ ಜಾವ 4 ಗಂಟೆಯವರೆಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಂಜೆ 5ರ ನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿಸಿದ್ದಾರೆ.


ಸಮಾಧಿ ಆಗಬಾರದು, ಗುಡಿ ಆಗಬಾರದು, ಪೂಜೆ, ಪುನಸ್ಕಾರಗಳು ಆಗಬಾರದು ಎಂದು ವಿಲ್ನಲ್ಲಿ ಬರೆದಿದ್ದಾರೆ. ಅವರ ಆಶಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. 'ನಿಸರ್ಗದಿಂದ ಬಂದವನು, ನಿಸರ್ಗದಲ್ಲೇ ಲೀನವಾಗಬೇಕು' ಎಂದು ಅವರ ಆಶಯವಾಗಿತ್ತು. ಜ್ಞಾನ ದಾಸೋಹ ನಿರಂತರವಾಗಿ ಪ್ರವಚನಗಳ ಮೂಲಕ ನಡೆಸಿದ್ದರು. ತತ್ವಜ್ಞಾನ ಮತ್ತು ದೇಶೀಯ, ಪಾಶ್ಚಾತ್ಯ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದವರು ಹಾಗೂ ಅಧ್ಯಯನ ನಡೆಸಿದ್ದರು. ಅಧ್ಯಾತ್ಮಕ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದರು. ಇತರರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ ಸಿದ್ದೇಶ್ವರ ಸ್ವಾಮೀಜಿ ಅವರ ಸೇವೆಗಳು ಸದಾ ನೆನಪಿನಲ್ಲಿ ಉಳಿಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು ಮತ್ತು ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ. ಶಾಂತಿ pic.twitter.com/7svVGEdSje
— Narendra Modi (@narendramodi) January 2, 2023

ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
'ಎಂದಿಗೂ ಸತ್ಕಾರ ಸ್ವೀಕರಿಸಲಿಲ್ಲ, ಪ್ರಶಸ್ತಿಗಾಗಿ ಹಂಬಲಿಸಿಲ್ಲ. ಜೇಬಿಲ್ಲದ ಎರಡು ಜತೆ ಬಟ್ಟೆಯಲ್ಲಿಯೇ ಹಣ ಮುಟ್ಟದೆ ಮಾದರಿ ಜೀವನ ನಡೆಸಿದವರು. ಇಂತಹ ಶ್ರೇಷ್ಠ ಸಂತ ಬೇಗ ಗುಣಮುಖರಾಗಿ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಲಿ' ಎಂದು ಭಕ್ತರು, ವಿದ್ಯಾರ್ಥಿಗಳು ನಿರಂತರ ಪ್ರಾರ್ಥನೆ ಸಲ್ಲಿಸಿದ್ದರು.
ಅಲ್ಲದೆ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಜನವರಿ 03ರಂದು ಮಂಗಳವಾರ ರಜೆಯನ್ನು ಘೋಷಿಸಲಾಗಿದೆ.
Siddheshwar Swamiji of Jnanayogashram, Vijayapura passed away on Monday. State honour will be provided for the last rites of Siddeshwara Swamiji. Holiday has been declared for schools and colleges in Vijayapura on Tuesday (3rd January): Karnataka govt
06-03-26 12:08 pm
HK News Staffer
ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ; ಮುಂದುವರೆ...
06-03-26 10:21 am
Bhatkal Petrol News: ಬೆಲೆ ಏರಿಕೆ ಭೀತಿ ; ಭಟ್ಕಳ...
05-03-26 11:42 pm
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
06-03-26 11:40 am
HK News Staffer
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
ಇರಾನಲ್ಲಿ 1230 ಜನರ ಸಾವು ; ಜೆರುಸಲೇಮ್ ಮೇಲೆ ಬಾಂಬ್...
05-03-26 08:51 pm
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
06-03-26 12:17 pm
supritha Jain
ದುಬೈನಿಂದ ಬೆಂಗಳೂರಿಗೆ ಹೈಡ್ರೋವೀಡ್ ಗಾಂಜಾ ಪೂರೈಕೆ ;...
05-03-26 07:38 pm
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm