ಬ್ರೇಕಿಂಗ್ ನ್ಯೂಸ್
02-01-23 09:50 pm HK News Desk ಕರ್ನಾಟಕ
ಮೈಸೂರು, ಜ.2 : ಜೆಡಿಎಸ್ ಒಂದು ಕುಟುಂಬದ ಪಾಲಿನ ಎಟಿಎಂ ಎಂದು ಟೀಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಅಮಿತ್ ಷಾ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಾಲಿನ ಉಗುರಿಗೂ ಸಮ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳುವ ಅಮಿತ್ ಶಾ ಒಂದೇ ಒಂದು ಭ್ರಷ್ಟಾಚಾರವನ್ನಾದ್ರೂ ಜನರ ಮುಂದಿಡಬೇಕಿತ್ತು. ಆದರೆ ಜೆಡಿಎಸ್ ಪಕ್ಷದ ಭಯದಿಂದ ಬಾಯಿಗೆ ಬಂದಹಾಗೆ ಹೇಳಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ, ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಅಥವಾ ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕುಟುಂಬ ಒಂದೇ ಒಂದು ಭ್ರಷ್ಟಾಚಾರ ಮಾಡಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಇದೇ ಅಮಿತ್ ಶಾ ತನ್ನ ಮಗನಿಗೆ ಬಿಸಿಸಿಐ ವಾರಸುದಾರಿಕೆ ಯಾವ ಅರ್ಹತೆ ಪ್ರತಿಭೆ ಮೇಲೆ ಕೊಡಿಸಿದ್ದಾರೆ ಗೊತ್ತು. ಇವರ ಪಕ್ಷದ ಭ್ರಷ್ಟಾಚಾರದಿಂದ ಬೇಸತ್ತು ಜನ ಸಾಯುತ್ತಿದ್ದಾರೆ. ಮೊನ್ನೆ ತುಮಕೂರಿನಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದ, ನಿನ್ನೆ ಬೆಂಗಳೂರಿನಲ್ಲಿ ಇವರ ಪಕ್ಷದ ಶಾಸಕರ ಹೆಸರನ್ನು ಬರೆದು ಇವರ ಪಕ್ಷದ್ದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ನೀಡಿರುವ ಹೊಸ ವರುಷದ ಕೊಡುಗೆ ಎಂದು ಲೇವಡಿ ಮಾಡಿದರು.

ಮುಂಬರುವ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಯಾರು ಇವರ ಮನೆ ಬಾಗಿಲಿಗೆ ಅರ್ಜಿ ಹಿಡಿದುಕೊಂಡು ಹೋಗಿದ್ದರು. 2008 ರಲ್ಲಿ ಇದೇ ಬಿಜೆಪಿಯವರು ಜೆಡಿಎಸ್ ಮನೆ ಬಾಗಿಲ ಬಳಿ ನಿಂತಿದ್ದರು ಎಂದು ಕುಟುಕಿದರು.
ದೆಹಲಿ ನಾಯಕರಿಂದ ರಾಜ್ಯದಲ್ಲಿ ಕಮಲ ಅರಳಲಿಲ್ಲ, ರಾಜ್ಯದ ಕೆಲವು ಸಂದರ್ಭಗಳಿಂದ ವೀರಶೈವ ಸಮುದಾಯ ಯಡಿಯೂರಪ್ಪನವರ ಜೊತೆ ನಿಂತ ಕಾರಣಕ್ಕೆ ಬಿಜೆಪಿ ಅಸ್ಥಿತ್ವಕ್ಕೆ ಬಂದಿತ್ತು. ಆದರೆ ಅದೇ ಯಡಿಯೂರಪ್ಪ ನವರನ್ನು ಕೇಂದ್ರ ನಾಯಕರು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತು. ಬಸವರಾಜ ಬೊಮ್ಮಾಯಿ ಬರಿ ಹೆಸರಿಗಷ್ಟೇ ಮುಖ್ಯಮಂತ್ರಿ. ಎಲ್ಲಾ ಕೇಂದ್ರದ ನಾಯಕರು ಹೇಳಿದ ಹಾಗೆ ಕೇಳಬೇಕು ಎಂದು ಹೇಳಿದರು.

ಬಿಜೆಪಿ ವಿರುದ್ಧ ಯಾರು ಶಕ್ತಿಯುತವಾಗಿ ಇರುತ್ತಾರೋ ಅವರನ್ನು ಐಟಿ, ಇಡಿ ಮೂಲಕ ಹೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿದರೂ ನಾನು ಹೆದರುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಈಗಾಗಲೇ ಸಿಸೋಡಿಯಾ ಮತ್ತು ಕೆ.ಸಿ.ಆರ್. ಪುತ್ರಿ ಮೇಲೆ ಐಟಿ ರೇಡ್ ಮಾಡಿಸಿದ್ದಾರೆ. ನನ್ನ ಮೇಲೆ ಅದ್ಯಾವ ಐಟಿ, ಇಡಿ ಕಳುಹಿಸುತ್ತಾರೋ ನೋಡುತ್ತೇನೆ ಎಂದು ಹೇಳಿದರು.
Former SEI H.D. Kumaraswamy hit back at Union Home Minister Amit Shah who attacked the JDS leaders while addressing the Janasankalpa Yatra in Mandya last Friday.Former CM HDK, who spoke about this in Mysore, has publicly criticized Union Home Minister Amit Shah Mandya saying that it is a family ATM. In any case, when Deve Gowda was the PM, when I was the CM, he challenged me to show a single case if the government treasury was looted.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 09:41 pm
HK News Staffer
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm