ಬ್ರೇಕಿಂಗ್ ನ್ಯೂಸ್
01-01-23 10:02 pm Bangalore Correspondent ಕರ್ನಾಟಕ
ಬೆಂಗಳೂರು, ಜ.1: ನಂದಿನಿ, ಅಮುಲ್ ವಿಲೀನ ಪ್ರಸ್ತಾಪ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದು ಅಮಿತ್ ಶಾ ಹೇಳಿರುವುದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರ ಮಾಡಿಕೊಂಡು, ತಾಂತ್ರಿಕವಾಗಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂಬುದಾಗಿ. ಆದರೆ ವಿಪಕ್ಷಗಳು ಅದನ್ನು ತಮಗೆ ಬೇಕಾದ ರೀತಿ ಅರ್ಥೈಸಿಕೊಂಡು ಟೀಕಿಸುತ್ತಿವೆ ಎಂದು ಹೇಳಿದ್ದಾರೆ.
ಮಾರ್ಕೆಟಿಂಗ್ ನಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕಿರುತ್ತೆ. ಎರಡೂ ದೊಡ್ಡ ಸಂಸ್ಥೆಗಳು ಜೊತೆ ಜೊತೆಗೆ ಕೆಲಸ ಮಾಡಬೇಕು ಎಂದು ಅಮಿತ್ ಷಾ ಹೇಳಿದ್ದಾರೆ. ಅದರ ಅರ್ಥ ನಂದಿನಿ ಅಸ್ತಿತ್ವ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ. ಅಮಿತ್ ಶಾ ಹೇಳಿಕೆಯ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಆದರೆ ಸಿಎಂ ಬೊಮ್ಮಾಯಿಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಪ್ಪು ಕಲ್ಪನೆ, ಊಹೇ ಮಾಡಿ ಟೀಕೆ ಮಾಡೋರಿಗೆ ಏನ್ ಹೇಳೋದು? ಎಂದು ಹೇಳಿದ್ದಾರೆ.
ಇನ್ನೂ 100 ವರ್ಷ ಹೋದರೂ ನಂದಿನಿ ಶಾಶ್ವತ ಇದ್ದೇ ಇರುತ್ತದೆ. ಕೆಲವು ಏರಿಯಾದಲ್ಲಿ ಒಟ್ಟಾಗಿ ಕೆಲಸ ಮಾಡಿದರೆ ನಮಗೆ ಲಾಭ ಇದೆ. ಇದಕ್ಕೆ ತಪ್ಪು ಅರ್ಥ ಮಾಡುವ ಅಗತ್ಯವಿಲ್ಲ. ಅಂದಹಾಗೆ ಈ ವಿಚಾರವನ್ನು ಮರ್ಜ್ ಮಾಡೋದು ಅಂತ ಅರ್ಥ ಅಲ್ಲ. ಅಮುಲ್ ಕೂಡ ಇರುತ್ತೆ, ನಂದಿನಿ ಕೂಡ ಇರುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಕೆಲವು ಭಾಗದಲ್ಲಷ್ಟೆ ತಾಂತ್ರಿಕ, ಆಡಳಿತ ವಿಚಾರಗಳನ್ನ ಶೇರ್ ಮಾಡಿಕೊಂಡು ಕೆಲಸ ಮಾಡೋದು ಅಂತ ಹೇಳಿರೋದು. ಆದರೆ ವಿಪಕ್ಷವು ಏನೋನೋ ಅರ್ಥ ಮಾಡಿಕೊಂಡಿದೆ ಎಂದು ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
Chief Minister Basavaraj Bommai Sunday dismissed speculations of a merger between Karnataka’s popular milk and dairy products brand Nandini and Anand Milk Union Ltd (Amul) of Gujarat. Such ‘rumours’, he said, were due to the misinterpretation of statements made by Union Home and Cooperation Minister Amit Shah. Nandini is a brand of Karnataka Milk Federation (KMF), a government-run cooperative.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm