ಬ್ರೇಕಿಂಗ್ ನ್ಯೂಸ್
15-09-22 07:18 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.15: ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಶಾಸಕ ಯುಟಿ ಖಾದರ್ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಶೂನ್ಯವೇಳೆಯಲ್ಲಿ ಸುರತ್ಕಲ್ಲಿನ ಅನಧಿಕೃತ ಟೋಲ್ ಗೇಟನ್ನು ತೆರವು ಮಾಡುವ ಬಗ್ಗೆ ಜನರು ಪ್ರತಿಭಟನೆ ಮಾಡುತ್ತಿದ್ದಾರೆ, ಅದನ್ನು ಯಾವಾಗ ತೆರವು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ, ಶೀಘ್ರದಲ್ಲೇ ಕಾನೂನು ಬಾಹಿರವಾಗಿ ಸುಂಕ ಸಂಗ್ರಹಿಸುತ್ತಿರುವ ಎಲ್ಲ ಟೋಲ್ ಗೇಟ್ ಗಳನ್ನು ತೆರವು ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಉತ್ತರ ನೀಡಿದ್ದಾರೆ.
ಅನಧಿಕೃತ ಟೋಲ್ ಗೇಟ್ ಎಂದು ಯುಟಿ ಖಾದರ್ ಉಲ್ಲೇಖಿಸಿದ್ದಕ್ಕೆ, ಅದು ಅನಧಿಕೃತ ಅಲ್ಲ, ಅಧಿಕೃತ ಎನ್ನುತ್ತಲೇ ಮಾತಿಗೆ ಆರಂಭಿಸಿದ ಸಚಿವ ಸಿಸಿ ಪಾಟೀಲ್, ಅಲ್ಲಿ ನವಯುಗ ಮತ್ತು ನ್ಯೂ ಮಂಗಳೂರು ಪೋರ್ಟ್ ರೋಡ್ ಕಂಪನಿಯಿಂದ ಪ್ರತ್ಯೇಕವಾಗಿ ರಸ್ತೆ ನಿರ್ಮಿಸಲಾಗಿದ್ದು, ಅದಕ್ಕಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿತ್ತು. ಸರಕಾರದ ನಿಯಮ ಇದೆ, 60 ಕಿಮೀ ಒಳಗೆ ಎರಡು ಟೋಲ್ ಗೇಟ್ ಇರುವುದಾದರೆ ನಿಶ್ಚಿತ ಕಾರಣ ಕೊಡಬೇಕಾಗುತ್ತದೆ. ಆದರೆ ಇಲ್ಲಿ ಯಾವುದೇ ನಿಶ್ಚಿತ ಕಾರಣ ಕೊಟ್ಟಿಲ್ಲ. ಹೀಗಾಗಿ ಒಂದು ಟೋಲ್ ಗೇಟನ್ನು ತೆರವು ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಪ್ರಸ್ತಾಪ ಬಂದಿದ್ದು ಕೂಡಲೇ ತೆರವು ಆಗಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅನಧಿಕೃತವಾಗಿಯೇ ಟೋಲ್ ಗೇಟ್ ನಡೆಯುತ್ತಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮುಂದುವರಿದು ಮಾತನಾಡಿದ ಯುಟಿ ಖಾದರ್, ರಾಜ್ಯದಲ್ಲಿ ಇಂಥಹ ಅನಧಿಕೃತ ಟೋಲ್ ಗೇಟ್ 19 ಕಡೆ ಇದೆ, ಕಾನೂನು ಪ್ರಕಾರ 60 ಕಿಮೀ ನಡುವೆ ಒಂದಷ್ಟೇ ಟೋಲ್ ಗೇಟ್ ಇರಬೇಕು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಪಾಡಿಯಿಂದ 30 ಕಿಮೀ ಮಧ್ಯೆ ಸುರತ್ಕಲ್ ಟೋಲ್ ಗೇಟ್ ಇದೆ, ಆನಂತರ ಹತ್ತು ಕಿಮೀ ಕಳೆದರೆ ಮತ್ತೊಂದು ಟೋಲ್ ಇದೆ. 60 ಕಿಮೀ ನಡುವೆ ಮೂರು ಟೋಲ್ ಗೇಟ್ ಇರುವ ಬಗ್ಗೆ ಜನರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಪ್ರತಿಭಟನೆ ಎದುರಾದ ಬಳಿಕ ಒಂದು ವಾರದಲ್ಲಿ ತೆರವುಗೊಳಿಸುವುದಾಗಿ ಹೇಳುತ್ತಿದ್ದಾರೆ. ಈ ಸರಕಾರಕ್ಕೆ ಜನರ ಮೇಲೆ ಕಾಳಜಿ ಇದೆಯಾ, ಟೋಲ್ ಸಂಗ್ರಹದ ಮೇಲಷ್ಟೇನಾ ನಿಮ್ಮ ಕಾಳಜಿ ಎಂದು ಪ್ರಶ್ನಿಸಿದರು. ಅಲ್ಲದೆ, 30 ಕಿಮೀ, ಆನಂತರ ಹತ್ತು ಕಿಮೀ ಮಧ್ಯೆ ಟೋಲ್ ಕಟ್ಟಿ ಜನರು ಹೋಗಬೇಕು, ಜನ ಇದರಿಂದ ರೋಸಿ ಹೋಗಿದ್ದಾರೆ. ನೀವು ಕಾಳಜಿ ವಹಿಸಿ ರಾಜ್ಯದಲ್ಲಿರುವ ಇಂಥ ಎಲ್ಲ ಕಡೆಯ ಟೋಲ್ ಗೇಟ್ ಗಳನ್ನು ತೆರವು ಮಾಡಿಸಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಸಿಸಿ ಪಾಟೀಲ್, ಈಗಾಗಲೇ ಇಂಥ ಟೋಲ್ ಗೇಟ್ ತೆರವು ಮಾಡಲಿಕ್ಕೆ ಸಚಿವ ಗಡ್ಕರಿಯವರು ಒಪ್ಪಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯವರ ಎಡವಟ್ಟಿನಿಂದ ಹೀಗಾಗಿದೆ. ಈಗ ಅಧಿಕಾರಿಗಳಿಂದ ತೊಡಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ನಾನು ಕೂಡ ಗಡ್ಕರಿ ಬಳಿಗೆ ದೆಹಲಿಗೆ ನಿಯೋಗ ಹೋಗಿದ್ದು ಅನಧಿಕೃತ, ಕಾನೂನು ಬಾಹಿರ ಇರುವ ಟೋಲ್ ಗೇಟನ್ನು ತೆರವು ಮಾಡಲು ಮನವಿ ಮಾಡುತ್ತೇನೆ. ಕಾನೂನು ಬಾಹಿರ, ಅಪ್ರಾಯೋಗಿಕ ಇದ್ದರೆ ಅದನ್ನು ತೆರವು ಮಾಡಲಿಕ್ಕೆ ರಾಜ್ಯ ಸರಕಾರ ಬದ್ಧ ಇದೆ ಎಂದು ಹೇಳಿದರು.
ಎರಡು ದಿನಗಳ ಹಿಂದಷ್ಟೇ ಸುರತ್ಕಲ್ ಟೋಲ್ ಗೇಟ್ ಮುಂಭಾಗದಲ್ಲಿ ನೂರಾರು ಮಂದಿ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಸಾಮೂಹಿಕ ಧರಣಿ ನಡೆಸಿದ್ದರು. ಒಂದು ತಿಂಗಳ ಗಡುವು ಕೊಟ್ಟಿದ್ದು, ಅಕ್ಟೋಬರ್ 18ರ ಒಳಗೆ ತೆರವು ಮಾಡದೇ ಇದ್ದಲ್ಲಿ ಜನರೇ ಸೇರಿಕೊಂಡು ಟೋಲ್ ಗೇಟನ್ನು ಅಗೆದು ತೆಗೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಆಗುತ್ತಲೇ, ಸುರತ್ಕಲ್ ಟೋಲ್ ಗೇಟ್ ತೆರವು ಮಾಡುತ್ತೇವೆ ಎಂದು ಹೇಳಿ ರಾಜ್ಯದ ಸಚಿವರು ನಗೆಪಾಟಲಿಗೀಡಾಗಿದ್ದಾರೆ.
PWD minister C C Patil said that proposal of merging Surathkal toll plaza with Hejmady toll gate is submitted to regional officers of NHAI in the city for approval.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 02:22 pm
Bangalore Correspondent
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm