ಬ್ರೇಕಿಂಗ್ ನ್ಯೂಸ್
06-09-22 01:52 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.6: ರಣಚಂಡಿಯಂತೆ ಬಿಟ್ಟೂ ಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಐಟಿ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಇತಿಹಾಸದಲ್ಲೇ ಕಂಡರಿಯದ ರೀತಿ ಮಳೆ ನೀರು ರಸ್ತೆಗೆ ನುಗ್ಗಿದ್ದು ಐಷಾರಾಮಿ ವಾಹನಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ. ಐಟಿ ಕಂಪನಿಗಳು ಹೆಚ್ಚಿರುವ ಪ್ರದೇಶದಲ್ಲೇ ಹೆಚ್ಚು ಮಳೆಯಾಗಿದ್ದು ಮಳೆ ನೀರು ರಾಡಿ ಎಬ್ಬಿಸಿದೆ.
ಮಾರತ್ ಹಳ್ಳಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು, ಇಂದಿರಾನಗರ ಸೇರಿದಂತೆ ಆಸುಪಾಸಿನ ಏರಿಯಾಗಳಲ್ಲಿ ಐಟಿ-ಬಿಟಿ ಕಂಪನಿಗಳೇ ಹೆಚ್ಚಿವೆ. ಇಲ್ಲಿನ ಉದ್ಯೋಗಿಗಳು ನಿತ್ಯ ಐಷಾರಾಮಿ ಕಾರಿನಲ್ಲೇ ಓಡಾಡ್ತಿದ್ದರು. ಆದರೆ, ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ್ಟ್ಮೆಂಟ್, ರಸ್ತೆಗಳೆಲ್ಲ ಜಲಾವೃತವಾಗಿದ್ದು ಜನರು ಕಾರುಗಳನ್ನು ಬಿಟ್ಟು ಟ್ರ್ಯಾಕ್ಟರ್ ಗಳಲ್ಲಿ ಪ್ರಯಾಣಿಸುವ ಸ್ಥಿತಿ ಬಂದಿದೆ. ಹೀಗಾಗಿ ಕೆಲ ಐಟಿ ಕಂಪನಿಗಳು ರಜೆ ಘೋಷಿಸಿದ್ರೆ, ಇನ್ನು ಕೆಲವು ಕಂಪನಿಗಳು ವರ್ಕ್ ಫ್ರಮ್ ಹೋಂಗೆ ಸೂಚನೆ ನೀಡಿವೆ.
ಸರ್ಜಾಪುರದ ರೈನ್ ಬೋ ಡ್ರೈವರ್ ಲೇಔಟ್, ಸನ್ನಿ ಬ್ರೂಕ್ಸ್ ಲೇಔಟ್, ರಾಮಗೊಂಡನಹಳ್ಳಿಯ ಹಲವು ಏರಿಯಾ ಸೇರಿದಂತೆ ಅನೇಕ ಪ್ರತಿಷ್ಠಿತ ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಈ ಭಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಸ್ ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸ್ತಿದ್ದಾರೆ.
ಯಮಲೂರಿನಲ್ಲಿ ಐಟಿ ಪಾರ್ಕ್ ನುಗ್ಗಿದ ನೀರು
ಯಮಲೂರಿನಲ್ಲಿ ದಿವ್ಯಶ್ರೀ ಟೆಕ್ ಪಾರ್ಕ್ ಜಲಬಂಧನಕ್ಕೆ ಒಳಗಾಗಿದ್ದು ಬೇಸ್ಮೆಂಟ್ ಎರಡು ಮಹಡಿಗಳಿಗೂ ನೀರು ನುಗ್ಗಿದೆ. ಯಮಲೂರು ಕೆರೆ, ನಕ್ಕುಂದಿ ಕೆರೆ, ರಾಜಕಾಲುವೆ ತುಂಬಿ ಹರಿದ ಕಾರಣ ಇಡೀ ಯಮಲೂರು ಐಟಿ ಟೆಕ್ ಪಾರ್ಕ್ ಗೆ ನೀರು ನುಗ್ಗಿದೆ. ಐಟಿ ಪಾರ್ಕ್ ಕಟ್ಟಡದ ಬೇಸ್ಮೆಂಟ್ ನಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ನೀರಲ್ಲಿ ಮುಳುಗಡೆಯಾಗಿವೆ. ಇನ್ನು ಬೆಳ್ಳಂದೂರು-ಸರ್ಜಾಪುರ ರಸ್ತೆ ಪೂರ್ತಿ ಜಲಾವೃತ ಆಗಿದೆ. ಈ ಭಾಗದ ಹಲವು ಲೇಔಟ್ ಗಳಲ್ಲಿ ನಿವಾಸಿಗಳಿಗೆ ಜಲದಿಗ್ಬಂಧನ ಉಂಟಾಗಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ ಬೋ ಲೇಔಟ್, ಕಂಟ್ರಿ ಸೈಟ್ ಸೇರಿದಂತೆ ಹಲವು ಲೇಔಟ್ ಗಳು ಮುಳುಗಡೆಯಾಗಿವೆ. ಇಲ್ಲಿನ ನಿವಾಸಿಗಳು ಅನ್ನ- ನೀರಿಗೂ ಸಹ ಪರದಾಟ ನಡೆಸುತ್ತಿದ್ದಾರೆ. ಹೈಫೈ ಏರಿಯಾ, ಐಟಿ ಸಿಟಿಯಲ್ಲಿದ್ದರೂ ಕುಡಿಯಲು ಶುದ್ಧ ನೀರಿಲ್ಲದೆ ಜನ ಪರದಾಡಿದ್ದಾರೆ. ಮನೆಗಳಲ್ಲಿ ಅವಶ್ಯಕ ಸಾಮಗ್ರಿ, ವಸ್ತುಗಳೆಲ್ಲ ನೀರುಪಾಲಾಗಿದ್ದು ಹೊರಗಿಂದ ತರುವುದಕ್ಕೂ ಅಂಗಡಿ, ವ್ಯಾಪಾರ ಸಂಕೀರ್ಣಗಳು ಬಂದ್ ಆಗಿವೆ. ರಸ್ತೆ ಮುಳುಗಡೆ ಆಗಿರೋದ್ರಿಂದ ಸಂಚಾರವೇ ಕಷ್ಟವಾಗಿದೆ. ಈ ಭಾಗದ ಅಪಾರ್ಟ್ಮೆಂಟ್, ಲೇಔಟ್ ಗಳಲ್ಲಿ ಐದಾರು ಅಡಿಗಳಷ್ಟು ನೀರು ತುಂಬಿದ್ದು ಅವಾಂತರ ಸೃಷ್ಟಿಯಾಗಿದೆ. ಸರ್ಜಾಪುರದಲ್ಲಿ ವಿಪ್ರೋ ಕಂಪನಿಯ ಕಚೇರಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದು ಅಪಾರ ನಷ್ಟವಾಗಿದೆ.
ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿ ಬಳಿ ನಾಲ್ಕೈದು ಕಿಲೋಮೀಟರ್ ರಸ್ತೆ ಜಲಾವೃತ ಆಗಿದ್ದು ಹೊಳೆಯಂತಾದ ರಸ್ತೆಯಲ್ಲಿ ಸಂಚರಿಸಲಾಗದೆ ವಾಹನ ಸವಾರರ ಪರದಾಡಿದ್ದಾರೆ. ಜಲಾವೃತಗೊಂಡ ರಸ್ತೆಯಲ್ಲಿ ಒಂದ್ಕಡೆ ಟ್ರಾಫಿಕ್ ಜಾಮ್ ನಡುವೆ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದಾಗಿ ಈ ಭಾಗದಲ್ಲಿ ವಾಸ್ತವ ಸ್ಥಿತಿ ಬಿಗಡಾಯಿಸಿದೆ.
ಕುಡಿಯುವ ನೀರಿಗೂ ಕಂಟಕ
ಒಂದ್ಕಡೆ ಮಳೆಯಿಂದ ಅವಾಂತರ ಆಗಿದ್ರೆ ಮತ್ತೊಂದೆಡೆ ಬೆಂಗಳೂರಿಗೆ ಇಂದು ಮತ್ತು ನಾಳೆ ಕಾವೇರಿ ನೀರು ಸಿಗೋದಿಲ್ಲ ಅಂತಾ ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಕಾವೇರಿ ನೀರು ಪೂರೈಸುವ ಪಂಪ್ ಹೌಸ್ ಕೆಟ್ಟು ಹೋಗಿದ್ದರಿಂದ 50 ಕ್ಕೂ ಹೆಚ್ಚು ಮಳೆ ಪೀಡಿತ ಪ್ರದೇಶಕ್ಕೆ ನೀರು ಪೂರೈಕೆ ಆಗಲ್ಲ. ಇದರಿಂದ ಬೆಂಗಳೂರಿನ ಜನರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
The situation in several parts of rain battered Bengaluru, by and large continued to remain the same on Tuesday, with streets waterlogged, houses and vehicles partially inundated, as torrential downpour lashed the capital city on September 5 night. Using boats and tractors to cross the streets submerged in water by office goers and school children was a common sight this morning in several parts of the city like Yemalur, Rainbow Drive layout, Sunny Brooks Layout, Marathahalli among several others.
01-07-25 04:19 pm
Bangalore Correspondent
Sri Rama Sene, Belagavi, SP: ಶ್ರೀರಾಮಸೇನೆ ಸೇನೆ...
30-06-25 10:30 pm
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
01-07-25 08:57 pm
HK News Desk
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 04:36 pm
Mangalore Correspondent
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm