ಬ್ರೇಕಿಂಗ್ ನ್ಯೂಸ್
24-08-22 01:33 pm Bangalore Correspondent ಕರ್ನಾಟಕ
ಬೆಂಗಳೂರು, ಆ 24: ಬೆಂಗಳೂರು-ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯ ಸಂತೋಷದ ಸುದ್ದಿ ನೀಡಿದೆ. ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು, ಆರು ದಿನಗಳಿಗೆ ಹೆಚ್ಚಿಸುವಂತೆ ನೈಋತ್ಯ ರೈಲ್ವೆಯ ಪ್ರಸ್ತಾವನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ವಾರದಲ್ಲಿ ಆರು ದಿನ ಬೆಂಗಳೂರು-ಮಂಗಳೂರು ರೈಲು ಮೈಸೂರು ಮಾರ್ಗವಾಗಿ ಸಂಚರಿಸಲಿದೆ.
ರೈಲು ಸಂಖ್ಯೆ 16585/586 ರ ಸಂಚಾರವನ್ನು ಹೆಚ್ಚಿಸಲು ನೈಋತ್ಯ ರೈಲ್ವೆ ಜುಲೈ 27 ರಂದು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೆ ಸಚಿವಾಲಯವು ಆಗಸ್ಟ್ 17 ರಂದು ರೈಲು ಸಂಖ್ಯೆ 06547/548 ರ ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ ಸೇವೆಗಳನ್ನು ಕ್ರಮಬದ್ಧಗೊಳಿಸುವ ಮೂಲಕ ರೈಲು ಸಂಚಾರವನ್ನು ವಾರಕ್ಕೆ ಆರು ದಿನಗಳವರೆಗೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ ಎಂದು ತಿಳಿಸಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪು ತಾಲೂಕಿನ ಹಲವು ಭಾಗಗಳಲ್ಲಿ ಪದೇ ಪದೇ ಭೂಕುಸಿತ ಸಂಭವಿಸಿ ರಸ್ತೆ ಸಾರಿಗೆಗೆ ತೀವ್ರ ಅಡಚಣೆಯಾದ ಕಾರಣ, ಪ್ರಯಾಣಿಕರ ಬೇಡಿಕೆಯ ಮೇರೆಗೆ ವಿಶೇಷ ರೈಲನ್ನು ಇತ್ತೀಚೆಗೆ ಪರಿಚಯಿಸಲಾಯಿತು.
ಈ ಸೇವೆಯನ್ನು ಕಾರವಾರ ಅಥವಾ ವಾಸ್ಕೋ-ಡ-ಗಾಮಾ ತನಕ ವಿಸ್ತರಿಸಬೇಕೆಂಬ ಬೇಡಿಕೆಯು ಹೆಚ್ಚಾಗುತ್ತಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಈಗಾಗಲೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಕಾರವಾರಕ್ಕೆ ವಿಸ್ತರಣೆ ಮಾಡುವಂತೆ ಕೋರಿದ್ದಾರೆ. ಮೈಸೂರು ಮತ್ತು ಗೋವಾದ ಎರಡು ಜನಪ್ರಿಯ ಪ್ರವಾಸಿ ತಾಣಗಳ ನಡುವೆ ಸಂಪರ್ಕವನ್ನು ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಮೈಸೂರು ಗ್ರಾಹಕ ಪರಿಷತ್ತಿನ ಯೋಗೇಂದ್ರ ಸ್ವಾಮಿ, ವಾಸ್ಕೋ-ಡ-ಗಾಮಾ ತನಕ ರೈಲು ಸೇವೆಯ ವಿಸ್ತರಣೆಯಾದರೆ ನೈಋತ್ಯ ರೈಲ್ವೆ ಮತ್ತು ಪ್ರಯಾಣಿಸುವ ಸಾರ್ವಜನಿಕರಿಗೆ ಗೆಲುವು ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಕರಾವಳಿ ಭಾಗಗಳಿಗೆ ಮೈಸೂರು ನೇರಸಂಪರ್ಕ ಹೊಂದಿಲ್ಲ;
ಹಿಂದೆ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್ಸಿಎಲ್) ಮೈಸೂರು ಮೂಲಕ ರೈಲು ಸಂಖ್ಯೆ 16523/524 ಬೆಂಗಳೂರು-ಕಾರವಾರ ರಾತ್ರಿ ಎಕ್ಸ್ಪ್ರೆಸ್ ರೈಲನ್ನು ಎರಡು ವರ್ಷ ರದ್ದುಗೊಳಿಸಿದ ನಂತರ ಉಡುಪಿ, ಕೊಲ್ಲೂರು, ಮುರ್ಡೇಶ್ವರ, ಗೋಕರ್ಣ ಸೇರಿದಂತೆ ಕರಾವಳಿಯ ಇತರ ಭಾಗಗಳೊಂದಿಗೆ ಮೈಸೂರು ನೇರ ಸಂಪರ್ಕವನ್ನು ಹೊಂದಿಲ್ಲ.
ಅಗತ್ಯವಿದ್ದರೆ, ನೈಋತ್ಯ ವಿಭಾಗದ ರೈಲು ಸಂಖ್ಯೆ 16585/586 ಮತ್ತು ರೈಲು ಸಂಖ್ಯೆ 17309/310 ಯಶವಂತಪುರ-ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್ಪ್ರೆಸ್ ನಡುವೆ ರೇಕ್ ಹಂಚಿಕೆಯನ್ನು ಮಾಡಬಹುದು.
ವಾಸ್ಕೋ-ಯಶವಂತಪುರ ಎಕ್ಸ್ಪ್ರೆಸ್ನ ರೇಕ್ ಬೆಳಿಗ್ಗೆ 5 ರಿಂದ ರಾತ್ರಿ 10.25 ರವರೆಗೆ ನಿಷ್ಕ್ರಿಯವಾಗಿರುತ್ತದೆ ಮತ್ತು ಅದನ್ನು ಮೈಸೂರು ಸೇವೆಗೆ ಬಳಸಿಕೊಳ್ಳಬಹುದು. ವಿಸ್ತರಣೆಯು ಆರು ದಿನಗಳ ಬದಲಿಗೆ ವಾರದ ಏಳು ದಿನವೂ ಸೇವೆ ನೀಡಬಹುದು ಎಂದು ಮೈಸೂರು ಗ್ರಾಹಕ ಪರಿಷತ್ತಿನ ಯೋಗೇಂದ್ರ ಸ್ವಾಮಿ ಹೇಳಿದರು.
Weekly six days train service to start from Mangalore to Bangalore via Mysuru. The order has been passed from the central railway department.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm