ಬ್ರೇಕಿಂಗ್ ನ್ಯೂಸ್
18-08-22 06:08 pm HK News Desk ಕರ್ನಾಟಕ
ಬಾಗಲಕೋಟೆ, ಆಗಸ್ಟ್ 18: ತನ್ನ ಅತ್ಯುತ್ತಮ ಮೈಮಾಟ, ಚಾಣಾಕ್ಷತನ, ವೇಗವಾಗಿ ಓಡುವ ಛಾತಿಯಂಥ ಹಲವು ವಿಶೇಷತೆ ಹೊಂದಿರುವ ಮುಧೋಳ ಶ್ವಾನ ಇದೀಗ ಮತ್ತೊಂದು ಗರಿ ತನ್ನ ಮುಡಿಗೇರಿಸಿಕೊಂಡಿದೆ.
ಮುಧೋಳ ತಾಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ|ಸುಶಾಂತ ಹಂಡಗೆ ಈ ವಿಷಯ ದೃಢಪಡಿಸಿದ್ದು, ಏ.25ರಂದು ಮುಧೋಳ ತಳಿಯ ಎರಡು ತಿಂಗಳ ವಯಸ್ಸಿನ ಎರಡು ಶ್ವಾನ ಮರಿಗಳನ್ನು ಕೇಂದ್ರದ ಎನ್ಎಸ್ಜಿ ಪಡೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷತೆ ಏನು? ;
ಭಾರತದ ದೇಶೀಯ ತಳಿ ಹಾಗೂ ವಿದೇಶಿ ತಳಿಯ ಶ್ವಾನಗಳಿಗೆ ಹೋಲಿಸಿದರೆ ಮುಧೋಳ ಶ್ವಾನ ಹಲವು ವಿಶೇಷತೆ ಹೊಂದಿದೆ. ಅತ್ಯಂತ ತೆಳುವಾದ ಮೈಕಟ್ಟು (ಬೇರೆ ಶ್ವಾನಕ್ಕೆ ಹೋಲಿಸಿದರೆ ತೂಕದಲ್ಲಿ ಕಡಿಮೆ), ಗಂಟೆಗೆ 50 ಕಿಮೀ ಓಡಬಲ್ಲ, ಮೂರು ಕಿಮೀ ದೂರ (ಬೇರೆ ನಾಯಿಗಳು 1 ಕಿಮೀ ಮಾತ್ರ ಸಾಮರ್ಥ್ಯ ಹೊಂದಿವೆ)ದಿಂದಲೇ ವಾಸನೆ ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ.
ಬೇರೆ ಶ್ವಾನಗಳು 10ರಿಂದ 12 ವರ್ಷ ಆಯುಷ್ಯ ಹೊಂದಿದ್ದರೆ, ಮುಧೋಳ ಶ್ವಾನ 12ರಿಂದ 15 ವರ್ಷ ಆಯುಷ್ಯ ಹೊಂದಿದೆ. ಅತ್ಯಂತ ವಿರಳ ಹಾಗೂ ವಿಶೇಷವಾದ ಈ ಮೂಧೋಳ ಶ್ವಾನವನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇಂತಹ ವಿಶಿಷ್ಟ ಶ್ವಾನ ಸಂತತಿ ಉಳಿಸಿ-ಬೆಳೆಸುವ ಉದ್ದೇಶದಿಂದಲೇ 2007-08ರಲ್ಲಿ ಮುಧೋಳದಲ್ಲಿ ಶ್ವಾನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ.

ಪ್ರಧಾನಿ ಮೋದಿ 2020ರಲ್ಲಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಈ ಮುಧೋಳ ಶ್ವಾನಗಳ ಬಗ್ಗೆ ಪ್ರಸ್ತಾಪಿಸಿದ್ದರು. ಈ ಹಿಂದೆ ಎನ್ಎಸ್ಜಿ ಪಡೆ, ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಮುಧೋಳ ಶ್ವಾನ ಇದೀಗ ಪ್ರಧಾನಿ ಮೋದಿ ಭದ್ರತೆಗೂ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಮುಧೋಳ ಶ್ವಾನ ಸಂಶೋಧನಾ ಕೇಂದ್ರ ಸ್ಥಾಪನೆಗೆ ವಿಶೇಷ ಕಾಳಜಿ ವಹಿಸಿರುವ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
News reports on Thursday (August 18) said Mudhol hounds, a breed of hunting dogs native to north Karnataka, could be inducted into the Special Protection Group (SPG), the elite force protecting the Prime Minister of India.
18-01-26 03:34 pm
Bangalore Correspondent
ಬ್ಯಾನರ್ ಗಲಾಟೆ ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ಬ...
17-01-26 08:02 pm
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
18-01-26 08:20 pm
HK News Desk
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
18-01-26 09:58 pm
Mangalore Correspondent
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm