ಬ್ರೇಕಿಂಗ್ ನ್ಯೂಸ್
13-07-22 11:41 am Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 13: ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತಕ್ಕೆ ಎಳ್ಳುನೀರು ಬಿಟ್ಟು ಪರ್ಯಾಯವಾಗಿ ಅಸ್ತಿತ್ವಕ್ಕೆ ತರಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಆರಂಭಗೊಂಡ ಬಳಿಕ ಇದುವರೆಗೂ ಕೇವಲ ದಾಳಿಗಷ್ಟೇ ಸೀಮಿತ ಆಗಿರುವುದು ಕಂಡುಬಂದಿದೆ. ಆರು ವರ್ಷಗಳಲ್ಲಿ ರಾಜ್ಯದಾದ್ಯಂತ 2,121 ಎಫ್ಐಆರ್ ದಾಖಲಾದರೂ ಶಿಕ್ಷೆಯಾಗಿರುವುದು ಕೇವಲ 22 ಮಂದಿಗೆ ಮಾತ್ರ!
ಎಸಿಬಿ ಹೆಚ್ಚಿನ ಪ್ರಕರಣಗಳಲ್ಲಿ ದಾಳಿಗಷ್ಟೇ ಸೀಮಿತವಾಗಿದ್ದು, ಸಣ್ಣ ಪುಟ್ಟ ಟ್ರ್ಯಾಪ್ ಕೇಸ್ಗಳಲ್ಲಿ ಮಾತ್ರ ಚಾರ್ಜ್ಶೀಟ್ ಸಲ್ಲಿಸಿದೆ. ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಗಳಿಕೆ ಪ್ರಕರಣಗಳಲ್ಲಿ ದೊಡ್ಡ ದೊಡ್ಡ ಭ್ರಷ್ಟರ ಕೋಟೆಗೆ ಲಗ್ಗೆ ಇರಿಸಿದರೂ ಒಂದೇ ಒಂದು ಪ್ರಕರಣದಲ್ಲೂ ಚಾರ್ಜ್ಶೀಟ್ ಸಲ್ಲಿಸಿಲ್ಲ. ಎಸಿಬಿ ಸ್ಥಾಪನೆಯಾದ 2016 ರಿಂದ ಇದುವರೆಗೆ 2,121 ಪ್ರಕರಣಗಳ ತನಿಖೆ ನಡೆಸಲಾಗಿದೆ. ಈ ಪೈಕಿ 99 ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಕೋರ್ಟ್ಗೆ “ಬಿ’ ವರದಿ ಸಲ್ಲಿಸಲಾಗಿದೆ. 70 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು, ಶೇ.3ರಷ್ಟು ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ.
9 ಪ್ರಕರಣದಲ್ಲಿ ಆರೋಪಿಗಳು ತಮ್ಮ ಆರೋಪದಿಂದ ಮುಕ್ತಿ ಪಡೆದಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಎಸಿಬಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸದೇ ಇದ್ದುದರಿಂದ ಕೋರ್ಟಿನಲ್ಲಿ ಬಿದ್ದು ಹೋಗಿವೆ. 39 ಪ್ರಕರಣಗಳಲ್ಲಿ ಈ ರೀತಿ ನ್ಯಾಯಾಲಯದಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದಾರೆ.
ಭ್ರಷ್ಟಾಚಾರದಲ್ಲಿ ತೊಡಗಿದ್ದ 1,473ಕ್ಕೂ ಅಧಿಕ ಜನರನ್ನು ಬಂಧಿಸಿದ್ದರೂ ಬಹುತೇಕ ಮಂದಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. 682ಕ್ಕೂ ಅಧಿಕ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. 2016ರಿಂದ ಇದುವರೆಗೆ ಎಸಿಬಿ ದಾಳಿಗೊಳಗಾದ 1,336 ಮಂದಿ ಸರಕಾರಿ ನೌಕರರು ಸೇವೆಯಿಂದ ತಾತ್ಕಾಲಿಕ ಅಮಾನತು ಮಾತ್ರ ಆಗಿದ್ದಾರೆ. 85ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಎಸಿಬಿ ತನಿಖೆಗೆ ವಿವಿಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತರಲಾಗಿದೆ. 763 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ. 480ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿ ಎಸಿಬಿ ತನಿಖೆ ನಡೆಸುವುದಕ್ಕೆ ಸರಕಾರವೇ ಅಡ್ಡಿಯಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಸಿಬಂದಿಯ ಮೇಲಿನ ತನಿಖೆಗೆ ಅನುಮತಿಯನ್ನೇ ನೀಡದೆ ಅಸಹಕಾರ ತೋರಿದೆ. ಆಮೂಲಕ ಭ್ರಷ್ಟರ ಬೆನ್ನಿಗೆ ನಿಂತಿದೆ.
2016ರಲ್ಲಿ ಒಂದು ವರ್ಷದಲ್ಲಿ 153 ಪ್ರಕರಣಗಳು ಎಸಿಬಿ ಮೆಟ್ಟಿಲೇರಿದ್ದವು. 2017ಕ್ಕೆ ಇದರ ಪ್ರಮಾಣ 289ಕ್ಕೆ ಏರಿತ್ತು. 2018ರಲ್ಲಿ 378, 2019ರಲ್ಲಿ 379, 2020ರಲ್ಲಿ 271 ಎಫ್ಐಆರ್ ದಾಖಲಾಗಿತ್ತು. 2021-22ರಲ್ಲಿ 281ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆರು ವರ್ಷಗಳಲ್ಲಿ ಇಷ್ಟೆಲ್ಲ ಎಫ್ಐಆರ್ ದಾಖಲಾದರೂ, ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು ಬಿಟ್ಟರೆ ಪೂರಕ ಸಾಕ್ಷ್ಯ ಸಂಗ್ರಹಿಸಿ ಚಾರ್ಜ್ ಶೀಟ್ ದಾಖಲಿಸಲು ಮುಂದಾಗಿಲ್ಲ.
ಈ ನಡುವೆ, ಎಸಿಬಿಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿದೆ. ಕ್ಲಾಸ್-1 ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳ ವಿರುದ್ಧ 391 ಪ್ರಕರಣ ದಾಖಲಾಗಿವೆ ಎಂದು ಎಸಿಬಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಎಸಿಬಿ ಕೈ ಕಟ್ಟಿ ಹಾಕಿದ್ದೇ ಸರಕಾರ !
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಾಯುಕ್ತಕ್ಕಿದ್ದ ಅಧಿಕಾರವನ್ನು ಮೊಟಕುಗೊಳಿಸಿ 2016ರಲ್ಲಿ ಕಾಂಗ್ರೆಸ್ ಸರಕಾರ ಹೊಸತಾಗಿ ಎಸಿಬಿಯನ್ನು ಪ್ರಾರಂಭಿಸಿತ್ತು. ಲೋಕಾಯುಕ್ತ ಅಧಿಕಾರಿಗಳಿಗೆ ಸ್ವತಂತ್ರವಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಇತ್ತು. ಆದರೆ ಎಸಿಬಿ ಅಧಿಕಾರಿಗಳು ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಗೃಹ ಸಚಿವರ ಸಲಹೆಗಾರರು ಸೂಚಿಸಿದಂತೆ ಕೆಲಸ ಮಾಡಬೇಕಿದೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಮತ್ತು ಭ್ರಷ್ಟಾಚಾರ ತಡೆ ಅಧಿನಿಯಮ 1988 ಎರಡು ಪ್ರತ್ಯೇಕ ಶಾಸನಗಳಡಿ ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿತ್ತು. ಆದರೆ ಎಸಿಬಿ ಸಂಸ್ಥೆಯನ್ನು ಸರಕಾರದ ಅಧೀನದಡಿ ಇರುವಂತೆ ಮಾಡಿದ್ದು ಸ್ವತಂತ್ರವಾಗಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಎಸಿಬಿ ಅನ್ನೋದು ಹಲ್ಲಿಲ್ಲದ ಹಾವಿನಂತೆ ಬಲ ಕಳಕೊಂಡಿದೆ.
ಎಸಿಬಿ ತನಿಖೆಗೆ ಹಿನ್ನಡೆ ಏಕೆ ?
ಪ್ರಮುಖ ಪ್ರಕರಣಗಳಲ್ಲಿ ಎಸಿಬಿ ತನಿಖೆಗೆ ಸರಕಾರದ ಮಂಜೂರಾತಿ ಸಿಗುವುದೇ ವಿಳಂಬವಾಗುತ್ತಿದೆ. ಬೃಹತ್ ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ ಬಹುತೇಕ ಸರಕಾರಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ತಡೆಯಾಜ್ಞೆ ತಂದಿದ್ದಾರೆ. ಅಲ್ಲದೆ, ದಾಳಿಗೊಳಗಾದ ಪ್ರಭಾವಿ ಭ್ರಷ್ಟ ಸರಕಾರಿ ಅಧಿಕಾರಿಗಳು ರಾಜಕಾರಣಿಗಳ ಮೊರೆ ಹೋಗಿ ಸರಕಾರದ ಮೂಲಕ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವುದರಿಂದ ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಣ್ಣ ಪುಟ್ಟ ಸಾಕ್ಷ್ಯ ಸಿಗದ ಪ್ರಕರಣಗಳಲ್ಲೂ ಎಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಹಾಕುತ್ತಿರುವ ಗಂಭೀರ ಆರೋಪವಿದೆ. ಮತ್ತೂಂದೆಡೆ ಎಸಿಬಿ ಬಲೆಗೆ ಬಿದ್ದ ಕ್ಲಾಸ್-1 ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲು ಸರಕಾರ ನಿರಾಕರಿಸುತ್ತಿದ್ದು ಎಸಿಬಿ ತನಿಖೆಗೇ ಹಿನ್ನೆಡೆಯಾಗಿದೆ.
Amid 2121 FIR filed so far by ACB only Only 22 were punished in Karnataka. Acb has filed FIR only one petty corruption but there is no FIR found on persons who have looted crores in the name of corruption.
23-04-25 01:06 pm
Bangalore Correspondent
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm