ಬ್ರೇಕಿಂಗ್ ನ್ಯೂಸ್
08-07-22 02:38 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 8 : ಕೊಲೆ ಪ್ರಕರಣ ಒಂದರಲ್ಲಿ ಬಾಂಗ್ಲಾದೇಶದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ತಲೆಮರೆಸಿಕೊಂಡು ಬಂದು ಬೆಂಗಳೂರಿನಲ್ಲಿ ಅವಿತುಕೊಂಡಿದ್ದಲ್ಲದೆ, ಕ್ಯಾಬ್ ಚಾಲಕನಾಗಿ ದುಡಿಯುತ್ತಿದ್ದ ಪ್ರಕರಣವನ್ನು ಕೊಲ್ಕತ್ತಾ ಪೊಲೀಸರು ಪತ್ತೆ ಮಾಡಿದ್ದಾರೆ. ಬಾಂಗ್ಲಾದೇಶ ಮೂಲದ ಫೈಸಲ್ ಅಹ್ಮದ್ ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಫೈಸಲ್ ಅಹ್ಮದ್ ಬಾಂಗ್ಲಾದೇಶದ ಸಿಲ್ಲೆಟ್ ನಗರದ ನಿವಾಸಿಯಾಗಿದ್ದು ಅಲ್ ಖೈದಾ ಉಗ್ರರ ಪರವಾಗಿ ಕೆಲಸ ಮಾಡುತ್ತಿದ್ದ. 2015 ರ ಮೇ 12 ರಂದು ಸಿಲ್ಲೆಟ್ ನಗರದಲ್ಲಿ ಲೇಖಕ ಮತ್ತು ಬ್ಲಾಗರ್ ಆಗಿ ಗುರುತಿಸಿಕೊಂಡಿದ್ದ ಅನಂತ್ ವಿಜಯ್ ದಾಸ್ ಎಂಬವರನ್ನು ಕೊಲೆಗೈದಿದ್ದ. ಪ್ರಕರಣದಲ್ಲಿ ಇತರ ಮೂವರು ಸೇರಿದಂತೆ ನಾಲ್ವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದರು. ಆನಂತರ ಜಾಮೀನಿನಲ್ಲಿ ಹೊರಬಂದಿದ್ದ ಫೈಸಲ್ ಅಹ್ಮದ್, ಪೊಲೀಸರ ಕಣ್ತಪ್ಪಿಸಿ ಭಾರತ ಪ್ರವೇಶ ಮಾಡಿದ್ದ. ಪಶ್ಚಿಮ ಬಂಗಾಳ ಮೂಲಕ ಭಾರತಕ್ಕೆ ಬಂದಿದ್ದಲ್ಲದೆ, ನೇರವಾಗಿ ಬೆಂಗಳೂರು ನಗರಕ್ಕೆ ಬಂದು ಕ್ಯಾಬ್ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ಫೈಸಲ್ ಅಹ್ಮದ್ ತಾನು ಭಾರತೀಯ ಎಂದು ತೋರಿಸಿಕೊಳ್ಳಲು ನಕಲಿ ದಾಖಲೆ ಪತ್ರಗಳನ್ನೂ ತಯಾರಿಸಿದ್ದ. ಮಿಜೋರಾಂ ವಿಳಾಸದಲ್ಲಿ ಪಾಸ್ ಪೋರ್ಟ್ ಪಡೆದಿದ್ದ. ವೋಟರ್ ಐಡಿ ಪಡೆಯಲು ಅಸ್ಸಾಂ ಅಡ್ರಸ್ ನೀಡಿದ್ದ. ಈ ನಡುವೆ, ಬಾಂಗ್ಲಾದೇಶ ಕೋರ್ಟ್ ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸಿ ಫೈಸಲ್ ಅಹ್ಮದ್ ಸೇರಿ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಬಗ್ಗೆ ತಿಳಿದಿದ್ದ ಫೈಸಲ್ ಅಹ್ಮದ್ ಬೆಂಗಳೂರಿಗೆ ಬಂದು ನೆಲೆಸಿದ್ದಲ್ಲದೆ ತನ್ನ ನಕಲಿ ದಾಖಲೆ ಪತ್ರಗಳನ್ನು ತೋರಿಸಿ ಕ್ಯಾಬ್ ಚಾಲಕನ ಕೆಲಸ ಗಿಟ್ಟಿಸಿಕೊಂಡಿದ್ದ.
ಇತ್ತೀಚೆಗೆ ಬಾಂಗ್ಲಾ ಪೊಲೀಸರಿಗೆ ಫೈಸಲ್ ಅಹ್ಮದ್ ದೂರದ ಬೆಂಗಳೂರಿನಲ್ಲಿ ನೆಲೆಸಿರುವ ಮಾಹಿತಿ ದೊರಕಿತ್ತು. ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲಿ ಕೊಲ್ಕತ್ತಾ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೆ, ವ್ಯಕ್ತಿಯನ್ನು ಬಂಧಿಸಿ ಗಡಿಪಾರು ಮಾಡುವಂತೆ ಕೋರಿದ್ದರು. ಕೊಲ್ಕತ್ತಾ ಪೊಲೀಸರು ಬೆಂಗಳೂರಿಗೆ ಬಂದು ತನಿಖೆ ನಡೆಸಿದ್ದು ಇಲ್ಲಿನ ಪೊಲೀಸರ ನೆರವು ಪಡೆದು ಅವಿತುಕೊಂಡಿದ್ದನ್ನು ಪತ್ತೆಹಚ್ಚಿದ್ದರು.
ಬೆಂಗಳೂರು ಪೊಲೀಸರು ಫೋಟೋ ಮತ್ತಿತರ ದಾಖಲೆ ಪತ್ರಗಳನ್ನು ಅನುಸರಿಸಿ ತನಿಖೆ ನಡೆಸಿದ್ದು ಆರೋಪಿ ಫೈಸಲ್ ಅಹ್ಮದ್ ನನ್ನ ಜುಲೈ 1 ರಂದು ಬಂಧಿಸಿದ್ದಾರೆ. ಫೈಸಲ್ ಅಹ್ಮದ್ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿದ್ದಲ್ಲದೆ, ಮದ್ರಸಾಕ್ಕೆ ಹೋಗಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ. ಕೇಂದ್ರೀಯ ತನಿಖಾ ತಂಡಗಳು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು ಸ್ಥಳೀಯ ಜನರ ಜೊತೆಗೆ ಯಾವ ರೀತಿ ಇದ್ದ. ಅಲ್ ಖೈದಾ ಪರವಾಗಿ ಚಟುವಟಿಕೆ ನಡೆಸುತ್ತಿದ್ದನೇ ಎಂಬ ಬಗ್ಗೆ ತನಿಖೆ ನಡೆಸಲಿದ್ದಾರೆ.
The Kolkata police along with South East Division of Bengaluru police and their counterpart from Bangladesh in a joint operation have arrested a Bangladeshi national here who was on the run after being awarded the death penalty in connection with a murder case, officials said on Thursday.The accused has been identified as Faisal Ahmed. The police said that the accused allegedly has links with terror outfit Al-Qaeda and was on the run after murdering a writer and a blogger Ananth Vijaya Das in Sylhet city in Bangladesh in May 12, 2015.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 10:50 pm
Mangalore Correspondent
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
03-07-25 11:03 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm
Massive Scam, Mangalore City Corporation, Fak...
02-07-25 12:24 pm