ಬ್ರೇಕಿಂಗ್ ನ್ಯೂಸ್
06-07-22 08:49 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 6: ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ಭ್ರಷ್ಟಾಚಾರ ಪ್ರಕರಣ ಮುಚ್ಚಿ ಹಾಕಲು 50 ಲಕ್ಷ ರೂಪಾಯಿ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ನೂರಾರು ಕೋಟಿ ಅದಲು ಬದಲಾಗಿವೆ. 200ಕ್ಕೂ ಹೆಚ್ಚು ಅಭ್ಯರ್ಥಿಗಳು 60ರಿಂದ 80 ಲಕ್ಷ ದಕ್ಷಿಣೆ ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿ ಹೋಗಿದೆ, ಯಾರೆಲ್ಲರ ತಿಜೋರಿಗೆ ಹೋಗಿವೆ, ಯಾವೆಲ್ಲ ಸಚಿವರು ಭಾಗಿಯಾಗಿದ್ದಾರೆ ಅನ್ನೋದನ್ನು ಮುಖ್ಯಮಂತ್ರಿಯೇ ಹೇಳಬೇಕು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಸಿಎಂ ಬೊಮ್ಮಾಯಿ ಅವರನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ನಾನು ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ. ಎಸಿಬಿ ಅಧಿಕಾರಿ ಲಂಚ ಪಡೆದಿರುವುದಕ್ಕೆ ನನ್ನಲ್ಲಿ ದಾಖಲೆ ಇದೆ. ನನ್ನ ಮಾತುಗಳನ್ನು ಸಾಬೀತು ಪಡಿಸಲು ಸಾಕ್ಷ್ಯಗಳಿವೆ. ರಾಜ್ಯ ಸರಕಾರ ಕೇವಲ ಸಣ್ಣ ಮಟ್ಟಿನ ಅಧಿಕಾರಿಗಳನ್ನು ಬಂಧಿಸಿ, ತಿಮಿಂಗಿಲ ಹಿಡಿದಿದ್ದಾಗಿ ಪೋಸು ಕೊಡುವ ಬದಲು ಪಿಎಸ್ಐ ಹಗರಣದ ಕಿಂಗ್ ಪಿನ್ ಗಳನ್ನು ಬಯಲಿಗೆ ತರಬೇಕು ಎಂದು ಆಗ್ರಹ ಮಾಡಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರು ಎಸಿಬಿ ಕಾರ್ಯ ನಿರ್ವಹಣೆ ಬಗ್ಗೆ ಛಾಟಿ ಬೀಸಿದ ಬಳಿಕ ಒಬ್ಬರು ಐಎಎಸ್ ಮತ್ತು ಇನ್ನೊಬ್ಬರು ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ, ಅಧಿಕಾರಿಗೆ 50 ಲಕ್ಷ ರೂಪಾಯಿ ಯಾರು ಕೊಟ್ಟಿದ್ದು, ಯಾರು ತಗೊಂಡಿದ್ದು ಇತ್ಯಾದಿ ವಿಚಾರಗಳನ್ನು ಮುಖ್ಯಮಂತ್ರಿ ರಾಜ್ಯದ ಜನತೆಯ ಮುಂದಿಡಬೇಕು. ಹಣದ ಮೂಲವನ್ನೂ ಪತ್ತೆ ಮಾಡಬೇಕು. ಇವೆಲ್ಲದಕ್ಕೂ ನನ್ನಲ್ಲಿ ಸಾಕ್ಷ್ಯ ಇದೆ ಎಂದರು ಎಚ್ಡಿಕೆ.
ಪಿಎಸ್ಐ ಹಗರಣದಲ್ಲಿ 25 ಮಂದಿ ಅಭ್ಯರ್ಥಿಗಳು ತಲಾ 25 ಲಕ್ಷ ರೂಪಾಯಿ ನೀಡಿದ್ದಾರೆ. 200-300 ಅಭ್ಯರ್ಥಿಗಳು 60ರಿಂದ 80 ಲಕ್ಷದಷ್ಟು ಲಂಚವನ್ನು ವಿವಿಧ ಹಂತಗಳಲ್ಲಿ ನೀಡಿದ್ದಾರೆ. ಒಟ್ಟು ಹಣ ಎಷ್ಟು ಕೋಟಿಗಳಾದವು. ಇದಕ್ಕೆಲ್ಲ ಲೆಕ್ಕ ಇದೆಯೇ.. ಯಾರೆಲ್ಲ ಹಣವನ್ನು ಪಡೆದಿದ್ದಾರೆ, ಯಾವೆಲ್ಲ ಸಚಿವರು ಶಾಮೀಲಾಗಿದ್ದಾರೆ, ಎಲ್ಲವೂ ಹೊರಗೆ ಬರಲಿ. ತನಿಖೆ ಹೆಸರಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡುವುದು ಬೇಡ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಒಬ್ಬ ಅಧಿಕಾರಿಗೆ ಸೇರಿದ ಯಶವಂತಪುರದ ಮನೆಯಲ್ಲಿ 5 ಕೋಟಿ ರೂಪಾಯಿ ಪತ್ತೆಯಾಗಿತ್ತು. ಅಂತಹ ಅಧಿಕಾರಿಯನ್ನು ಬಿಜೆಪಿ ಸರಕಾರ ಪ್ರಮುಖ ಸ್ಥಳಕ್ಕೆ ನಿಯೋಜಿಸಿ ರಕ್ಷಣೆ ಮಾಡುತ್ತಿದೆ. ಹಳೆಯದನ್ನೆಲ್ಲ ಮರೆತು ಬಿಟ್ಟಂತೆ ವರ್ತಿಸುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಅವಧಿಯಲ್ಲಿ ಏನಾಗಿತ್ತೋ ಅದೇ ಬಿಜೆಪಿಯಲ್ಲೂ ಆಗುತ್ತಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ನಂಬಿಕೆ ಕಳಕೊಂಡಿವೆ ಎಂದರು.
ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲದಾಗಿದೆ. ವಾಸ್ತು ಗುರೂಜಿಯನ್ನು ಹುಬ್ಬಳ್ಳಿಯ ಹೆಸರಾಂತ ಹೊಟೇಲ್ ನಲ್ಲಿ ಹಾಡಹಗಲೇ ಕೊಲೆ ಮಾಡಲಾಗಿದೆ. ಅಷ್ಟು ಭದ್ರತೆ ಇರುವ ಹೊಟೇಲ್ ಒಳಗಡೆ ಚೂರಿ ತಂದು ಕೊಲೆ ಮಾಡಲು ಹೇಗೆ ಸಾಧ್ಯ. ಪೊಲೀಸ್ ಇಲಾಖೆ ಒಳಗಿನ ಭ್ರಷ್ಟಾಚಾರದಿಂದಾಗಿ ಇದೆಲ್ಲ ಆಗುತ್ತಿದೆ. ರಾಜ್ಯ ಸರಕಾರ ಪೊಲೀಸರ ಮೇಲೆ ನಿಯಂತ್ರಣ ಕಳಕೊಂಡಿದೆ. ಪೊಲೀಸರು ಹಣ ಮಾಡುವುದರಲ್ಲಿ ಬಿಝಿಯಾಗಿದ್ದಾರೆ. ತಮ್ಮ ಕರ್ತವ್ಯ ಮರೆತಿದ್ದಾರೆ. ಹಾಗಾಗಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎಂದು ಎಚ್ಡಿಕೆ ಕಿಡಿಕಾರಿದರು.
JD(S) legislature party leader and former chief minister H D Kumaraswamy has alleged that a SP rank officer of State’s Anti-Corruption Bureau (ACB) was paid Rs 50 lakh as bribe to bury a corruption case and urged Chief Minister Basavaraj Bommai to expose the kingpins involved in the multi-crore police sub-inspectors recruitment scam."I am not making wild allegations or firing in the air. I have documents to prove my charge. Instead taking action and arresting small fry, the government should go after the kingpins involved in the PSI scam,’’ he said speaking to media persons on Wednesday.
23-04-25 01:06 pm
Bangalore Correspondent
ಒಂದೇ ಸಮುದಾಯವನ್ನು ಶಿಕ್ಷಣ, ಉದ್ಯೋಗ ಕಾರಣಕ್ಕೆ ಪ್ರತ...
22-04-25 10:15 pm
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm