ಬ್ರೇಕಿಂಗ್ ನ್ಯೂಸ್
05-07-22 09:32 am Hk Desk, Bengaluru ಕರ್ನಾಟಕ
ಬೆಂಗಳೂರು, ಜುಲೈ 5: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಜಮೀರ್ ಅಹಮ್ಮದ್ ಸೇರಿದ ಮನೆ, ಕಚೇರಿ ಸೇರಿ ಐದು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಂಬೂ ಬಜಾರ್ ಬಳಿಯ ಜಮೀರ್ ಮನೆ, ಸದಾಶಿವನಗರ ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಚಾಮರಾಜಪೇಟೆ ನ್ಯಾಷನಲ್ ಟ್ರಾವೆಲ್ಸ್ ಹಾಗೂ ಬನಶಂಕರಿಯ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಎಸಿಬಿ ಎಸ್ಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ದಾಳಿ ನಡೆದಿದ್ದು ಜಮೀರ್ ಕಂಟೋನ್ಮೆಂಟ್ ನಿವಾಸದ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಕಳೆದ ಬಾರಿ ಇಡಿ ದಾಳಿ ವೇಳೆ ಜಮೀರ್ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಈ ಬಾರಿ ಸ್ಥಳದಲ್ಲಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.


ಜನಪ್ರತಿನಿಧಿಗಳು ಪ್ರತೀ ವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕೆಂಬ ನಿಯಮ ಇದೆ. ಜಮೀರ್ ತನ್ನ ಮನೆ ಮೇಲೆ ಇಡಿ ದಾಳಿ ನಡೆದಾಗ ಆಸ್ತಿ ವಿವರದ ದಾಖಲೆ ನೀಡಿದ್ದರು. ಆದ್ರೆ ಜಾರಿ ನಿರ್ದೇಶನಾಲಯಕ್ಕೂ, ಲೋಕಾಯುಕ್ತಕ್ಕೂ ನೀಡಿದ ಆಸ್ತಿ ವಿವರ ಬೇರೆ ಬೇರೆ ಇತ್ತು ಎನ್ನಲಾಗಿದೆ. ಆಸ್ತಿಯಲ್ಲಿ ವ್ಯತ್ಯಾಸ ಇದೆ ಎಂದು ಎಸಿಬಿಯಿಂದ ದಾಳಿ ನಡೆಸಿರುವ ಬಗ್ಗೆ ಮಾಹಿತಿಯಿದೆ. ಎಸಿಬಿ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮನೆಗೆ ದಾಳಿ ನಡೆಸಲಾಗಿದೆ.
ಎಸಿಬಿ ರಚನೆ ಬಳಿಕ ಸಣ್ಣ ಪುಟ್ಟ ಅಧಿಕಾರಿಗಳನ್ನಷ್ಟೆ ಬೇಟೆಯಾಡಲಾಗಿತ್ತು. ಐಎಎಸ್, ಐಪಿಎಸ್, ಎಂಎಲ್ ಗಳನ್ನಂತೂ ಮುಟ್ಟಿಯೇ ಇರಲಿಲ್ಲ. ಇದೀಗ ಎಂ ಎಲ್ ಎ ಜಮೀರ್ ಮನೆ ಮೇಲೆ ದಾಳಿ ಮಾಡುವ ಮೂಲಕ ಎಸಿಬಿ ಹೊಸತಾಗಿ ಬಿಸಿ ಮುಟ್ಟಿಸಿದೆ.
ಎಸಿಬಿ ಕಲೆಕ್ಷನ್ ಸೆಂಟರ್ ಆಗಿದೆ ಅಂತ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಇತ್ತೀಚೆಗೆ ಛೀಮಾರಿ ಹಾಕಿದ್ದರು. ಇದರಿಂದ ಪರೋಕ್ಷವಾಗಿ ಬಿಜೆಪಿ ಸರಕಾರಕ್ಕೆ ಮುಖಕ್ಕೆ ಹೊಡೆದಂತಾಗಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರಕಾರ ಬೆನ್ನು ಬೆನ್ನಿಗೆ ರೇಡ್ ಮಾಡಿ ಅಧಿಕಾರಿಗಳನ್ನು ಕೆಡವಲು ಮುಂದಾಗಿದೆ. ನಿನ್ನೆ ಸಿಐಡಿ ಅಧಿಕಾರಿಗಳು ಐ ಎ ಎಸ್ ಅಧಿಕಾರಿಯನ್ನು ಬಂಧಿಸಿದ್ದರು. ಇಂದು ಎಸಿಬಿ ಅಧಿಕಾರಿಗಳು ಎಂ ಎಲ್ ಎ ಮನೆ ಮೇಲೆ ದಾಳಿ ಮಾಡಿದ್ದಾರೆ. ಈಮೂಲಕ ಬೀಸೋ ದೊಣ್ಣೆಯಿಂದ ಪಾರಾಗುವ ಯತ್ನಕ್ಕೆ ರಾಜ್ಯ ಸರಕಾರ ಮುಂದಾಗಿದೆ.
In fresh trouble for Chamarajpet MLA and Congress leader BZ Zameer Ahmed Khan, the Anti-Corruption Bureau (ACB) on Tuesday raided several of his properties in connection with a disproportionate assets case. A team of 40 officials are conducting simultaneous raids in at least five locations in Bengaluru. The raids are underway at a guesthouse in Sadashivanagar, a flat in Silver Oak apartment, a building housing GK Associates office in Banashankari, National Travels office Kalasipalya and his residence in Bengaluru Cantonment according to the ACB.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm