ಬ್ರೇಕಿಂಗ್ ನ್ಯೂಸ್
12-06-22 02:14 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 12: ಜಯಕರ್ನಾಟಕ ಸಂಘಟನೆಯ ಸ್ಥಾಪಕ, ಒಂದು ಕಾಲದ ಭೂಗತ ಡಾನ್ ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ನಡೆದಿದೆ ಎಂಬುದಾಗಿ ವದಂತಿ ಹರಡಿದೆ. ಈ ಬಗ್ಗೆ ಖುದ್ದಾಗಿ ಗುಣರಂಜನ್ ಶೆಟ್ಟಿ ಪೊಲೀಸ್ ದೂರನ್ನಾಗಲೀ, ಮಾಧ್ಯಮಗಳಿಗೆ ಹೇಳಿಕೆಯನ್ನಾಗಲೀ ನೀಡಿಲ್ಲ. ಆದರೆ ಜಯ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಗುಣರಂಜನ್ ಶೆಟ್ಟಿಗೆ ಪೊಲೀಸ್ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟಿ, ಪುತ್ತೂರು ಮೂಲದ ಅನುಷ್ಕಾ ಶೆಟ್ಟಿ ಸಹೋದರನಾಗಿರುವ ಗುಣರಂಜನ್ ಶೆಟ್ಟಿ ಮೊದಲಿನಿಂದಲೂ ಮುತ್ತಪ್ಪ ರೈ ಜೊತೆಗೇ ಗುರುತಿಸಿಕೊಂಡಿದ್ದವರು. ಆದರೆ ಎರಡು ವರ್ಷಗಳ ಹಿಂದೆ ಮುತ್ತಪ್ಪ ರೈ ಸಾವನ್ನಪ್ಪಿದ ಬಳಿಕ ಕುಟುಂಬದಲ್ಲಿ ಆಸ್ತಿ ಜಗಳ ಉಂಟಾಗಿದ್ದ ಬಗ್ಗೆ ಮಾಹಿತಿಗಳಿದ್ದವು. ಇಬ್ಬರು ಮಕ್ಕಳು ಆಸ್ತಿಗಾಗಿ ಜಗಳ ಮಾಡಿಕೊಂಡಿದ್ದಾರೆ. ಎರಡನೇ ಪತ್ನಿಯೂ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಅನ್ನುವ ಸುದ್ದಿಗಳಿದ್ದವು. ಇದೀಗ ಮತ್ತೆ ಆಸ್ತಿ ವಿಚಾರದಲ್ಲಿ ಜಗಳ ನಡೆದಿದೆಯೋ ಅನ್ನುವಂತೆ ವದಂತಿಗಳು ಹರಡಿದ್ದು, ಹಿಂದೆ ಮುತ್ತಪ್ಪ ರೈ ಜೊತೆಗೇ ಖಾಸಾ ಬಳಗದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಮೂಲದ ಮನ್ವಿತ್ ರೈ ವಿರುದ್ಧವೇ ಆರೋಪ ಕೇಳಿಬರುತ್ತಿದೆ.
ಮಂಗಳೂರು, ಪುತ್ತೂರಿನಲ್ಲಿ ಖಾಸಗಿ ಬಾಡಿಗಾರ್ಡ್ ಇಟ್ಟುಕೊಂಡು ಓಡಾಡಿಕೊಂಡಿದ್ದ ಮನ್ವಿತ್ ರೈ ಎರಡು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದ್ದು, ವ್ಯವಹಾರ ನಿಮಿತ್ತ ಅಲ್ಲಿಯೇ ಇದ್ದಾರೆ. ಆದರೆ, ಈಗ ಗುಣರಂಜನ್ ಶೆಟ್ಟಿ ಹತ್ಯೆ ಸಂಚು ವದಂತಿಯಲ್ಲಿ ಮನ್ವಿತ್ ರೈ ಹೆಸರು ಕೇಳಿಬಂದಿದ್ದು ವಿದೇಶಕ್ಕೆ ತೆರಳಿದ ಬಳಿಕ ತನ್ನ ಸಹಚರರ ಮೂಲಕ ಗುಣರಂಜನ್ ಹತ್ಯೆಗೆ ಪ್ಲಾನ್ ಹಾಕಿದ್ದಾನೆ ಎನ್ನುವ ವದಂತಿ ಹರಡಿದೆ. ಆದರೆ ಈ ಯಾವ ಆರೋಪಕ್ಕೂ ಯಾವುದೇ ಆಧಾರಗಳಿಲ್ಲ. ಕೇವಲ ಗುಸು ಗುಸು ಆಧರಿಸಿ ಸುದ್ದಿ ಹರಡಿದ್ದು, ಇದನ್ನೇ ಮುಂದಿಟ್ಟು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗೃಹ ಸಚಿವರನ್ನು ಭೇಟಿಯಾಗಿದ್ದಾರೆ.
ಗುಣರಂಜನ್ ಶೆಟ್ಟಿ ಮತ್ತು ಮನ್ವಿತ್ ರೈ ಇಬ್ಬರು ಕೂಡ ಖಾಸಗಿ ಸೆಕ್ಯುರಿಟಿಯನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ಗುಣರಂಜನ್ ಬೆಂಗಳೂರಿನಲ್ಲಿಯೇ ಇದ್ದು, ಅಲ್ಲಿಯೇ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಬ್ಬರು ಕೂಡ ಮುತ್ತಪ್ಪ ರೈ ಖಾಸಾ ಬಳಗದಲ್ಲಿ ಇದ್ದವರಾಗಿದ್ದು, ಈಗ ಬೇರೆ ಬೇರೆಯಾಗಿದ್ದಾರೆ. ಇದೀಗ ತನ್ನ ವಿರುದ್ಧ ಆರೋಪ ಕೇಳಿಬಂದಿರುವುದರಿಂದ ಮನ್ವಿತ್ ರೈ, ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ತಾನು ವ್ಯವಹಾರ ನಿಮಿತ್ತ ವಿದೇಶಕ್ಕೆ ಬಂದಿದ್ದು, ಹತ್ಯೆ ಸ್ಕೆಚ್ ವಿಚಾರದಲ್ಲಿ ತನ್ನ ಹೆಸರು ಯಾಕೆ ಕೇಳಿಬರುತ್ತಿದೆಯೋ ಗೊತ್ತಿಲ್ಲ. ನನ್ನ ವಿರುದ್ಧ ಇದುವರೆಗೂ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಯಾವುದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿಲ್ಲ. ಅಪರಾಧ ಪ್ರಕರಣಗಳಲ್ಲಿ ಆರೋಪ ಇಲ್ಲದೇ ಇರುವಾಗ ನನ್ನ ಹೆಸರನ್ನು ಯಾಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರದಲ್ಲಿ ಗುಣರಂಜನ್ ಶೆಟ್ಟಿ ಯಾವುದೇ ಮಾತನ್ನು ಆಡಿಲ್ಲ. ಅವರನ್ನು ಸಂಪರ್ಕಿಸಿದರೂ, ಫೋನ್ ರಿಸೀವ್ ಮಾಡಿಲ್ಲ. ಆದರೆ ಇವರ ಸೋದರಿ ತೆಲುಗಿನಲ್ಲಿ ಸ್ಟಾರ್ ನಟಿಯಾಗಿರುವುದರಿಂದ ನಟಿಯ ಸೋದರನಿಗೆ ಸ್ಕೆಚ್ ಎನ್ನುವ ರೀತಿ ಮಾಧ್ಯಮದಲ್ಲಿ ಸುದ್ದಿಯಾಗುತ್ತಿದೆ. ಇವರ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂದು ಯಾರಾದ್ರೂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆಯೇ ಅನ್ನುವುದು ಕೂಡ ದೃಢಪಟ್ಟಿಲ್ಲ. ಆದರೆ ಮುತ್ತಪ್ಪ ರೈ ಆಸ್ತಿ ಹಂಚಿಕೆ ವಿಚಾರದಲ್ಲಿ ಮತ್ತೆ ಕೋಲ್ಡ್ ವಾರ್ ನಡೀತಿದ್ಯಾ ಅನ್ನುವ ಶಂಕೆಯಂತೂ ಮೂಡಿದೆ.
Plan to Murder Gunaranjan Shetty brother of actress Anushka Shetty, Manmith Rai from Puttur has been alleged the master mind behind the conspiracy of planning murder of Gunaranjan sheet. Gunaranjan was very closely associated with Muthappa Rai.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 10:54 pm
Mangalore Correspondent
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm