ಬ್ರೇಕಿಂಗ್ ನ್ಯೂಸ್
29-04-22 09:26 pm Source: Vijaya Karnataka ಡಿಜಿಟಲ್ ಟೆಕ್
ಈಗಾಗಲೇ ಹಲವು ವದಂತಿಗಳಿಂದ ಭಾರೀ ಕುತೂಹಲ ಮೂಡಿಸಿರುವ ಗೂಗಲ್ ಕಂಪೆನಿಯ ಹೊಸ Google Pixel Watch ಸಾಧನವನ್ನು Bluetooth Special Interest Group (SIG) ಪ್ರಮಾಣಿಸಿದೆ. ಗೂಗಲ್ ತನ್ನದೇ ಆಗ Pixel ಸ್ಮಾರ್ಟ್ವಾಚ್ ಅನ್ನು ಅಭಿವೃದ್ಧಿ ಪಡಿಸಿಸುತ್ತಿದ್ದು, Bluetooth Special Interest Group (SIG) ಪ್ರಮಾಣಿಸಿದಂತೆ Pixel ಹೆಸರಿನಲ್ಲಿ ಮೂರು ಮಾದರಿ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಬ್ಲೂಟೂತ್ SIG ನ ವೆಬ್ಸೈಟ್ನಲ್ಲಿನ ಪಟ್ಟಿಯ ಪ್ರಕಾರ, ಗೂಗಲ್ ಪಿಕ್ಸೆಲ್ ಸ್ಮಾರ್ಟ್ವಾಚ್ ಅನ್ನು GWT9R, GBZ4S ಮತ್ತು GQF4C ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಸ್ಮಾರ್ಟ್ವಾಚ್ Wear OS ಸಾಫ್ಟ್ವೇರ್ ಸಂಖ್ಯೆ RWD5.21104.001 ಅನ್ನು ಚಾಲನೆ ಮಾಡುತ್ತಿದೆ ಎಂದು ಪ್ರಮಾಣೀಕರಿಸಲಾಗಿದೆ.
ಬ್ಲೂಟೂತ್ SIG ಗುರಿತಿಸಿದಂತೆ ಇದೇ ಮೊದಲ ಬಾರಿಗೆ Google Pixel Watch ಅಧಿಕೃತ ಮಾಹಿತಿಯು ಸಿಕ್ಕಿದೆ. ಈ ಮಾಹಿತಿಯಲ್ಲಿ ಹೇಳಿರುವಂತೆ ನೂತನ Google Pixel Watch ಸಾಧನವು GWT9R, GBZ4S ಮತ್ತು GQF4C ಮಾದರಿ ಸಂಖ್ಯೆಗಳು, Wear OS ಸಾಫ್ಟ್ವೇರ್ ಸಂಖ್ಯೆ ಮತ್ತು ಬ್ಲೂಟೂತ್ ಆವೃತ್ತಿ 5.2 ಯಂತಹ ಕೆಲವೇ ಕೆಲವು ಮಾಹಿತಿಗಳು ದೊರೆತಿದ್ದು, ಇತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ, ಈ ಹಿಂದಿನ ವರದಿಗಳ ಪ್ರಕಾರ, ನೂತನ ಗೂಗಲ್ ಪಿಕ್ಸೆಲ್ ವಾಚ್ ದುಂಡಾದ ಪರದೆಯನ್ನು ಹೊಂದಿರಬಹುದು. ಈ ಸಾಧನವು ಕನಿಷ್ಟ ಬೆಜೆಲ್ಗಳನ್ನು ನೀಡುವ ನಿರೀಕ್ಷೆಯಿದೆ. ಸರ್ಚ್ ಇಂಜಿನ್ ದೈತ್ಯ ತನ್ನ ಮೊದಲ ಸ್ಮಾರ್ಟ್ ವಾಚ್ನ ಚೌಕಟ್ಟನ್ನು ತಯಾರಿಸಲು ಸ್ಟೇನ್ಲೆಸ್ ಸ್ಟೀಲ್ನಂತಹ ಉನ್ನತ-ಮಟ್ಟದ ವಸ್ತುಗಳನ್ನು ಬಳಸುತ್ತದೆ ಎಂದು ವದಂತಿಗಳಿವೆ.
ಇನ್ನೂ ಹೆಚ್ಚಿನ ವದಂತಿಗಳನ್ನು ನಂಬುವುದಾದರೆ, ನೂತನ Google Pixel Watch ಸಾಧನವು 24 ಗಂಟೆಗಳ ಹೃದಯ ಬಡಿತ ಮಾನಿಟರಿಂಗ್ ವೈಶಿಷ್ಟ್ಯವನ್ನು ನೀಡುತ್ತದೆ ಹಾಗೂ ಸ್ಮಾರ್ಟ್ ವಾಚ್ ವೇರ್ ಓಎಸ್ ನ ಇತ್ತೀಚಿನ ಆವೃತ್ತಿಯನ್ನು ಆಧರಿಸಿರುತ್ತದೆ. ಆರೋಗ್ಯ ಉತ್ಸಾಹಿಗಳಿಗಾಗಿ ಈ ಸಾಧನವು ಸ್ಟೆಪ್ ಕೌಂಟರ್, SpO2 ಟ್ರ್ಯಾಕಿಂಗ್, ಸ್ಲೀಪ್ ಅಪ್ನಿಯ ಪತ್ತೆ, ಹೃದಯ ಬಡಿತದ ಎಚ್ಚರಿಕೆ, ಕ್ಯಾಲೋರಿ ಟ್ರ್ಯಾಕಿಂಗ್ ಮತ್ತು ಬಹು ವೈದ್ಯಕೀಯ ಸಾಧನಗಳೊಂದಿಗೆ ಸಹಯೋಗದಂತಹ ವೈಶಿಷ್ಟ್ಯಗಳನ್ನು ಒದಗಿಸಬಹುದು. ಇಷ್ಟೇ ಅಲ್ಲದೇ, ಈ ಸ್ಮಾರ್ಟ್ವಾಚ್ 20 ರೀತಿಯ ವಿವಿಧ ವಾಚ್ ಬ್ಯಾಂಡ್ಗಳನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಈ Google Pixel Watch ಸಾಧನವು ಧರಿಸಬಹುದಾದ ಕಪ್ಪು ಮತ್ತು ಸಿಲ್ವರ್ ಬಣ್ಣದ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಗೂಗಲ್ನ ಮೊದಲ Google Pixel Watch ಸ್ಮಾರ್ಟ್ ವಾಚ್ Samsung 5nm Exynos ಚಿಪ್ನಿಂದ ಚಾಲಿತವಾಗಿರಲಿದೆ ಎಂಬ ವದಂತಿಗಳಿವೆ ಹಾಗೂ 32GB ಯಷ್ಟು ಸಂಗ್ರಹಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. Google Pixel Watch ಅನ್ನು ಬಿಡುಗಡೆ ಮಾಡುವ ಸಮಯ ಅಥವಾ ದಿನಾಂಕವನ್ನು ಗೂಗಲ್ ಇನ್ನೂ ಘೋಷಿಸದಿದ್ದರೂ, ಕೆಲ ವರದಿಗಳು ಈ ವರ್ಷದ I/O ಈವೆಂಟ್ನಲ್ಲಿ ಮೇ ತಿಂಗಳಲ್ಲಿ ಸಾಧನವನ್ನು ಪರಿಚಯಿಸಬಹುದು ಎಂದು ಸೂಚಿಸುತ್ತದೆ. ಇನ್ನು ಬೆಲೆಗೆ ಸಂಬಂಧಿಸಿದಂತೆ ನೋಡುವುದಾದರೆ, ಮೊದಲ ಗೂಗಲ್ ಸ್ಮಾರ್ಟ್ ವಾಚ್ Google Pixel Watch ಅನ್ನು ಸುಮಾರು 19,150 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮುಂದಿನ ಒಂದೆರಡು ವಾರಗಳಲ್ಲಿ ಈ ಬಗ್ಗೆ ಇನ್ನಷ್ಟು ತಿಳಿಯುವಂತಹ ಕುತೂಹಲವದಲ್ಲಿ ನಾವು ಕೂಡ ಕಾತುರರಾಗಿದ್ದೇವೆ.
Google Pixel Watch Gets Certified By Bluetooth Sig.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm