ಬ್ರೇಕಿಂಗ್ ನ್ಯೂಸ್
29-09-21 11:08 am Gizbot, Mantesh ಡಿಜಿಟಲ್ ಟೆಕ್
ಜನಪ್ರಿಯ ಆಪಲ್ ಕಂಪನಿಯು ಇತ್ತೀಚಿಗಷ್ಟೆ ತನ್ನ ನೂತನ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಕೆಲವು ಆಕರ್ಷಕ ಫೀಚರ್ಸ್ಗಳಿಂದ ಐಫೋನ್ ಪ್ರಿಯರ ಗಮನ ಸೆಳೆದಿದೆ. ಮುಖ್ಯವಾಗಿ ಹೈ ಎಂಡ್ ಕ್ಯಾಮೆರಾ ಸೆನ್ಸಾರ್, ಸ್ಕ್ರೀನ್ ರೆಸಲ್ಯೂಶನ್ ಗುಣಮಟ್ಟ, ಹೊಸತನದ ಬಯೋನಿಕ್ A15 ಪ್ರೊಸೆಸರ್ ಸೇರಿದಂತೆ ಇನ್ನಿತರೆ ಕೆಲವು ಆಯ್ಕೆಗಳು ಡಿಮ್ಯಾಂಡ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಅದಲ್ಲದೇ ಈ ಸರಣಿಯಲ್ಲಿ ಕೆಲವು ಟ್ರಿಕ್ಸ್ಗಳು ಇದ್ದು, ಅವುಗಳು ಬಳಕೆದಾರರ ಗಮನ ಸೆಳೆದಿವೆ.
ಹೌದು, ಆಪಲ್ ಐಫೋನ್ 13 ಸರಣಿಯು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತ ಮುನ್ನಡೆದಿದೆ. ಆಪಲ್ ತನ್ನ ಪ್ರತಿ ಸರಣಿಯಲ್ಲಿಯೂ ಏನಾದರೂ ಹೊಸತನ ಪರಿಚಯಿಸುತ್ತದೆ. ಹಾಗೆಯೇ ಈ ಸರಣಿಯು ಹಲವು ಕಾರಣಗಳಿಂದ ಸ್ಪೆಷಲ್ ಎನಿಸಿಕೊಂಡಿದೆ. ಇದರೊಂದಿಗೆ ಈ ಸರಣಿಯಲ್ಲಿನ ಕೆಲವು ಟ್ರಿಕ್ಸ್ಗಳು ಉಪಯುಕ್ತ ಆಗಿದ್ದು, ಅವುಗಳ ಬಗ್ಗೆ ಐಫೋನ್ 13 ಸರಣಿಯ ಮಾಲೀಕರುಗಳು ತಿಳಿಯುವುದು ಮುಖ್ಯ ಎನಿಸಿದೆ. ಹಾಗಾದರೇ ಐಫೋನ್ 13 ಸರಣಿಯಲ್ಲಿನ ಆ ಟ್ರಿಕ್ಸ್ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ನೋಟಿಫಿಕೇಶನ್ಗಳನ್ನು ಸೆಡ್ಯುಲ್ ಮಾಡುವುದು
ಎಷ್ಟೋ ಸಂದರ್ಭಗಳಲ್ಲಿ ಫೋನಿಗೆ ಬರುವ ನೋಟಿಫಿಕೇಶನ್ಗಳು ಬಳಕೆದಾರರಿಗೆ ಕಿರಿ ಕಿರಿ ಎನಿಸುತ್ತವೆ. ಅಂತಹ ವೇಳೆ ಅನೇಕರು ಫೋನ್ ಸೈಲೆಂಟ್ ಇಲ್ಲವೇ ಆಫ್ ಮಾಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಆಪಲ್ ಐಒಎಸ್ 15 ಇನ್ಬಿಲ್ಟ್ ನೋಟಿಫಿಕೇಶನ್ ಮ್ಯಾನೇಜಮೆಂಟ್ ಟೂಲ್ ಆಯ್ಕೆಯನ್ನು ಒಳಗೊಂಡಿದೆ. ಬಳಕೆದಾರರು ಅವರಿಗೆ ಮುಖ್ಯವಲ್ಲದ ನೋಟಿಫಿಕೇಶನ್ಗಳನ್ನು ವಿಳಂಬಗೊಳಿಸಬಹುದು ಮತ್ತು ಅವುಗಳನ್ನು ನಿಮಗೆ ಅನುಕೂಲಕರವಾದ ಸಮಯದಲ್ಲಿ ವೀಕ್ಷಿಸಲು ಅವುಗಳನ್ನು ವೇಳಾಪಟ್ಟಿ ಮಾಡಬಹುದು. ಇದನ್ನು ಸೆಟ್ ಮಾಡಲು ಫೋನಿನಲ್ಲಿ ಸೆಟ್ಟಿಂಗ್ಗಳನ್ನು ತೆರೆಯಿರಿ> ನಂತರ ನೋಟಿಫಿಕೇಶನ್ ಗಳು > ಸೆಡ್ಯುಲ್ ಸಮ್ಮರಿ ಆಯ್ಕೆ ಮಾಡಿ ಮತ್ತು ಅದನ್ನು ಟಾಗಲ್ ಮಾಡಿ.

ವೆಬ್ಸೈಟ್ಗಳಿಂದ IP ವಿಳಾಸವನ್ನು ಹೈಡ್ ಮಾಡಬಹುದು
ಇನ್ನೊಂದು ವಿಶೇಷ ಫೀಚರ್ ಎಂದರೇ ಅದು ವೆಬ್ಸೈಟ್ಗಳಿಂದ IP ವಿಳಾಸವನ್ನು ಹೈಡ್ ಮಾಡುವುದು ಆಗಿದೆ. ಐಒಎಸ್ 15 ರಲ್ಲಿ ಬಳಕೆದಾರರು ಬ್ರೌಸ್ ಮಾಡುವಾಗ ವೆಬ್ಸೈಟ್ಗಳು ಅಥವಾ ಟ್ರ್ಯಾಕರ್ಗಳು ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ತಡೆಯಲು ನಿಮ್ಮ ಫೋನಿನ ಐಪಿ ವಿಳಾಸವನ್ನು ಕಾಣದಂತೆ ಮಾಡಬಹುದು. ಐಒಎಸ್ 15 ರಲ್ಲಿ ಗೌಪ್ಯತೆ ಫೀಚರ್ಸ್ಗಳನ್ನು ಸುಧಾರಿಸುವುದು ಇದರ ಉದ್ದೇಶವಾಗಿದ್ದು, ಸಫಾರಿ ವೆಬ್ ಬ್ರೌಸ್ ಮಾಡುವುದು ಸುರಕ್ಷಿತವಾಗಿದೆ. ಇನ್ನು IP ವಿಳಾಸವನ್ನು ಹೈಡ್ ಮಾಡಲು ಹೀಗೆ ಮಾಡಿ: ಹೋಮ್ ಸ್ಕ್ರೀನ್ನಿಂದ ಸೆಟ್ಟಿಂಗ್ > ಸಫಾರಿ ಟ್ಯಾಪ್ ಮಾಡಿ > IP ವಿಳಾಸವನ್ನು ಹೈಡ್ ಮಾಡಲು ಸ್ಕ್ರಾಲ್ ಮಾಡುವುದು > ಟ್ರ್ಯಾಕರ್ಸ್ ಮತ್ತು ವೆಬ್ಸೈಟ್ಗಳನ್ನು ಟ್ಯಾಪ್ ಮಾಡಿ.

ಸಫಾರಿಗೆ ಬ್ಯಾಕ್ಗ್ರೌಂಡ್ ಫೋಟೊ ಸೇರಿಸುವುದು
ಐಒಎಸ್ 15 ರೊಂದಿಗೆ ಐಫೋನ್ 13 ಸರಣಿಯ ಬಳಕೆದಾರರು ಸಫಾರಿ ಆಪ್ಗೆ ಬ್ಯಾಕ್ ಗ್ರೌಂಡ್ನಲ್ಲಿ ಫೋಟೊ ಕೂಡ ಸೇರಿಸಬಹುದು. ಆರಂಭದ ಪುಟವನ್ನು ಕಸ್ಟಮೈಸ್ ಮಾಡುವುದು ಮಾತ್ರವಲ್ಲ, ಬ್ಯಾಕ್ಗ್ರೌಂಡ್ ಫೋಟೊ ಅನ್ನು ಸಹ ಆಯ್ಕೆ ಮಾಡಬಹುದು. ಇದರೊಂದಿಗೆ ಆರಂಭದ ಪುಟದಲ್ಲಿ ಪ್ರದರ್ಶಿಸಲು ಹೊಸ ವಿಭಾಗಗಳನ್ನು ಆಯ್ಕೆ ಮಾಡಬಹುದು. ಹೀಗೆ ಮಾಡಿ: ಸಫಾರಿ ಆಪ್ ತೆರೆಯಿರಿ > ಟ್ಯಾಪ್ ನ್ಯೂ ಸಫಾರಿ > ಸ್ಕ್ರಾಲ್ ಡೌನ್ ಎಡಿಟ್ > ಬ್ಯಾಕ್ಗ್ರೌಂಡ್ ಇಮೇಜ್ ಆನ್ > ಫೋಟೊ ಲೈಬ್ರರಿ ಯಿಂದ ಆಯ್ಕೆ ಮಾಡಿ.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm