ಬ್ರೇಕಿಂಗ್ ನ್ಯೂಸ್
23-09-21 02:44 pm Gizbot, Mantesh ಡಿಜಿಟಲ್ ಟೆಕ್
ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ ಒಂದಾದ ರಿಯಲ್ಮಿ ಸಂಸ್ಥೆಯ ತನ್ನ ಬಹುನಿರೀಕ್ಷಿತ 'ರಿಯಲ್ಮಿ GT ನಿಯೋ 2' ಸ್ಮಾರ್ಟ್ಫೋನ್ ಸರಣಿ ಬಿಡುಗಡೆ ಆಗಿದೆ. ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿದ್ದ ರಿಯಲ್ಮಿ GT ನಿಯೋ ಸ್ಮಾರ್ಟ್ಫೋನಿನ ಮುಂದುವರಿದ ಭಾಗವಾಗಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿರುವುದು ಪ್ರಮುಖ ಹೈಲೈಟ್ ಆಗಿದೆ.
ಹೌದು, ರಿಯಲ್ ಮಿ ಕಂಪನಿಯು ಚೀನಾ ಮಾರುಕಟ್ಟೆಯಲ್ಲಿ ತನ್ನ ರಿಯಲ್ಮಿ GT ನಿಯೋ 2 ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಇದೊಂದು ಗೇಮಿಂಗ್ ಪೂರಕವಾಗದ ಸ್ಮಾರ್ಟ್ಫೋನ್ ಎನಿಸಿದೆ. 8GB + 128GB, 8GB + 256GB ಮತ್ತು 12GB + 256GB ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 870 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಹೊಂದಿದೆ. ಸ್ಟೀರಿಯೋ ಸ್ಪಿಕರ್ ಹಾಗೂ ಡಾಲ್ಬಿ ಸೌಂಡ್ ಬೆಂಬಲವನ್ನು ಪಡೆದಿದೆ. ಡಿಸ್ಪ್ಲೇ 120Hz ರೀಫ್ರೇಶ್ ರೇಟ್ ಹೊಂದಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇನ್ನುಳಿದಂತೆ ರಿಯಲ್ಮಿ GT ನಿಯೋ 2 ಸ್ಮಾರ್ಟ್ಫೋನ್ ಯಾವೆಲ್ಲಾ ಫೀಚರ್ಸ್ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್ಪ್ಲೇ ಡಿಸೈನ್
ರಿಯಲ್ಮಿ GT ನಿಯೋ 2 ಸ್ಮಾರ್ಟ್ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 6.62 ಇಂಚಿನ ಹೆಚ್ಡಿ + AMOLED ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ 120Hz ರೀಫ್ರೇಶ್ ರೇಟ್ ಹೊಂದಿದ್ದು, ಸ್ಕ್ರೀನ್ನಿಂದ ಬಾಹ್ಯ ಬಾಡಿ ನಡುವಿನ ಅಂತರವು 91.7 ಆಗಿದೆ.

ಪ್ರೊಸೆಸರ್ ಯಾವುದು
ರಿಯಲ್ಮಿ GT ನಿಯೋ 2 ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 870 SoC ಪ್ರೊಸೆಸರ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB + 128GB, 8GB + 256GB ಮತ್ತು 12GB + 256GB ಆಯ್ಕೆ ಹೊಂದಿದೆ ಜೊತೆಗೆ ಎಸ್ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ತ್ರಿವಳಿ ಕ್ಯಾಮೆರಾ ವಿಶೇಷ
ರಿಯಲ್ಮಿ GT ನಿಯೋ 2 ಸ್ಮಾರ್ಟ್ ಫೋನ್ ಹಿಂಬದಿಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ರಿಯಲ್ಮಿ GT ನಿಯೋ 2 ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ಅಪ್ ಅನ್ನು ಹೊಂದಿದೆ. ಇದರೊಂದಿಗೆ 65W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಜಸ್ಟ್ 36 ನಿಮಿಷಗಳಲ್ಲಿ ಬ್ಯಾಟರಿ ಪೂರ್ಣ ಚಾರ್ಜ್ ಆಗಲಿದೆ ಎಂದು ಕಂಪನಿಯು ಹೇಳಿದೆ. ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಕೂಡ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ, ಬ್ಲೂಟೂತ್ V5.0, GPS ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಸೆನ್ಸಾರ್ ಅನ್ನು ಒಳಗೊಂಡಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?
ರಿಯಲ್ಮಿ GT ನಿಯೋ 2 ಸ್ಮಾರ್ಟ್ಫೋನ್ 8GB + 128GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 2,499 (ಭಾರತದಲ್ಲಿ ಅಂದಾಜು 28,500ರೂ), ಅದೇ ರೀತಿ 8GB + 256GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 2,699 (ಭಾರತದಲ್ಲಿ ಅಂದಾಜು 30,800ರೂ) ಆಗಿರಲಿದೆ. ಇನ್ನು 12GB + 256GB ವೇರಿಯಂಟ್ ಬೆಲೆಯು CNY 2,999 (ಭಾರತದಲ್ಲಿ ಅಂದಾಜು. 34,200ರೂ) ಎನ್ನಲಾಗಿದೆ. ನಿಯೋ ಗ್ರೀನ್, ಬ್ಲೂ ಮತ್ತು ಶ್ಯಾಡೋ ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ.
31-10-25 08:10 pm
HK News Desk
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
31-10-25 10:47 pm
Mangalore Correspondent
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
ಅನಧಿಕೃತ ಪಾರ್ಕಿಂಗ್ ವಿರುದ್ಧ ಮಂಗಳೂರು ಪೊಲೀಸರ ಕಾರ್...
31-10-25 09:00 pm
78 ಶೇ. ಜನರಿಗೆ ಎರಡು ವರ್ಷದಲ್ಲಿ 23 ಸಾವಿರ ಮಕ್ಕಳು,...
31-10-25 03:05 pm
ಬಿಸಿ ರೋಡಿನಲ್ಲಿ ಆಂಬುಲೆನ್ಸ್ ಗೆ ಸೈಡ್ ಕೊಡದೆ ಸತಾಯಿ...
30-10-25 11:16 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm