ಬ್ರೇಕಿಂಗ್ ನ್ಯೂಸ್
09-09-21 11:14 am Gizbot, Mantesh ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ಹಲವು ಉಪಯುಕ್ತ ಫೀಚರ್ಸ್ಗಳ ಮೂಲಕ ಬಳಕೆದಾರರಿಗೆ ನೆರವು ಮಾಡಿದೆ. ಗೂಗಲ್ ಕಂಪನಿಯ ಅತ್ಯುತ್ತಮ ಸೇವೆಗಳ ಪೈಕಿ ಜಿ-ಮೇಲ್ ಕೂಡಾ ಒಂದಾಗಿದ್ದು, ಸಂಸ್ಥೆಯ ಇತರೆ ಸೇವೆಗಳನ್ನು ಪಡೆಯಲು ಜಿ-ಮೇಲ್ ಬುನಾದಿಯಂತಿದೆ. ಜಿ-ಮೇಲ್ನಲ್ಲಿ ಈಗಾಗಲೇ ಹಲವು ಅಪ್ಡೇಟ್ಗಳು ಆಗಿದ್ದು, ಹೀಗಾಗಿ ಜಿ-ಮೇಲ್ ಬರೀ ಮೇಲ್/ಸಂದೇಶ ಕಳುಹಿಸುವ ಅಥವಾ ಸ್ವೀಕರಿಸುವ ತಾಣವಾಗಿ ಉಳಿದಿಲ್ಲ. ಜಿ-ಮೇಲ್ನಲ್ಲಿ ಈಗ ಹೊಸದೊಂದು ಫೀಚರ್ ಸೇರ್ಪಡೆ ಆಗಲಿದ್ದು, ಬಳಕೆದಾರರು ಫುಲ್ ದಿಲ್ಖುಷ್ ಆಗಲಿದ್ದಾರೆ

ಹೌದು, ಗೂಗಲ್ನ ಜಿ-ಮೇಲ್ನಲ್ಲಿ ಸದ್ಯದಲ್ಲೇ ವಾಯಿಸ್ ಕರೆ ಹಾಗೂ ವಿಡಿಯೋ ಕರೆಗಳ ಸೇವೆ ಲಭ್ಯವಾಗಲಿದೆ. ಇ-ಮೇಲ್ಗಳನ್ನು ಕಳುಹಿಸುವ ಅಥವಾ ಸ್ವೀಕರಿಸುವ ಹೊರತಾಗಿ, ಇದು ಬಳಕೆದಾರರಿಗೆ ವೈಯಕ್ತಿಕ ಮತ್ತು ಗ್ರೂಪ್ ಚಾಟ್ಗಳು, ವಿಡಿಯೋ ಕಾನ್ಫರೆನ್ಸ್ಗಳು ಇದರೊಂದಿಗೆ ಪ್ರಸ್ತುತ ವಾಯಿಸ್ ಮತ್ತು ವೀಡಿಯೊ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಜಿ-ಮೇಲ್ ಆಪ್ನಲ್ಲಿ ಗೂಗಲ್ ಮೀಟ್ ಮೂಲಕ ಕರೆ ಮಾಡಲಾಗುವುದು ಎಂಬುದನ್ನು ಗಮನಿಸಿ.

ಈ ನಿಟ್ಟಿನಲ್ಲಿ, ಜಿ-ಮೇಲ್ ಚಾಟ್, ಸ್ಪೇಸ್ಗಳು ಮತ್ತು ಗೂಗಲ್ ಮೀಟ್ಗೆ ಪ್ರವೇಶ ಕೇಂದ್ರವಾಗಿ ಕೆಲಸ ಮಾಡಲಿದೆ. ಸಹಜವಾಗಿ, ಹೆಚ್ಚು ಸಮರ್ಪಿತ ಇಂಟರ್ಫೇಸ್ ಬಯಸುವವರಿಗೆ ಅಪ್ಲಿಕೇಶನ್ಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಟೆಕ್ ದೊಡ್ಡಣ್ಣ ಗೂಗಲ್, ಭವಿಷ್ಯದಲ್ಲಿ ಯಾವಾಗಲಾದರೂ ಗೂಗಲ್ ಮೀಟ್ಗೆ ವಾಯಿಸ್ ಮತ್ತು ವೀಡಿಯೊ ಕರೆ ಮಾಡುವ ಫೀಚರ್ ಅನ್ನು ಪರಿಚಯಿಸುವ ಭರವಸೆ ನೀಡಿದೆ. ಪ್ರಸ್ತುತ ಈ ಸೇವೆಯು ಎಂಟರ್ಪ್ರೈಸ್ ಗ್ರಾಹಕರಿಗೆ ಲಭ್ಯತೆ ಶುರುವಾಗಿದೆ ಮತ್ತು ಶೀಘ್ರದಲ್ಲೇ ಇತರೆ ಸಾಮಾನ್ಯ ಜಿ-ಮೇಲ್ ಬಳಕೆದಾರರಿಗೂ ಲಭ್ಯವಾಗಲಿದೆ.

ಈಗ ಇರುವಂತೆ, ಜಿ-ಮೇಲ್ ಅಡಿಯಲ್ಲಿರುವ ಗೂಗಲ್ ಮೀಟ್ ಟ್ಯಾಬ್ ಬಳಕೆದಾರರಿಗೆ ವರ್ಚುವಲ್ ಮೀಟಿಂಗ್ ಆರಂಭಿಸುವ ಅಥವಾ ಸೇರುವ ಆಯ್ಕೆಯನ್ನು ನೀಡಲಿದೆ. ಹಾಗೆಯೇ ಬಳಕೆದಾರರ ಕಾಂಟ್ಯಾಕ್ಟ್ಗಳಿಗೆ ಕರೆಗಳನ್ನು ಮಾಡುವ ಫೀಚರ್ ಸಹ ಇದರ ವಿಭಾಗದಲ್ಲಿ ಸೇರ್ಪಡೆ ಮಾಡಲಾಗುತ್ತದೆ. ಬಳಕೆದಾರರು ಗೂಗಲ್ ಡ್ಯುಯೊ ಅಥವಾ ಗೂಗಲ್ ಸ್ಕೈಪ್ನಂತಹ ಯಾವುದೇ ಇತರ VOIP ಆಪ್ನಂತೆಯೇ ಆಪ್ ಮೂಲಕ ಒಂದೇ ಸಂಪರ್ಕಕ್ಕೆ ವೈಯಕ್ತಿಕ ವಾಯಿಸ್ ಕರೆ ಮತ್ತು ವಿಡಿಯೋ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಜಿ-ಮೇಲ್ ಪ್ಲಾಟ್ಫಾರ್ಮ್ನಲ್ಲಿ ವಾಯಿಸ್ ಮತ್ತು ವಿಡಿಯೋ ಕರೆ ಮಾಡುವ ಫೀಚರ್ನ ಹೊರತಾಗಿ, ಗೂಗಲ್ ತನ್ನ ಇತರೆ ಸೇವೆಗಳಾದ ಗೂಗಲ್ ಸ್ಪೇಸಸ್ ಮತ್ತು ಗೂಗಲ್ ಕ್ಯಾಲೆಂಡರ್ನಲ್ಲಿಯೂ ಕೆಲವು ಹೊಸ ಫೀಚರ್ಸ್ ಸೇರಲಿವೆ. ಗೂಗಲ್ ಮೀಟ್ ಗಾಗಿ ಹೊಸ ಕಂಪ್ಯಾನಿಯನ್ ಮೋಡ್ ಸಹ ಇದೆ. ಈ ಆಯ್ಕೆಯು ಬಳಕೆದಾರರಿಗೆ ವರ್ಚುವಲ್ ಮೀಟಿಂಗ್ಗಳಿಗಾಗಿ ಕಾನ್ಫರೆನ್ಸ್ ರೂಮ್ನ ಆಡಿಯೋ ವಿಶುವಲ್ ಹಾರ್ಡ್ವೇರ್ ಅನ್ನು ಬಳಸಲು ಅನುಮತಿ ನೀಡುತ್ತದೆ. ಇದರೊಂದಿಗೆ ಟೆಕ್ ದೈತ್ಯ ಗೂಗಲ್ ತನ್ನ ಗೂಗಲ್ ಮೀಟ್ ಹಾರ್ಡ್ವೇರ್ ಇಕೋ ಸಿಸ್ಟಮ್ ವ್ಯಾಪ್ತಿ ವಿಸ್ತರಿಸುತ್ತಿದೆ.
ಜಿ-ಮೇಲ್ ಪ್ಲಾಟ್ಫಾರ್ಮ್ನಲ್ಲಿ ವಾಯಿಸ್ ಮತ್ತು ವಿಡಿಯೋ ಕರೆ ಮಾಡುವ ಫೀಚರ್ನ ಹೊರತಾಗಿ, ಗೂಗಲ್ ತನ್ನ ಇತರೆ ಸೇವೆಗಳಾದ ಗೂಗಲ್ ಸ್ಪೇಸಸ್ ಮತ್ತು ಗೂಗಲ್ ಕ್ಯಾಲೆಂಡರ್ನಲ್ಲಿಯೂ ಕೆಲವು ಹೊಸ ಫೀಚರ್ಸ್ ಸೇರಲಿವೆ. ಗೂಗಲ್ ಮೀಟ್ ಗಾಗಿ ಹೊಸ ಕಂಪ್ಯಾನಿಯನ್ ಮೋಡ್ ಸಹ ಇದೆ. ಈ ಆಯ್ಕೆಯು ಬಳಕೆದಾರರಿಗೆ ವರ್ಚುವಲ್ ಮೀಟಿಂಗ್ಗಳಿಗಾಗಿ ಕಾನ್ಫರೆನ್ಸ್ ರೂಮ್ನ ಆಡಿಯೋ ವಿಶುವಲ್ ಹಾರ್ಡ್ವೇರ್ ಅನ್ನು ಬಳಸಲು ಅನುಮತಿ ನೀಡುತ್ತದೆ. ಇದರೊಂದಿಗೆ ಟೆಕ್ ದೈತ್ಯ ಗೂಗಲ್ ತನ್ನ ಗೂಗಲ್ ಮೀಟ್ ಹಾರ್ಡ್ವೇರ್ ಇಕೋ ಸಿಸ್ಟಮ್ ವ್ಯಾಪ್ತಿ ವಿಸ್ತರಿಸುತ್ತಿದೆ.
29-07-26 01:52 pm
HK News Staffer
ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆ ಹೈಕಮಾಂಡ್...
28-07-26 08:12 pm
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
29-07-26 01:53 pm
HK News Staffer
ಹಿಟ್& ರನ್ ಪ್ರಕರಣ ; ಕಾರು ಡಿಕ್ಕಿ ರಭಸಕ್ಕೆ ಎರಡೂ ಕ...
29-07-26 10:40 am
ಪತ್ನಿಗೆ ನೇಣು ಬಿಗಿದು ವಿಡಿಯೋ ಕಾಲ್ನಲ್ಲಿ ಅತ್ತೆ-ಮ...
28-07-26 08:11 pm
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm