ಬ್ರೇಕಿಂಗ್ ನ್ಯೂಸ್
01-09-21 10:56 am Gizbot, Mantesh ಡಿಜಿಟಲ್ ಟೆಕ್
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದಿರುವ ಶಿಯೋಮಿಯು ಈಗಾಗಲೇ ಭಿನ್ನ ಶ್ರೇಣಿಯ ಸ್ಮಾರ್ಟ್ಫೋನ್ಗಳ ಮೂಲಕ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಹೊಂದಿದೆ. ಕಂಪನಿಯ ರೆಡ್ಮಿ ನೋಟ್ ಸರಣಿಯ ಭಾರೀ ಸದ್ದು ಮಾಡಿದೆ ಅದಲ್ಲದೇ ಕಂಪನಿಯ ಶಿಯೋಮಿ 11 ಸರಣಿಯ ಸ್ಮಾರ್ಟ್ಫೋನ್ಗಳು ಹೈ ಎಂಡ್ ಫೀಚರ್ಸ್ಗಳಿಂದ ಗ್ರಾಹಕರನ್ನು ಸೆಳೆದಿವೆ. ಇದರ ಮುಂದುವರಿದ ಭಾಗವಾಗಿ ಕಂಪನಿಯು ಇದೀಗ ಶಿಯೋಮಿ ಮಿ 11 ಸ್ಮಾರ್ಟ್ಫೋನ್ ಸರಣಿಯ ಅನಾವರಣ ಮಾಡಲಿದೆ. ಆದರೆ ಮಿ11 ನಂತರದ 12 ಸ್ಮಾರ್ಟ್ಫೋನ್ ಸರಣಿಯ ಲೀಕ್ ಕ್ಯಾಮೆರಾ ಫೀಚರ್ ಹೆಚ್ಚು ಕುತೂಹಲ ಮೂಡಿಸಿವೆ.
ಹೌದು, ಶಿಯೋಮಿ ಕಂಪನಿಯು ತನ್ನ ಮುಂದಿನ ಫ್ಲ್ಯಾಗ್ಶಿಪ್ ಶಿಯೋಮಿ 12 ಸ್ಮಾರ್ಟ್ಫೋನ್ ಸರಣಿಯ ಲೀಕ್ ಫೀಚರ್ಸ್ಗಳು ಈಗ ಸ್ಮಾರ್ಟ್ಫೋನ್ ಪ್ರಿಯರನ್ನು ಆಕರ್ಷಿಸಿವೆ. ಶಿಯೋಮಿ 12 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದ್ದು, ಮೂರು ಕ್ಯಾಮೆರಾಗಳು 50 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎಂದು ಟಿಪ್ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ (Weibo) ವೈಬೋದಲ್ಲಿ ಇತ್ತೀಚಿನ ಪೋಸ್ಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದೆ.
ಶಿಯೋಮಿ 12 ನಲ್ಲಿನ ಟೆಲಿಫೋಟೋ ಲೆನ್ಸ್ 5x ಪೆರಿಸ್ಕೋಪ್ ಅನ್ನು ಬಳಸುತ್ತದೆ ಎಂದು ಪೋಸ್ಟ್ ಸೂಚಿಸುತ್ತದೆ. ಶಿಯೋಮಿ 10x ಪೆರಿಸ್ಕೋಪ್ ಅನ್ನು ಪರೀಕ್ಷಿಸಿದ್ದರೂ, ಇದು ಪ್ರಾಯೋಗಿಕ ಫೋಕಲ್ ಉದ್ದಕ್ಕಾಗಿ 5x ಲೆನ್ಸ್ಗೆ ಫಿಕ್ಸ್ ಆಗುತ್ತದೆ. ಕೆಲವು ಈ ಹಿಂದಿನ ವರದಿಗಳು 200-ಮೆಗಾ ಪಿಕ್ಸೆಲ್ ಸೆನ್ಸರ್ ಅನ್ನು ಟಾಪ್-ಎಂಡ್ ಶಿಯೋಮಿ ಸ್ಮಾರ್ಟ್ಫೋನ್ಗಳಲ್ಲಿ ಬಳಸುವುದನ್ನು ಉಲ್ಲೇಖಿಸಿವೆ. ಆದಾಗ್ಯೂ, ಆ ಕ್ಯಾಮರಾ ಸೆಟ್ಅಪ್ ಅನ್ನು ಬಳಸಲು ಶಿಯೋಮಿ 12 ಅಲ್ಟ್ರಾ ಮಾದರಿಗಳಲ್ಲಿ ಬಳಸಬಹುದು ಎನ್ನಲಾಗಿದೆ.
ಇನ್ನು ಶಿಯೋಮಿ 12 ಫೋನ್ LTPO AMOLED ಡಿಸ್ಪ್ಲೇಯನ್ನು 120 Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ದರವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ ಸ್ನಾಪ್ಡ್ರಾಗನ್ 898 ಚಿಪ್ಸೆಟ್ನಿಂದ ಶಕ್ತಿಯನ್ನು ಪಡೆಯುವ ಸಾಧ್ಯತೆಯಿದೆ ಮತ್ತು LPDDR5X RAM ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಶಿಯೋಮಿ 12 ಅಲ್ಟ್ರಾ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 898 ಪ್ಲಸ್ ಪ್ರೊಸೆಸರ್ನೊಂದಿಗೆ ಬರುವ ಸಾಧ್ಯತೆಗಳು ಇವೆ.
ಸದ್ಯ ಕಂಪನಿಯು ತನ್ನ ಹೊಸ ಕೈಗೆಟುಕುವ ಫ್ಲ್ಯಾಗ್ಶಿಪ್ ಫೋನ್ಗಳಾದ ಮಿ 11T ಮತ್ತು ಮಿ 11T ಪ್ರೊ ಅನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಇಲ್ಲಿಯವರೆಗೆ ತಿಳಿದಿರುವಂತೆ, ಮಿ 11T ಮತ್ತು ಮಿ 11T ಪ್ರೊ ರೂಪಾಂತರವು ಸಾಮಾನ್ಯ ಮಿ 11 ರಂತೆಯೇ ಅದೇ ಡಿಸ್ಪ್ಲೇ ಅನ್ನು ಪಡೆಯುವ ಸಾಧ್ಯತೆಯಿದೆ. ಇದು 120Hz ರೀಫ್ರೇಶ್ ರೇಟ್ ಪಡೆದಿರಲಿದ್ದು, ಅಮೋಲೆಡ್ ಪ್ಯಾನಲ್ ಹೊಂದಿರಲಿದೆ. ಇನ್ನು ಮಿ 11T ಪ್ರೊ ಮಾದರಿಯು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ನೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:10 pm
Udupi Correspondent
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm