ಬ್ರೇಕಿಂಗ್ ನ್ಯೂಸ್
05-04-21 06:23 pm Headline Karnataka News Network ಡಿಜಿಟಲ್ ಟೆಕ್
53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರೋದು ಕಳೆದ ಶನಿವಾರ ಬಯಲಾಗಿದೆ. ಈ ಬೃಹತ್ ಮಟ್ಟದ ಸೋರಿಕೆಯಲ್ಲಿ ಹ್ಯಾಕರ್ಗಳು ಸ್ವತಃ ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಅವರ ಖಾಸಗಿ ಮೊಬೈಲ್ ಫೋನ್ ನಂಬರ್ ಕೂಡ ಲೀಕ್ ಮಾಡಿದ್ದು, ಸಾರ್ವಜನಿಕವಾಗಿ ಸುಲಭವಾಗಿ ನಂಬರ್ ಸಿಗುವಂತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಳೆದ ಜನವರಿಯಲ್ಲಿ ಫೇಸ್ಬುಕ್ ಅಕೌಂಟ್ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಹ್ಯಾಕರ್ಗಳು ಫೇಸ್ಬುಕ್ ಅಕೌಂಟ್ಗಳಿಗೆ ಲಿಂಕ್ ಆಗಿರೋ 53 ಕೋಟಿ ಫೋನ್ ನಂಬರ್ಗಳನ್ನ ಕದ್ದು, ದೊಡ್ಡ ಡೇಟಾಬೇಸ್ ರಚಿಸಿ ಅದನ್ನ ಹ್ಯಾಕರ್ಸ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕನಿಷ್ಟ ಕಂಪ್ಯೂಟರ್ ಜ್ಞಾನವುಳ್ಳ ಯಾರು ಬೇಕಾದ್ರೂ ಈ ಫೋನ್ ನಂಬರ್ಗಳನ್ನ ಪಡೆಯಬಹುದಾಗಿದೆ ಎಂದು ವರದಿಯೊಂದು ದೃಢಪಡಿಸಿದೆ.
ಸ್ವತಃ ಮಾರ್ಕ್ ಝಕರ್ಬರ್ಗ್ ಅವರ ಪರ್ಸನಲ್ ಫೋನ್ ನಂಬರ್ ಸೋರಿಕೆಯಾಗಿರೋದು ಈ ಹ್ಯಾಕಿಂಗ್ನ ಗಂಭೀರತೆ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಫೇಸ್ಬುಕ್ನಿಂದ ಸ್ಪಷ್ಟನೆ ಬೇಕಾದ್ರೆ ಪತ್ರಕರ್ತರು ಈಗ ನೇರವಾಗಿ ಝಕರ್ಬರ್ಗ್ ಅವರಿಗೇ(ಲೀಕ್ ಆಗರೋ ನಂಬರ್ಗೆ) ಕರೆ ಮಾಡಿ ಅಂತ ಡೇಟಾ ಸೆಕ್ಯೂರಿಟಿ ತಜ್ಞ ಡೇವ್ ವಾಕರ್ ಎಂಬವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಹ್ಯಾಕರ್ಗಳು ಹಲವಾರು ಜನರ ಫೋನ್ ನಂಬರ್ಗಳನ್ನೊಳಗೊಂಡ ಸೂಕ್ಷ್ಮ ಮಾಹಿತಿಯನ್ನ ಆನ್ಲೈನ್ ಮೂಲಕ ಫ್ರೀಯಾಗಿ ನೀಡ್ತಿದ್ದರು ಎಂದು ವರದಿಯಾಗಿದೆ. ಅಲ್ಲದೆ ಹ್ಯಾಕರ್ಸ್ ಫೋರಂನಲ್ಲಿ ಕಳೆದ ಜನವರಿಯಿಂದ ಫೋನ್ ನಂಬರ್ಗಳು ಹರಿದಾಡ್ತಿವೆ ಅಂತ ತಿಳಿದುಬಂದಿದೆ.
In a major privacy breach, personal data of around 53.3 crores Facebook users from 106 countries have allegedly been posted online for free on low-level hacking forums.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm