ಬ್ರೇಕಿಂಗ್ ನ್ಯೂಸ್
29-03-21 11:37 am Source: Vijaya Karnataka ಡಿಜಿಟಲ್ ಟೆಕ್
ಇದರಿಂದ ಬಳಕೆದಾರರು ತಾವು ಯಾವುದನ್ನು ಹೇಳಬೇಕು, ಏನನ್ನಾದರು ವ್ಯಕ್ತಪಡಿಸಬೇಕು ಎಂದಿದ್ದರೆ ಎಲ್ಲವನ್ನೂ ಸ್ಟಿಕ್ಕರ್ ಮೂಲಕ ಹೇಳಬಹುದು.
ಅಂದಾಜು 200 ಕೋಟಿ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ತನ್ನ ಹೊಸ ಅಪ್ಡೇಟ್ನಲ್ಲಿ ವಾಟ್ಸ್ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ‘ಸ್ಟಿಕ್ಕರ್ ಸರ್ಚ್' ಫೀಚರ್ಸ್ ಅನ್ನು ನೀಡಿದೆ. ಅಂದರೆ ಬಳಕೆದಾರರು ಈಗ ಅಪ್ಲಿಕೇಶನ್ನಲ್ಲಿ ಕಸ್ಟಮೈಸ್ ಮಾಡಿದ ಸ್ಟಿಕ್ಕರ್ಗಳನ್ನು ಹುಡುಕಲು ಸಾಧ್ಯವಾಗುತ್ತದೆ.

ಇದರಿಂದ ಬಳಕೆದಾರರು ತಾವು ಯಾವುದನ್ನು ಹೇಳಬೇಕು, ಏನನ್ನಾದರು ವ್ಯಕ್ತಪಡಿಸಬೇಕು ಎಂದಿದ್ದರೆ ಎಲ್ಲವನ್ನೂ ಸ್ಟಿಕ್ಕರ್ ಮೂಲಕ ಹೇಳಬಹುದು. ವಾಟ್ಸ್ಆ್ಯಪ್ ಈ ಹಿಂದೆ ಬಳಕೆದಾರರಿಗೆ ತನ್ನ ಪ್ಲಾಟ್ಫಾರ್ಮ್ನಲ್ಲಿ ಎಮೋಜಿಗಳು ಮತ್ತು ಜಿಐಎಫ್ಗಳನ್ನು ಹುಡುಕಲು ಮಾತ್ರ ಅವಕಾಶ ಮಾಡಿಕೊಟ್ಟಿತು. ಆದರೆ ಸ್ಟಿಕ್ಕರ್ ಸರ್ಚ್ ಫೀಚರ್ಸ್ ಮೂಲಕ ಕಸ್ಟಮ್ ಸ್ಟಿಕ್ಕರ್ಗಳ ಸಹಾಯದಿಂದ ಬಳಕೆದಾರರು ತಾವು ಹೇಳಲು ಬಯಸುವದನ್ನು ನಿಖರವಾಗಿ ಕಳುಹಿಸುವುದು ಸುಲಭವಾಗುತ್ತದೆ.
ಈ ತಿಂಗಳ ಆರಂಭದಲ್ಲಿ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಪರಿಚಯಿಸಿತ್ತು. ಈ ಅಪ್ಡೇಟ್ ಮೂಲಕ ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳಿಂದ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ಗಳನ್ನು ವರ್ಲ್ಡ್ ವೈಡ್ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

ಇನ್ನೂ ಇದಕ್ಕಾಗಿ ಬಳಕೆದಾರರು ತಮ್ಮ ಕ್ಯಾಮೆರಾ ರೋಲ್ನಿಂದ ವೀಡಿಯೊ ಅಥವಾ ಜಿಐಎಫ್ ಅನ್ನು ಆರಿಸುವ ಮೂಲಕ ಸ್ಟಿಕ್ಕರ್ ಪ್ಯಾಕ್ ರಚಿಸಲು ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ನಂತರ, ಅಪ್ಲಿಕೇಶನ್ ಅದನ್ನು ಸ್ವಯಂಚಾಲಿತವಾಗಿ .webp ಫೈಲ್ಗೆ ಪರಿವರ್ತಿಸುತ್ತದೆ, ಅದನ್ನು ಅಪ್ಲಿಕೇಶನ್ಗೆ ಆಮದು ಮಾಡಿಕೊಳ್ಳಬಹುದು. ಈ ರೀತಿಯಾಗಿ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಕಸ್ಟಮ್ ಸ್ಟಿಕ್ಕರ್ಗಳನ್ನು ಹಂಚುವ ಅವಕಾಶ ನೀಡಿದೆ.
This News Article Is A Copy Of Vijaya Karnataka
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 07:24 pm
Mangalore Correspondent
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
ಮನವಿ ಕೊಡಲು ಬಂದವರನ್ನು ತಡೆದ ಪೊಲೀಸರು, ಬೆಳ್ತಂಗಡಿ...
27-10-25 04:36 pm
11 ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಸಿಕ್ಕಿಬಿದ್ದಿದ್...
26-10-25 04:42 pm
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm