ಬ್ರೇಕಿಂಗ್ ನ್ಯೂಸ್
19-02-21 05:14 pm Source: GIZBOT Manthesh ಡಿಜಿಟಲ್ ಟೆಕ್
ಭಾರತದಲ್ಲಿ ಟಿಕ್ಟಾಕ್, ಪಬ್ಜಿ ಮೊಬೈಲ್ ಸೇರಿದಂತೆ ಹಲವು ಚೀನಾದ ಜನಪ್ರಿಯ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ ನಂತರ ಸ್ವದೇಶಿ ಅಪ್ಲಿಕೇಶನ್ಗಳು ಮುನ್ನೆಲೆಯಲ್ಲಿ ಕಾಣಿಸಿಕೊಂಡಿವೆ. ಪ್ರಸ್ತುತ ಆತ್ಮನಿರ್ಭಾರ ಭಾರತ್ ಬೆಂಬಲವಾಗಿ ಬಳಕೆದಾರರು ಸ್ವದೇಶಿ ಆಪ್ಗಳ ಬಳಕೆಯತ್ತ ಒಲವು ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಟ್ವಿಟರ್ ಆಪ್ಗೆ ಪರ್ಯಾಯ ಎಂದು ಗುರುತಿಸಿಕೊಂಡಿರುವ ಭಾರತೀಯ ಕೂ-Koo ಆಪ್ ಸದ್ದು ಮಾಡುತ್ತಿದೆ.
ಹೌದು, ಕೂ ಆಪ್ ಟ್ವಿಟರ್ ಆಪ್ಗೆ ಪರ್ಯಾಯ ಆಗಿದೆ. ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಸೇರಿದಂತೆ ಇತರೆ ಗಣ್ಯರು ಸಹ ಕೂ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಖಾತೆ ಪ್ರಾರಂಭಿಸಿದ್ದಾರೆ. ಟ್ವಿಟರ್ನಂತೆಯೇ, ಕೂ ಬಳಕೆದಾರರು 400 ಅಕ್ಷರಗಳನ್ನು ಒಳಗೊಂಡಿರುವ ಸಣ್ಣ ಪೋಸ್ಟ್ಗಳನ್ನು ಹಂಚಿಕೊಳ್ಳಬಹುದು. ಇದಲ್ಲದೆ, ಬಳಕೆದಾರರು ಆಡಿಯೋ ಮೆಸೆಜ್, ವೀಡಿಯೊಗಳು, ಫೋಟೋಗಳು ಮತ್ತು ಲಿಂಕ್ಗಳನ್ನು ಹಂಚಿಕೊಳ್ಳಬಹುದು. ಹಾಗಾದರೇ ಏನಿದು ಕೂ ಆಪ್?

ಏನಿದು ಕೂ ಆಪ್?
ಕೂ ಮೂಲತಃ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಮತ್ತು ಟ್ವಿಟರ್ಗೆ ಭಾರತೀಯ ಪರ್ಯಾಯವಾಗಿದೆ. ಈ ಅಪ್ಲಿಕೇಶನ್ ಅನ್ನು ಏಪ್ರಿಲ್ 2020 ರಲ್ಲಿ ಅಪ್ರಮೇಯ ರಾಧಾಕೃಷ್ಣ ಮತ್ತು ಮಾಯಾಂಕ್ ಬಿಡಾವಟ್ಕಾ ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಭಾರತೀಯ ಅಪ್ಲಿಕೇಶನ್ನಲ್ಲಿ ಭಾರತದ ಅನೇಕ ಅಧಿಕಾರಿಗಳು ತಮ್ಮ ಖಾತೆಗಳನ್ನು ರಚಿಸಿರುವುದರಿಂದ ಇದು ಈಗ ಹೆಚ್ಚು ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಅಪ್ಲಿಕೇಶನ್ ಡೆವಲಪರ್ಗಳು ಹಿಂದಿ, ತೆಲುಗು, ಕನ್ನಡ, ಬಂಗಾಳಿ, ತಮಿಳು, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ, ಒರಿಯಾ ಮತ್ತು ಅಸ್ಸಾಮೀಸ್ ಸೇರಿದಂತೆ ಅನೇಕ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಬೆಂಬಲವನ್ನು ಸೇರಿಸಿದ್ದಾರೆ.

ಟ್ವಿಟರ್ಗೆ ಫೈಟ
ಕೂ ಆಪ್ ಸಹ ಟ್ವಿಟರ್ನಂತೆ ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ಆಗಿದೆ. ಟ್ವಿಟರ್ನಂತೆ ಸ್ವದೇಶಿ ಕೂ ಆಪ್ನಲ್ಲಿಯೂ ಬಳಕೆದಾರರಿಗೆ 400 ಅಕ್ಷರಗಳನ್ನು ಒಳಗೊಂಡಿರುವ ಸಣ್ಣ ಪೋಸ್ಟ್ಗಳನ್ನು ಶೇರ್ ಮಾಡಬಹುದಾದ ಅವಕಾಶ ಇದೆ. ಇದರೊಂದಿಗೆ ಕೂ ಆಪ್ನಲ್ಲಿ ಬಳಕೆದಾರರು ಆಡಿಯೋ ಮೆಸೆಜ್, ವೀಡಿಯೊಗಳು ಕಂಟೆಂಟ್, ಫೋಟೋಗಳು ಮತ್ತು ಲಿಂಕ್ಗಳನ್ನು ಸಹ ಶೇರ್ ಮಾಡಬಹುದಾಗಿದೆ.

ಕೂ ಆಪ್ ಡೌನ್ಲೋಡ್ ಮಾಡುವುದು ಹೇಗೆ?
ಆಂಡ್ರಾಯ್ಡ್ ಮತ್ತು ಐಓಎಸ್ ಈ ಇಬ್ಬರೂ ಬಳಕೆದಾರರು ಕೂ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಬಳಕೆದಾರರು ಕೂ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಬಳಕೆದಾರರು ಆಪಲ್ ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
This News Article is a Copy of GIZBOT
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm