ಬ್ರೇಕಿಂಗ್ ನ್ಯೂಸ್
12-08-20 05:36 pm Headline Karnataka News Network ಡಿಜಿಟಲ್ ಟೆಕ್
ನವದೆಹಲಿ, ಆಗಸ್ಟ್ 12: ಭೂಕಂಪನದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಮೊಬೈಲ್ ಫೀಚರ್ ಒಂದನ್ನು ಬಳಕೆಗೆ ತರುವ ಕುರಿತು ಗೂಗಲ್ ಮಾಹಿತಿ ನೀಡಿದೆ. ಈಗಾಗಲೇ ಆ್ಯಂಡ್ರಾಯ್ಡ್ ಆಧಾರಿತ ಭೂಕಂಪನ ಪತ್ತೆ ಹಚ್ಚುವ ಫೀಚರ್ ಅನ್ನು ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ಜಾರಿಗೊಳಿಸಲಾಗಿದೆ.
ಆ್ಯಂಡ್ರಾಯ್ಡ್ ಪೋನ್ ಗಳು ಭೂಕಂಪನ ಅಲರ್ಟ್ ಸಿಸ್ಟಮ್ ಅನ್ನು ಒಳಗೊಂಡಿರಲಿದ್ದು, ಈ ಸೌಲಭ್ಯ ಜಗತ್ತಿನಾದ್ಯಂತ ಜನರಿಗೆ ದೊರೆಯುತ್ತದೆ. ಇದರ ಪ್ರಕಾರ ಪ್ರತಿ ಆ್ಯಂಡ್ರಾಯ್ಡ್ ಫೋನ್ ಗಳು ಮಿನಿ ಸಿಸ್ಮೋಮೀಟರ್ ಆಗಿ ಬದಲಾಗುತ್ತದೆ. ಆ ಮೂಲಕ ಜಗತ್ತಿನ ಅತೀ ದೊಡ್ಡ ಭೂಕಂಪನ ಕುರಿತ ಎಚ್ಚರಿಕೆ ನೀಡುವ ನೆಟ್ ವರ್ಕ್ ಇದಾಗಿರಲಿದೆ ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ, ಈ ಫೀಚರ್ ಅನ್ನು ಮೊದಲು ಕ್ಯಾಲಿಪೋರ್ನಿಯಾದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 700 ಸಿಸ್ಮೋ ಮೀಟರ್ ಗಳನ್ನು ವಿವಿಧೆಡೆ ಅಳವಡಿಸಲಾಗಿತ್ತು. ಈ ಸಮಯದಲ್ಲಿ ಭೂಕಂಪವಾಗುವ 5 ಸೆಕೆಂಡುಗಳಿಗೂ ಮೊದಲು ಭೂಮಿ ಕಂಪಿಸುತ್ತಿರುವ ತರಂಗಾಂತರಗಳನ್ನು ಸಿಸ್ಮೋಮೀಟರ್ ಗಳು ರವಾನಿಸುತ್ತಿದ್ದವು. ಈ 5 ಸೆಕೆಂಡುಗಳು ಜನರ ಪ್ರಾಣ ಉಳಿಸಲು ನೆರವಾಗುವ ಸಾಧ್ಯತೆಯೂ ಇದೆ ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.
ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ಸ್ಮಾರ್ಟ್ ಪೋನ್ ಗಳೂ ಅತೀ ಸಣ್ಣದಾದ ಆ್ಯಕ್ಸಲರೋ ಮೀಟರ್ ಅನ್ನು ಒಳಗೊಂಡಿದ್ದು ಭೂಮಿ ಕಂಪಿಸುವಾಗ ಸಿಗ್ನಲ್ ಗಳನ್ನು ಪಡೆಯಲು ನೆರವಾಗುತ್ತದೆ. ಮಾತ್ರವಲ್ಲದೆ ಯಾವ ಸ್ಥಳದಲ್ಲಿ ಭೂಮಿ ಕಂಪಿಸುತ್ತಿದೆ ಎಂಬ ಮಾಹಿತಿಯನ್ನು ತಿಳಿಯಲು ಸಹಾಯಕವಾಗುತ್ತದೆ. ಈ ಫೀಚರ್ ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ ರಾಷ್ಟ್ರಗಳ ಆ್ಯಂಡ್ರಾಯ್ಡ್ ಪೋನ್ ಗಳಿಗೆ ಲಭ್ಯವಾಗುತ್ತದೆ ಎಂದು ಗೂಗಲ್ ತಿಳಿಸಿದೆ.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm