ಬ್ರೇಕಿಂಗ್ ನ್ಯೂಸ್
18-12-20 04:19 pm Source: GIZBOT Mutthuraju H M ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಹಾಗೂ ಸೊಶೀಯಲ್ ಮೀಡಿಯಾ ದೈತ್ಯ ಫೇಸ್ಬುಕ್ ವಿರುದ್ದ ಅಮೆರಿಕದ 10 ರಾಜ್ಯಗಳು ದಾವೆ ಹೂಡಿವೆ. ಮಾರುಕಟ್ಟೆಯಲ್ಲಿ ಪ್ರತಿಸ್ಫರ್ದಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ಗೂಗಲ್ ಹಾಗೂ ಫೇಸ್ಬುಕ್ ಅಕ್ರಮ ಒಪ್ಪಂದ ಮಾಡಿಕೊಂಡಿವೆ ಎಂದು ದೂರಲಾಗಿದೆ.
ಹೌದು, ಕೆಲ ದಿನಗಳ ಹಿಂದೆಯಷ್ಟೇ ಏಕಸ್ವಾಮ್ಯ ನೀತಿ ದುರುಪಯೋಗ ಮಾಡಿಕೊಂಡಿದೆ ಎಂದು ಫೇಸ್ಬುಕ್ ವಿರುದ್ದ ದೂರು ದಾಖಲಿಸಿದ್ದ ಅಮೆರಿಕದ ರಾಜ್ಯಗಳು, ಇದೀಗ ಗೂಗಲ್ ವಿರುದ್ದ ಕೂಡ ದಾವೆ ಹೂಡಿವೆ. ಜಾಹಿರಾತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ತೊಡೆದುಹಾಕಲು ಗೂಗಲ್ ಫೇಸ್ಬುಕ್ ಜೊತೆಗೆ ಅಕ್ರಮ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿ ಯುಎಸ್ ರಾಜ್ಯಗಳು ಮೂರನೇ ಆಂಟಿಟ್ರಸ್ಟ್ ಮೊಕದ್ದಮೆಯನ್ನು ಹೂಡಿವೆ.
ಗೂಗಲ್ನ ಕೆಲವು ನಿರೀಕ್ಷಿತ ಕ್ರಮಗಳು ಅದರ ಸಾಮಾನ್ಯ ಹುಡುಕಾಟ ಏಕಸ್ವಾಮ್ಯವನ್ನು ರಕ್ಷಿಸಿವೆ ಮತ್ತು ಪ್ರತಿಸ್ಪರ್ಧಿಗಳನ್ನು ಹೊರಗಿಟ್ಟಿವೆ. ಸ್ಪರ್ಧಾತ್ಮಕ ಆಯ್ಕೆಗಳ ಪ್ರಯೋಜನಗಳನ್ನು ಗ್ರಾಹಕರಿಂದ ಕಸಿದುಕೊಳ್ಳುತ್ತಿದೆ. ಇದರಿಂದ ಗ್ರಾಹಕರಿಗೆ ಹೊಸತನವನ್ನು ಅನುಭವಿಸಲು ಸಾಧ್ಯವನ್ನು ನೀಡುತ್ತಿಲ್ಲ. ಹೊಸ ಪ್ರವೇಶ ಅಥವಾ ವಿಸ್ತರಣೆಯನ್ನು ದುರ್ಬಲಗೊಳಿಸುತ್ತವೆ ಎಂದು ದೂರನ್ನು ನೀಡಲಾಗಿದೆ. ಇನ್ನು ಟೆಕ್ಸಾಸ್ ರಾಜ್ಯ ಈ ಮೊಕದ್ದಮೆಯ ನೇತೃತ್ವವನ್ನು ವಹಿಸಿದ್ದು, ಗೂಗಲ್ ವಿರುದ್ಧದ ಫೆಡರಲ್ ಪ್ರಕರಣದೊಂದಿಗೆ ಏಕೀಕರಿಸುವಂತೆ ಕೇಳಿದೆ.
ಗ್ರಾಹಕ ವ್ಯಾಪಾರ ಹಿತಾಸಕ್ತಿಗಳನ್ನು ಪರಿಗಣಿಸದೆ ಗೂಗಲ್ ತನ್ನ ಸರ್ಚ್ ಎಂಜಿನ್ ಅನ್ನು ಮರುವಿನ್ಯಾಸಗೊಳಿಸುವಂತೆ ಒತ್ತಾಯಿಸಲು ಈ ದೂರಿನಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ ಗೂಗಲ್ ಸ್ಪರ್ಧಿಗಳನ್ನು ಮಟ್ಟಹಾಕಲು ಒಪ್ಪಂದಗಳನ್ನು ಮಾಡಿಕೊಂಡಿದೆ. ಅದರ ಹುಡುಕಾಟ ಮತ್ತು ಜಾಹೀರಾತು ವ್ಯವಸ್ಥೆಗಳನ್ನು ಸ್ಮಾರ್ಟ್ ಸ್ಪೀಕರ್ಗಳು, ಕಾರುಗಳು, ಸ್ಮಾರ್ಟ್ಫೋನ್ಗಳು ಮತ್ತು ಹೆಚ್ಚಿನವುಗಳಲ್ಲಿ ಪಡೆಯುವಾಗ ಪ್ರತಿಸ್ಪರ್ಧಿಗಳನ್ನು ಲಾಕ್ ಔಟ್ ಮಾಡಲು ಪ್ರಯತ್ನಿಸಿದೆ ಎಂದು ಹೇಳಲಾಗಿದೆ.
ಇನ್ನು ಗೂಗಲ್ ಜಾಹೀರಾತು ಆದಾಯವು ನಿರಂತರವಾಗಿ ಬೆಳೆಯುತ್ತಲೇ ಇದ್ದರೂ, ಯುಎಸ್ ಆನ್ಲೈನ್ ಜಾಹೀರಾತು ಮಾರುಕಟ್ಟೆಯಲ್ಲಿ ಅದರ ಪಾಲು ಫೇಸ್ಬುಕ್, ಅಮೆಜಾನ್ ಮತ್ತು ಇತರ ಸ್ಪರ್ಧಿಗಳ ಒತ್ತಡಕ್ಕೆ ಮಣಿಯುತ್ತಿದೆ ಎಂದು ಇಮಾರ್ಕೆಟರ್ ಹೇಳಿದೆ. ಯುಎಸ್ ಜಾಹೀರಾತು ಮಾರುಕಟ್ಟೆಯ ಒಟ್ಟು ಶೇಕಡಾ 42.4 ಬಿಲಿಯನ್ (ಸರಿಸುಮಾರು 3,11,700 ಕೋಟಿ ರೂ.) ಗೆ ಈ ವರ್ಷ ಗೂಗಲ್ ಕೇವಲ 30 ಪ್ರತಿಶತದಷ್ಟು ಪಡೆದುಕೊಂಡಿದೆ ಎಂದು ಮಾರುಕಟ್ಟೆ ಟ್ರ್ಯಾಕರ್ ನಿರೀಕ್ಷಿಸಿದ್ದಾರೆ.
This News Article is a Copy of GIZBOT
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm