ಬ್ರೇಕಿಂಗ್ ನ್ಯೂಸ್
02-12-20 04:07 pm Source: GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ವಿವೋ ಕಂಪೆನಿ ತನ್ನ V20 ಸರಣಿಯಲ್ಲಿ ಬಹು ನಿರೀಕ್ಷಿತ ವಿವೋ V 20 ಪ್ರೊ 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ V20 ಸರಣಿಯಲ್ಲಿ ವಿವೊ V20 ಮತ್ತು ವಿವೋ V20SE ಅನ್ನು ಪರಿಚಯಿಸಲಾಗಿದೆ. ಸದ್ಯ ಇದೀಗ ಬಿಡುಗಡೆ ಆಗಿರುವ ವಿವೊ V20 ಪ್ರೊ 5G ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765G SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದೆ.
ಹೌದು, ವಿವೋ ಕಂಪೆನಿಯ ಹೊಸ ವಿವೋ V20 ಪ್ರೊ 5G ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು 6.44 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ 4,00mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಪ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಡಿಸ್ಪ್ಲೇ ವಿಶೇಷತೆ ವಿವೋ V20 ಪ್ರೊ 5G ಸ್ಮಾರ್ಟ್ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು ಆಮೋಲೆಡ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ HDR10 ರಿಫ್ರೆಶ್ರೇಟ್ ಅನ್ನು ಹೊಂದಿದೆ.

ಪ್ರೊಸೆಸರ್ ವೇಗ
ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765 G SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು,ಆಂಡ್ರಾಯ್ಡ್ 10 ಆಧಾರಿತ ಫನ್ಟಚ್ ಓಎಸ್ 11 ಸಾಫ್ಟ್ವೇರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೇಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ
ವಿವೋ V20 ಪ್ರೊ 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ ಐಸೊಸೆಲ್ GW1 ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಏಕವರ್ಣದ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 44 ಮೆಗಾಪಿಕ್ಸೆಲ್ ಸೆನ್ಸಾರ್ ಆಟೋಫೋಕಸ್ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಡ್ಯುಯೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇದು 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫ್ಲ್ಯಾಶ್ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಬ್ಲೂಟೂತ್ ವಿ 5.1, ಡ್ಯುಯಲ್-ಬ್ಯಾಂಡ್ ವೈ-ಫೈ, GPS, ನ್ಯಾವಿಕ್, ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಜೊತೆಗೆ ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ವಿವೋ V 20 ಪ್ರೊ 5G ಸ್ಮಾರ್ಟ್ಫೋನ್ ಭಾರತದಲ್ಲಿ 29,990 ರೂ. ಬೆಲೆಯನ್ನು ಹೊಂದಿದೆ. ಇದು ಅಮೆಜಾನ್, ಫ್ಲಿಪ್ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್, ಪೇಟಿಎಂ ಮಾಲ್, ಟಾಟಾ ಕ್ಲಿಕ್, ಮತ್ತು ಬಜಾಜ್ ಫಿನ್ಸರ್ವ್ ಇಎಂಐ ಸ್ಟೋರ್ ಮೂಲಕ ಲಭ್ಯವಾಗಲಿದೆ. ಆನ್ಲೈನ್ ಆಫರ್ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿಗೆ 2,000 ರೂ. ಹಾಗೂ ಎಕ್ಸಚೇಂಜ್ ಆಫರ್ನಲ್ಲಿ 2,500 ಹೆಚ್ಚುವರಿ ರಿಯಾಯಿತಿ,ನೀಡಲಿದೆ. ಈ ಫೋನ್ ಮಿಡ್ನೈಟ್ ಜಾಜಾ್ ಮತ್ತು ಸನ್ಸೆಟ್ ಮೆಲೊಡಿ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಿದೆ.
This News Article is a Copy of GIZBOT
14-12-25 11:37 pm
HK News Desk
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 11:10 pm
Mangalore Correspondent
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ವಂಚನೆ ;...
14-12-25 05:33 pm
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm