ಬ್ರೇಕಿಂಗ್ ನ್ಯೂಸ್
10-08-23 11:28 pm Source: Gizbot Kannada ಡಿಜಿಟಲ್ ಟೆಕ್
ವಿವೋ ಕಂಪೆನಿಯ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಭಾರಿ ಕ್ರೇಜ್ ಇದೆ. ಕ್ಯಾಮೆರಾ ಕೇಂದ್ರಿತ ಫೀಚರ್ಸ್ಗಳಿಂದಲೇ ಗಮನಸೆಳೆದಿರುವ ವಿವೋ ಸ್ಮಾರ್ಟ್ಫೋನ್ಗಳು ಸಾಕಷ್ಟು ಟ್ರೆಂಡ್ ಸೃಷ್ಟಿಸಿವೆ. ಇದೀ ಗ ತನ್ನ ಹೊಸ ವಿವೋ V29e ಸ್ಮಾರ್ಟ್ಫೋನ್ ಭಾರತಕ್ಕೆ ಎಂಟ್ರಿ ನೀಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್ಫೋನ್ ಫೀಚರ್ಸ್ ಇದೀಗ ಆನ್ಲೈನ್ನಲ್ಲಿ ಸೋರಿಕೆಯಾಗಿದೆ.
ಹೌದು, ವಿವೋ V29e ಸ್ಮಾರ್ಟ್ಫೋನ್ ಎಂಟ್ರಿ ನೀಡೋಕೆ ಕೆಲವು ದಿನಗಳಷ್ಟೇ ಬಾಕಿ ಇದೆ. ಇದೇ ಸಮಯದಲ್ಲಿ ವಿವೋ V29e ಸ್ಮಾರ್ಟ್ಫೋನ್ ಫೀಚರ್ಸ್ ವಿವರ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 400 ಸರಣಿಯ ಚಿಪ್ಸೆಟ್ನಲ್ಲಿ ರನ್ ಆಗಬಹುದು ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಿವೋ V29e ಸ್ಮಾರ್ಟ್ಫೋನ್ ಡಿಸ್ಪ್ಲೇ ನಿರೀಕ್ಷೆ?
ವಿವೋ V29e ಸ್ಮಾರ್ಟ್ಫೋನ್ 6.73 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಡಿಸ್ಪ್ಲೇ 20:9 ರಚನೆಯ ಅನುಪಾತದೊಂದಿಗೆ ಬರುವ ನಿರೀಕ್ಷೆಯಿದೆ. ಇದಲ್ಲದೆ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 3D ಕರ್ವ್ಡ್ ಡಿಸ್ಪ್ಲೇ ಇದಾಗಿದೆ.
ವಿವೋ V29e ಸ್ಮಾರ್ಟ್ಫೋನ್ ಪ್ರೊಸೆಸರ್ ಯಾವುದು?
ವಿವೋ V29e ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 480 5G SoC ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 13-ಆಧಾರಿತ FunTouchOS 13 ಬೆಂಬಲಿಸಲಿದೆ. ಹಾಗೆಯೇ 8GB RAM + 128GB ಮತ್ತು 8GB RAM + 256GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆ ಕೂಡ ನೀಡುವ ಸಾದ್ಯತೆಯಿದೆ.

ವಿವೋ V29e ಸ್ಮಾರ್ಟ್ಫೋನ್ ಕ್ಯಾಮೆರಾ ಸೆಟ್ಅಪ್
ವಿವೋ V29e ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಇರುವ ನಿರೀಕ್ಷೆಯಿದೆ. ಇನ್ನು ಎರಡನೇ ಕ್ಯಾಮೆರಾ ವಿವರಗಳು ತಿಳಿದುಬಂದಿಲ್ಲ. ಆದರೆ ಈ ಸ್ಮಾರ್ಟ್ಫೋನ್ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿರುವ ಸಾಧ್ಯತೆಯಿದೆ.
ವಿವೋ V29e ಸ್ಮಾರ್ಟ್ಫೋನ್ ಬ್ಯಾಟರಿ ಮತ್ತು ಇತರೆ
ವಿವೋ V29e ಸ್ಮಾರ್ಟ್ಫೋನ್ ಸ್ಮಾರ್ಟ್ಫೋನ್ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್ಬಿ ಟೈಪ್ ಸಿ ಪೋರ್ಟ್, ಹೆಡ್ಫೋನ್ ಜ್ಯಾಕ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ವಿವೋ V29e ಬೆಲೆ ಮತ್ತು ಲಭ್ಯತೆ
ವಿವೋ V29e ಸ್ಮಾರ್ಟ್ಫೋನ್
ಭಾರತದಲ್ಲಿ ಬೇಸ್ ಮಾಡೆಲ್ 30,000ರೂ.ಬೆಲೆಯಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್ಫೋನ್ ಶೀಘ್ರದಲ್ಲೇ ಭಾರತದಲ್ಲಿ ಬರಲಿದ್ದು, ಬಿಡುಗಡೆ ದಿನಾಂಕ ಹಾಗೂ ಲಭ್ಯತೆಯ ವಿವರಗಳು ಸದ್ಯದಲ್ಲೇ ಬಹಿರಂಗವಾಗುವ ನಿರೀಕ್ಷೆಯಿದೆ.
ಇದಲ್ಲದೆ ವಿವೋ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ವಿವೋ Y27 ಸ್ಮಾರ್ಟ್ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್ಫೋನ್ 6.5 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G85 SoC ಪ್ರೊಸೆಸರ್ ಪವರ್ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಬೆಂಬಲವನ್ನು ಸಹ ಹೊಂದಿದೆ. ಈ ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಇದು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದೆ.
Vivo V29E Smartphone has been Teased to launch in India Soon Expected Specs.
14-12-25 11:37 pm
HK News Desk
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 11:10 pm
Mangalore Correspondent
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ವಂಚನೆ ;...
14-12-25 05:33 pm
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm