ಬ್ರೇಕಿಂಗ್ ನ್ಯೂಸ್
13-07-23 07:26 pm Source: Gizbot Kannada ಡಿಜಿಟಲ್ ಟೆಕ್
ರಿಯಲ್ಮಿಯ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಕ್ರೇಜ್ ಇದೆ. ಈ ನಡುವೆ ರಿಯಲ್ಮಿ ಕಂಪೆನಿ ಇತರೆ ಸ್ಮಾರ್ಟ್ಡಿವೈಸ್ಗಳನ್ನೂ ಸಹ ಅನಾವರಣ ಮಾಡುತ್ತಿದ್ದು, ಅಗ್ಗದ ದರದಲ್ಲಿ ಅತ್ಯುತ್ತಮ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಇದರೊಂದಿಗೆ ಈಗ ಪ್ರಮುಖ ಇ-ಕಾಮರ್ಸ್ ಸೈಟ್ ರಿಯಲ್ಮಿ ಬಡ್ಸ್ಗೆ ಬರೋಬ್ಬರಿ 50% ರಿಯಾಯಿತಿ ಘೋಷಣೆ ಮಾಡಿದೆ.
ಹೌದು, ರಿಯಲ್ಮಿ ಬಡ್ಸ್ಗಳು ವಿಶೇಷವಾದ ವಿನ್ಯಾಸದ ಮೂಲಕ ಗಮನ ಸೆಳೆದಿದ್ದು, ಈ ನಡುವೆ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 (Realme Techlife Buds T100) ಗೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. ಈ ಬಡ್ಸ್ IPX5 ರೇಟಿಂಗ್ ಹೊಂದಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸೆಲಿಂಗ್ ಫೀಚರ್ಸ್ನೊಂದಿಗೆ ಇನ್ನೂ ಹತ್ತು ಹಲವು ಫೀಚರ್ಸ್ ಪಡೆದುಕೊಂಡಿದೆ. ಹಾಗಿದ್ರೆ, ಇದರ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರ ತಿಳಿಯೋಣ ಬನ್ನಿ.

ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಫೀಚರ್ಸ್: ಈ ಬಡ್ಸ್ ಅನ್ನು ಇಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುವ ಮುನ್ನ ನೀವು ಇದರ ಪ್ರಮುಖ ಫೀಚರ್ಸ್ ಕಡೆ ಕಣ್ಣಾಯಿಸಿ. ಅದರಂತೆ ಈ ಡಿವೈಸ್ನ ಬಡ್ಸ್ ಪಾಲಿಕಾರ್ಬೊನೇಟ್ನಿಂದ ನಿರ್ಮಾಣ ಆಗಿದ್ದು, VDI ಸ್ಪಾರ್ಕ್ ಫಿನಿಶ್ನೊಂದಿಗೆ A2 ಪಾಲಿಶ್ ಅನ್ನು ಪಡೆದುಕೊಂಡಿವೆ . ಈ ಮೂಲಕ ನೋಡಲು ಹಾಗೂ ಬಳಕೆ ಮಾಡಲು ಉತ್ತಮ ಎನಿಸುತ್ತವೆ.
ಉಳಿದಂತೆ 10mm ಡೈನಾಮಿಕ್ ಡ್ರೈವರ್ಗಳನ್ನು ಹೊಂದಿರುವ ಈ ಇಯರ್ಬಡ್ಸ್ PEEK+TPU ನಿಂದ ಟೈಟಾನಿಯಂ-ಲೇಪಿತ ಡಯಾಫ್ರಾಮ್ ಹೊಂದಿದ್ದು, ಇದರಿಂದಾಗಿ ಡೀಪ್ ಬೇಸ್ ಹಾಗೂ ಗರಿಗರಿಯಾದ ಆಡಿಯೊ ಅನುಭವವನ್ನು ಪಡೆದುಕೊಳ್ಳಬಹುದು. ಇದಲ್ಲದೆ ಇಯರ್ಬಡ್ಗಳು ಎಐ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸೆಲಿಂಗ್ (ENC) ತಂತ್ರಜ್ಞಾನವನ್ನು ಪಡೆದುಕೊಂಡಿದ್ದು, ಇದು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ.
ಅದರಲ್ಲೂ ಕರೆ ಸಂದರ್ಭದಲ್ಲಿ ಈ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸೆಲಿಂಗ್ ಫೀಚರ್ಸ್ ತುಂಬಾ ಅಗತ್ಯ ಇದ್ದು, ನೀವು ಎಂತಹುದೇ ಪ್ರದೇಶದಲ್ಲಿ ಇದ್ದರೂ ಸಹ ಸ್ಪಷ್ಟವಾದ ಧ್ವನಿಯನ್ನು ಕರೆಯಲ್ಲಿರುವವರು ಕೇಳಿಸಿಕೊಳ್ಳಬಹುದು. ಉಳಿದಂತೆ ಟಚ್ ಗೆಸ್ಚರ್ಗಳನ್ನು ಆಯ್ಕೆ ಇದ್ದು, ಇದರಿಂದ ಒಳಬರುವ ಕರೆಗಳು, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ವಾಲ್ಯೂಮ್ ಅನ್ನು ಕಂಟ್ರೋಲ್ ಮಾಡಬಹುದು.
ಇದರ ಜೊತೆಗೆ ಬಡ್ಸ್ನಲ್ಲಿ ನೀವು ಡಬಲ್ ಟ್ಯಾಪ್ ಮಾಡಿದರೆ ಕರೆಗಳಿಗೆ ಉತ್ತರಿಸುತ್ತದೆ ಅಥವಾ ತಿರಸ್ಕರಿಸುತ್ತದೆ ಮತ್ತು ಸಂಗೀತವನ್ನು ವಿರಾಮಗೊಳಿಸುತ್ತದೆ ಹಾಗೂ ಪ್ಲೇ ಮಾಡುತ್ತದೆ. ಹಾಗೂ ಟ್ರಿಪಲ್ ಟ್ಯಾಪಿಂಗ್ ಮಾಡುವ ಮೂಲ ಹಾಡುಗಳನ್ನು ಆಲಿಸಬಹುದು ಹಾಗೂ ದೀರ್ಘವಾಗಿ ಒತ್ತಿ ಹಿಡಿಯುವ ಮೂಲಕ ವಾಲ್ಯೂಮ್ ಅನ್ನು ಸರಿಹೊಂದಿಸಿಕೊಳ್ಳಬಹುದಾಗಿದೆ. ಇದು ಬಳಕೆದಾರರಿಗೆ ಇನ್ನಷ್ಟು ಸಂತೋಷ ಉಂಟು ಮಾಡಲಿದೆ.
ಈ ಡಿವೈಸ್ನ ಬ್ಯಾಟರಿ ಸಾಮರ್ಥ್ಯದ ವಿಚಾರಕ್ಕೆ ಬರುವುದಾದರೆ ಚಾರ್ಜಿಂಗ್ ಕೇಸ್ನೊಂದಿಗೆ 28 ಗಂಟೆಗಳವರೆಗೆ ಹಾಗೂ ಬಡ್ಸ್ನೊಂದಿಗೆ 6 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡಲಿದೆ. ಇದಕ್ಕಾಗಿ ಚಾರ್ಜಿಂಗ್ ಕೇಸ್ 400mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಹಾಗೆಯೇ ಫಾಸ್ಟ್ ಚಾರ್ಜಿಂಗ್ಗೆ ಬೆಂಬಲ ನೀಡುವ ಇದು 10 ನಿಮಿಷಗಳ ಚಾರ್ಜ್ನಲ್ಲಿ 120 ನಿಮಿಷಗಳವರೆಗೆ ಪ್ಲೇ ಬ್ಯಾಕ್ ನೀಡುತ್ತದೆ. ಉಳಿದಂತೆ IPX5 ರೇಟಿಂಗ್ ಹೊಂದಿದ್ದು, ಧೂಳು, ಸ್ಪ್ಲಾಶ್ನಿಂದ ಸಮಸ್ಯೆ ಇರೋದಿಲ್ಲ.
ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಬೆಲೆ ಹಾಗೂ ಆಫರ್ ವಿವರ: ಇನ್ನು ಈ ಡಿವೈಸ್ 2,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಇದನ್ನು ಅರ್ಧ ಬೆಲೆಗೆ ಖರೀದಿ ಮಾಡಬಹುದು. ಅಂದರೆ 1,499ರೂ.ಗಳ ಆಫರ್ ಬೆಲೆಗೆ ಕೊಂಡುಕೊಳ್ಳಬಹುದು. ಯಾಕೆಂದರೆ ಫ್ಲಿಪ್ಕಾರ್ಟ್ನಲ್ಲಿ ಇದಕ್ಕೆ 50% ರಿಯಾಯಿತಿ ನೀಡಲಾಗಿದೆ. ಈ ಆಫರ್ ಸಾಲುವುದಿಲ್ಲ ಎಂದಾದರೆ ಕೆಲವು ಬ್ಯಾಂಕ್ ಕಾರ್ಡ್ಗಳನ್ನು ಬಳಕೆ ಮಾಡುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ.
Realme Techlife Buds T100 get best Discount Details.
14-12-25 11:37 pm
HK News Desk
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 11:10 pm
Mangalore Correspondent
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ವಂಚನೆ ;...
14-12-25 05:33 pm
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm