ಬ್ರೇಕಿಂಗ್ ನ್ಯೂಸ್
30-06-23 07:42 pm Source: Gizbot ಡಿಜಿಟಲ್ ಟೆಕ್
ಇಯರ್ಬಡ್ಸ್ಗಳು ಇಂದು ಹೆಚ್ಚು ಜನಪ್ರಿಯವಾಗುತ್ತಾ ಸಾಗುತ್ತಿವೆ. ಇದರಿಂದಾಗಿಯೇ ಪ್ರಮುಖ ಸ್ಮಾರ್ಟ್ ಗ್ಯಾಜೆಟ್ ತಯಾರಿಕಾ ಸಂಸ್ಥೆಗಳು ಸುಧಾರಿತ ಫೀಚರ್ಸ್ ಇರುವ ಹೊಸ ಹೊಸ ಇಯರ್ಬಡ್ಸ್ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಈ ನಡುವೆ ಅಗ್ಗದ ಬೆಲೆಯ ಹೊಸ ಇಯರ್ಬಡ್ಸ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.
ಹೌದು, ಪ್ರಮುಖ ಸ್ಮಾರ್ಟ್ ಗ್ಯಾಜೆಟ್ ತಯಾರಿಕಾ ಕಂಪೆನಿ ಆಗಿರುವ ನಾಯ್ಸ್ (Noise) ತನ್ನ TWS ಇಯರ್ಬಡ್ಸ್ ಶ್ರೇಣಿಗೆ ಇದೀಗ ನಾಯ್ಸ್ ಬಡ್ಸ್ ಏರೋವನ್ನು (Noise Buds Aero) ವನ್ನು ಪರಿಚಯಿಸಿದೆ. ಇದು ಮ್ಯಾಟ್ ಫಿನಿಶ್ನಲ್ಲಿ ಕಾಣಿಸಿಕೊಂಡಿದ್ದು, ಬಡ್ಗಳು ಉತ್ತಮ ಕಾರ್ಯಕ್ಷಮತೆ ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಹೊಸ ಇಯರ್ಬಡ್ಸ್ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ತಿಳಿಯೋಣ.

ನಾಯ್ಸ್ ಬಡ್ಸ್ ಏರೋ ವಿನ್ಯಾಸ: ಈ ಇಯರ್ಬಡ್ಸ್ ಅನ್ನು ಸಂಗೀತ ಪ್ರೇಮಿಗಳು ಹಾಗೂ ಸದಾ ಗೇಮಿಂಗ್ನಲ್ಲಿ ತಲ್ಲೀನ ಆಗಿರುವವರನ್ನು ಗುರಿಯಾಗಿಸಿಕೊಂಡು ನಿರ್ಮಾಣ ಮಾಡಲಾಗಿದೆ. ಜೊತೆಗೆ ಆರಾಮದಾಯಕವಾಗಿ ಕಿವಿಯಲ್ಲಿ ಕೂರಲು ಇನ್ ಇಯರ್ ವಿನ್ಯಾಸ ಪಡೆದುಕೊಂಡಿದ್ದು, ಬಡ್ಸ್ಗಳು ಉತ್ತಮ ನೋಟ ಹೊಂದಿವೆ. ಬನ್ನಿ ಇವುಗಳ ಪ್ರಮುಖ ಫೀಚರ್ಸ್ ಬಗ್ಗೆ ತಿಳಿದುಕೊಳ್ಳೋಣ.
ನಾಯ್ಸ್ ಬಡ್ಸ್ ಏರೋ ಫೀಚರ್ಸ್: ಈ ವಿಶೇಷ ಇಯರ್ಬಡ್ಸ್ನ 50ms ನ ಪ್ರಭಾವಶಾಲಿ ಕಡಿಮೆ ಲೇಟೆನ್ಸಿ ಹೊಂದಿದ್ದು, ಮೀಸಲಾದ ಗೇಮಿಂಗ್ ಮೋಡ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ 13mm ಡ್ರೈವರ್ಗಳು ಮತ್ತು ಬ್ಲೂಟೂತ್ ಆವೃತ್ತಿ v5.3 ನೊಂದಿಗೆ ಬರಲಿದ್ದು, ಹೈಪರ್ಸಿಂಕ್ ತಂತ್ರಜ್ಞಾನ ಇರುವುದರಿಂದ ಕೇಸ್ ತೆರೆದ ತಕ್ಷಣ ಸಂಬಂಧಿತ ಡಿವೈಸ್ಗೆ ಬೇಗ ಸಿಂಕ್ ಆಗುತ್ತದೆ.

ಇದರೊಂದಿಗೆ ಎನ್ವಿರಾನ್ಮೆಂಟಲ್ ಸೌಂಡ್ ರೆಡ್ಯೂಕ್ಷನ್ (ESR) ಆಯ್ಕೆ ಇದ್ದು, ಇದು ಪರಿಸರದಲ್ಲಿನ ಗೊಂದಲವನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ IPX5 ರೇಟಿಂಗ್ ಹೊಂದಿದ್ದು, ನೀರು ನಿರೋಧಕವಾಗಿದೆ. ಈ ಮೂಲಕ ಹೊರಾಂಗಣ ಚಟುವಟಿಕೆಗಳಿಗೆ ಅತ್ಯಂತ ಸೂಕ್ತ ಆಯ್ಕೆಯಾಗಿದೆ ಎಂದರೆ ತಪ್ಪಾಗಲಾರದು. ಅಂದರೆ ಮಳೆ ಅಥವಾ ಇನ್ಯಾವುದೇ ನೀರಿಗೆ ಒಗ್ಗಿಕೊಂಡರೂ ಯಾವುದೇ ಸಮಸ್ಯೆ ಆಗುವುದಿಲ್ಲ.
ನಾಯ್ಸ್ ಬಡ್ಸ್ ಏರೋ ಬ್ಯಾಟರಿ ಸಾಮರ್ಥ್ಯ: ಈ ಡಿವೈಸ್ ಉತ್ತಮ ಬ್ಯಾಟರಿ ಬ್ಯಾಕಪ್ ನೀಡಲಿದ್ದು, ಗೇಮಿಂಗ್ ಆಡುವಾಗ 45 ಗಂಟೆಗಳ ಬ್ಯಾಟರಿ ಬ್ಯಾಕಪ್ ಲಭ್ಯ ಆಗಲಿದ್ದು, 10 ನಿಮಿಷಗಳ ಚಾರ್ಜ್ನಲ್ಲಿ 120 ನಿಮಿಷಗಳ ಗೇಮಿಂಗ್ ಟೈಮ್ ನೀಡಲಿದೆ. ಇದರಿಂದಾಗಿ ನೀವು ಪದೇ ಪದೇ ಚಾರ್ಜ್ ಹಾಕುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಚಾರ್ಜಿಂಗ್ಗಾಗಿ ಯುಎಸ್ಬಿ ಟೈಪ್ ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ.
ನಾಯ್ಸ್ ಬಡ್ಸ್ ಏರೋ ಬ್ಯಾಟರಿ ಬೆಲೆ ಹಾಗೂ ಲಭ್ಯತೆ: ಈ ನಾಯ್ಸ್ ಬಡ್ಸ್ ಏರೋ ಗೆ 799ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಜುಲೈ 1, 2023 ರ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಮುಕ್ತವಾಗಲಿದೆ. ಜೊತೆಗೆ ಮೈಂತ್ರಾ ಹಾಗೂ ಗೋ ನಾಯ್ಸ್. ಕಾಮ್ನಲ್ಲಿ ಖರೀದಿ ಮಾಡಬಹುದು. ಈ ಇಯರ್ಬಡ್ಸ್ ಚಾರ್ಕೋಲ್ ಬ್ಲಾಕ್ ಮತ್ತು ಸ್ನೋ ವೈಟ್ ಎಂಬ ಎರಡು ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಇದರೊಂದಿಗೆ GOVO ಸಹ GOVO ಗೋಬಡ್ಸ್ 945 ಟ್ರೂ ವೈರ್ಲೆಸ್ ಇಯರ್ಬಡ್ಸ್ ಅನ್ನು ಸಹ ಅನಾವರಣ ಮಾಡಿದೆ. ಈ ಇಯರ್ಬಡ್ ಅಸಾಧಾರಣ ಆಡಿಯೊದ ಭರವಸೆ ನೀಡಲಿದ್ದು, ಕ್ರೋಮ್ ಎಕ್ಸ್ ತಂತ್ರಜ್ಞಾನದದೊಂದಿಗೆ ಕಾಣಿಸಿಕೊಂಡಿವೆ. ಇದರೊಂದಿಗೆ ಡೈನಾಮಿಕ್ 12 ಎಂಎಂ ಡ್ರೈವರ್ಗಳ ಮೂಲಕ ಡೀಪ್ ಬೇಸ್ ಆಯ್ಕೆ ಹೊಂದಿದ್ದು, ಬ್ಲೂಟೂತ್ ಆವೃತ್ತಿ V5.3 ನೊಂದಿಗೆ ಪ್ಯಾಕ್ ಆಗಿದೆ. ಇದು 30 ಅಡಿಗಳವರೆಗೆ ತಡೆರಹಿತ ಸಂಪರ್ಕವನ್ನು ನೀಡುತ್ತದೆ.
Noise Buds Aero launched for RS 799 know specs details.
14-12-25 11:37 pm
HK News Desk
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
Earthqake, Davangere, Vijayanagara: ದಾವಣಗೆರೆ,...
13-12-25 10:47 pm
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
14-12-25 11:10 pm
Mangalore Correspondent
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ವಂಚನೆ ;...
14-12-25 05:33 pm
Shivamogga Double Murder: ಶಿವಮೊಗ್ಗದಲ್ಲಿ ಡಬಲ್...
13-12-25 12:51 pm