ಬ್ರೇಕಿಂಗ್ ನ್ಯೂಸ್
09-06-23 07:31 pm Source: Gizbot ಡಿಜಿಟಲ್ ಟೆಕ್
ಟೆಕ್ ಮಾರುಕಟ್ಟೆಯಲ್ಲಿ ಆಸುಸ್ ಸಂಸ್ಥೆಯು ಪ್ರಮುಖ ಬ್ರ್ಯಾಂಡ್ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಮುಖ್ಯವಾಗಿ ಆಸುಸ್ ಜೆನ್ಫೋನ್ ಸರಣಿಯ ಫೋನ್ಗಳ ಮೂಲಕ ಸದ್ದು ಮಾಡಿದ್ದು, ಜೆನ್ಫೋನ್ಗಳು ಆಕರ್ಷಕ ಫೀಚರ್ಸ್ ಪಡೆದಿವೆ. ಅದರ ಮುಂದಿನ ಭಾಗವಾಗಿ ಆಸುಸ್ ಸಂಸ್ಥೆಯು ಇದೀಗ ತನ್ನ ಜೆನ್ಫೋನ್ ಸರಣಿಯಲ್ಲಿ ಹೊಸದಾಗಿ ಜೆನ್ಫೋನ್ 10 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ.
ಹೌದು, ಆಸುಸ್ ಸಂಸ್ಥೆಯು ಈಗ 'ಆಸುಸ್ ಜೆನ್ಫೋನ್ 10' (Asus Zenfone 10) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದೇ ಜೂನ್ 29 ರಂದು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಫೋನಿನ ಬಗ್ಗೆ ಕೆಲವು ಫೀಚರ್ಸ್ ಲೀಕ್ ಆಗಿದ್ದು, ಗ್ರಾಹಕರನ್ನು ಭಾರೀ ಕುತೂಹಲ ಮೂಡಿಸಿವೆ. ಈ ಫೊನ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಹೊಂದಿರುವುದು ಬಹುತೇಕ ಖಚಿತವಾಗಿದೆ.
ನೂತನ ಆಸುಸ್ ಜೆನ್ಫೋನ್ 10 ಈ ಹಿಂದಿನ ಜೆನ್ಫೋನ್ಗಳಿಗಿಂತ ಸಾಕಷ್ಟು ಅಪ್ಡೇಟ್ ಆಗಿದ್ದು, ಕೆಲವೊಂದು ಆಕರ್ಷಕ ಫೀಚರ್ಸ್ಗಳೊಂದಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಲೀಕ್ ಮಾಹಿತಿ ಪ್ರಕಾರ ಈ ಫೋನ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ.
ಜೊತೆಗೆ ಅಧಿಕ ರೆಸಲ್ಯೂಶನ್ ಸ್ನ್ಯಾಪ್ಡ್ರಾಗನ್ 8 ಜೆನ್ 2 SoC ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಹಾಗದರೆ ಲೀಕ್ ಮಾಹಿತಿಯಂತೆ ಈ ಫೋನಿನ ಇತರೆ ಫೀಚರ್ಸ್ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಆಸುಸ್ ಜೆನ್ಫೋನ್ 10 ಸ್ಮಾರ್ಟ್ಫೋನ್ 6.3 ಇಂಚಿನ AMOLED ಡಿಸ್ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿಸ್ಪ್ಲೇಯು 1,080 x 2,400 ಪಿಕ್ಸಲ್ ರೆಸಲ್ಯೂಶನ್ ಹೊಂದಿರಲಿದ್ದು, ಜೊತೆಗೆ 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೇ ಈ ಡಿಸ್ಪ್ಲೇಯು 20:9 ಅನುಪಾತವನ್ನು ಒಳಗೊಂಡಿರಲಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿರುತ್ತದೆ.
ಹಾಗೆಯೇ ಆಸುಸ್ ಜೆನ್ಫೋನ್ 10 ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಇದರೊಂದಿಗೆ 16GB RAM ಮತ್ತು 512 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿರಲಿದೆ. ಇರತೆ ವೇರಿಯಂಟ್ ಆಯ್ಕೆ ಪಡೆದಿರುವ ನಿರೀಕ್ಷೆ ಸಹ ಇದೆ.
ಈ ಕಾಂಪ್ಯಾಕ್ಟ್ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿರಲಿದೆ. ಇನ್ನೊಂದು ಕ್ಯಾಮೆರಾವು ಅಲ್ಟ್ರಾ-ವೈಡ್ 12 ಮೆಗಾ ಪಿಕ್ಸಾಲ್ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಾಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಸೆಲ್ಫಿ ಕ್ಯಾಮೆರಾವು ವಿಡಿಯೋ ಕರೆ ಹಾಗೂ ಫೋಟೋಗಳಿಗೆ ಪೂರಕ ಇರಲಿದೆ.
ಆಸುಸ್ ಜೆನ್ಫೋನ್ 10 ಫೋನಿನ ಬ್ಯಾಟರಿಗೆ ಸಂಬಂಧಿಸಿದಂತೆ ನೋಡುವುದಾರೆ, ಈ ಫೋನ್ 5,000 mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿರಲಿದೆ. ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿದೆ.
ಇನ್ನು ಆಸುಸ್ ಜೆನ್ಫೋನ್ 10 ಫೋನ್ ಆರಂಭಿಕ ವೇರಿಯಂಟ್ ಬೆಲೆಯು 16GB RAM + 256GB ವೇರಿಯಂಟ್ಗೆ $749 (ಭಾರತದಲ್ಲಿ ಅಂದಾಜು 62,000ರೂ) ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಮೂನ್ಲೈಟ್ ವೈಟ್, ಮಿಡ್ನೈಟ್ ಬ್ಲಾಕ್, ಸ್ಟಾರಿ ಬ್ಲೂ ಮತ್ತು ಸನ್ಸೆಟ್ ರೆಡ್ ಬಣ್ಣಗಳಲ್ಲಿ ಲಭ್ಯ ಆಗಲಿದೆ ಎನ್ನಲಾಗಿದೆ.
asus zenfone 10 confirmed to launch on june 29 details here.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm