ಬ್ರೇಕಿಂಗ್ ನ್ಯೂಸ್
17-12-22 06:51 pm Source: Vijayakarnataka ಡಿಜಿಟಲ್ ಟೆಕ್
ಯಾವುದೇ ಒಂದು ಹೊಸ ತಂತ್ರಜ್ಞಾನವು ಒಬ್ಬರ ಜೀವ ಉಳಿಸುತ್ತದೆ ಎಂದರೆ ಅದಕ್ಕೆ ಖಂಡಿತವಾಗಿ ಈ ಮಾನವ ಜಗತ್ತು ತಲೆಬಾಗಲೇಬೇಕು. ಇತ್ತೀಚಿಗಷ್ಟೇ ಹಿಮಪ್ರದೇಶದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರ ಜೀವವನ್ನು ಆಪಲ್ ಐಫೋನ್ 14 ಸ್ಮಾರ್ಟ್ಫೋನಿನಲ್ಲಿರುವ ಉಪಗ್ರಹ ಆಧಾರಿತ ವ್ಯವಸ್ಥೆಯ (SOS ವೈಶಿಷ್ಟ್ಯವೊಂದು ಉಳಿಸಿದ ಸುದ್ದಿಯೊಂದು ವರದಿಯಾಗಿತ್ತು. ಇದೀಗ ಇಂತಹುದೇ ಮತ್ತೊಂದು ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. ಆಪಲ್ ಐಫೋನ್ 14 ಸ್ಮಾರ್ಟ್ಫೋನ್ನಲ್ಲಿರುವ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವು ಅಮೆರಿಕದ ಕ್ಯಾಲಿಫೋರ್ನಿಯಾದ ಏಂಜಲೀಸ್ ದಂಪತಿಯ ಜೀವವನ್ನು ಉಳಿಸಿದೆ ಎಂದು ತಿಳಿದುಬಂದಿದೆ.!
ಹೌದು, ಅಮೆರಿಕದ ಕ್ಯಾಲಿಫೋರ್ನಿಯಾದ ಏಂಜಲೀಸ್ ರಾಷ್ಟ್ರೀಯ ಅರಣ್ಯದ ಹೆದ್ದಾರಿಯಲ್ಲಿ ಪತಿ-ಪತ್ನಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಅಪಘಾತ ತೀರ್ವತೆಗೆ ಕಾರು ಪರ್ವತದಿಂದ ಸುಮಾರು 300 ಅಡಿ ಕೆಳಗೆ ಬಿದ್ದಿದ್ದು, ಈ ಅಪಘಾತವನ್ನು ಯಾರೂ ವೀಕ್ಷಿಸದೇ ಇರುವುದರಿಂದ ಇವರಿಗೆ ಯಾರ ಸಹಾಯವು ದೊರೆತಿರಲಿಲ್ಲ. ಕಾರು ಗುಡ್ಡದಲ್ಲಿ ಸಿಲುಕಿದ ಪರಿಣಾಮದಿಂದಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಈ ದಂಪತಿಯನ್ನು ಕಾಪಾಡಿರುವುದು ಐಫೋನ್ 14 ಸ್ಮಾರ್ಟ್ಫೋನಿನಲ್ಲಿರುವ ಇತ್ತೀಚಿನ 'ಕ್ರ್ಯಾಶ್ ಡಿಟೆಕ್ಷನ್' ತಂತ್ರಜ್ಞಾನ.! ಹಾಗಾದರೆ, ಇದು ಹೇಗೆ ಸಾಧ್ಯವಾಯಿತು ನೋಡೋಣ ಬನ್ನಿ.
ಆಪಲ್ ಐಫೋನ್ 14 ಸರಣಿಯಲ್ಲಿ ಪರಿಚಯಿಸಲಾಗಿರುವ ಹೊಸ 'ಕ್ರ್ಯಾಶ್ ಡಿಟೆಕ್ಷನ್' ವೈಶಿಷ್ಟ್ಯವು ಈ ದಂಪತಿಗಳ ಕಾರು ಅಪಘಾತವಾಗಿರುವುದನ್ನು ಸ್ವಯಂಚಾಲಿತವಾಗಿ ಗಮನಿಸಿ ತುರ್ತು ಸಂಖ್ಯೆಯನ್ನು ಸಂಪರ್ಕಿಸಿದೆ. ಬಳಿಕ ಸ್ಯಾಟಲೈಟ್ SOS ವೈಶಿಷ್ಟ್ಯವನ್ನು ಬಳಸಿ ಸಹಾಯಕ್ಕಾಗಿ ಸ್ವಯಂಚಾಲಿತವಾಗಿ ಆಪಲ್ ಕೇರ್ಗೆ ಕರೆ ಮಾಡಿದೆ. ನಂತರ ಈ ಬಗ್ಗೆ ತಿಳಿದ ಆಪಲ್ ಸಂಸ್ಥೆಯು ಪೊಲೀಸರಿಗೆ ಮಾಹಿತಿ ಒದಗಿಸಿದ್ದು, ಹೆಲಿಕಾಪ್ಟರ್ ಸಹಾಯದಿಂದ ಇಬ್ಬರನ್ನೂ ರಕ್ಷಿಸಲಾಗಿದೆ. ಇದೊಂದು ತೀರ್ವ ಅಪಘಾತವಾದರೂ ತಂತ್ರಜ್ಞಾನದ ಸಹಾಯದಿಂದ ಈ ದಂಪತಿ ಮರುಜೀವ ಪಡೆದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಏನಿದು 'ಕ್ರ್ಯಾಶ್ ಡಿಟೆಕ್ಷನ್' ವೈಶಿಷ್ಟ್ಯ
ನೂತನ iPhone 14 ಸರಣಿ ಸ್ಮಾರ್ಟ್ಫೋನ್ಗಳು ಸಾಧ್ಯವಾದಷ್ಟು ನಿಖರವಾಗಿ ಕ್ರ್ಯಾಶ್ ಡೇಟಾ( ಅಪಘಾತ ಸಂಭವಿಸಿದಲ್ಲಿ) ಮತ್ತು ನೈಜ-ಪ್ರಪಂಚದ ಡ್ರೈವಿಂಗ್ ಡೇಟಾವನ್ನು ಒದಗಿಸಲಿವೆ ಎಂದು ಆಪಲ್ ಹೇಳಿಕೊಂಡಿದೆ. ಹೈ ಜಿ-ಫೋರ್ಸ್ ಅಕ್ಸೆಲೆರೊಮೀಟರ್ (high g‑force accelerometer) ವೈಶಿಷ್ಟ್ಯವು ನಿಖರವಾಗಿ ಕ್ರ್ಯಾಶ್ ಡೇಟಾವನ್ನು ಗುರುತಿಸಲಿದ್ದರೆ, ಸುಸಜ್ಜಿತ HDR ಗೈರೊಸ್ಕೋಪ್ ವೈಶಿಷ್ಟ್ಯವು "ಕಾರಿನಲ್ಲಿ ಆದಂತಹ ತೀವ್ರವಾದ ಬದಲಾವಣೆಗಳನ್ನು" ಪತ್ತೆ ಮಾಡುತ್ತದೆ. ಇದಲ್ಲದೆ, ಏರ್ಬ್ಯಾಗ್ಗಳಿಂದ ಉಂಟಾಗಬಹುದಾದ ಒತ್ತಡದ ಬದಲಾವಣೆಗಳನ್ನು ಪತ್ತೆಹಚ್ಚಲು iPhone 14 ಸರಣಿ ಫೋನ್ಗಳನ್ನು ಬಾರೋಮೀಟರ್ ಅನ್ನು ಪ್ರೋಗ್ರಾಮ್ ಮಾಡಲಾಗಿದೆ. ಇದರಿಂದ ಡ್ರೈವಿಂಗ್ ವೇಳೆ ಯಾವುದೇ ಅಪಘಾತ ಸಂಭವಿಸಿದರೆ, iPhone 14 ಸರಣಿ ಸ್ಮಾರ್ಟ್ಫೋನ್ಗಳು ಸ್ವಯಂಚಾಲಿತವಾಗಿ ತುರ್ತು ಸೇವೆಗಳನ್ನು ಚಾಲನೆಗೊಳಿಸಿ, ಅಪಘಾತದ ಸಂದರ್ಭದಲ್ಲಿ ನಿಮ್ಮ ತುರ್ತು ಸಂಪರ್ಕಗಳನ್ನು ಸಂಪರ್ಕಿಸುತ್ತವೆ.
ಸಾಮಾನ್ಯವಾಗಿ ಅಪಘಾತ ಸಂಭವಿದ ವೇಳೆ ವಾಹನ ಚಾಲಕ ಮತ್ತು ಜೊತೆಯಲ್ಲಿ ಇರುವವರು ಪ್ರಜ್ಞೆ ತಪ್ಪುವುದು ಸಂಭವಿಸುತ್ತದೆ. ಒಂದು ವೇಳೆ ಅವರು ಎಚ್ಚರವಾಗಿದ್ದರೂ ಸಹ ಸ್ಮಾರ್ಟ್ಫೋನ್ ಅನ್ನು ಬಳಸಿ ಸಹಾಯ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ಅರಿತು ಉನ್ನತ ಡೈನಾಮಿಕ್ ಶ್ರೇಣಿಯ (HDR) ಗೈರೊಸ್ಕೋಪ್ ಮತ್ತು ಹೊಸದಾಗಿ ಹೈ ಜಿ-ಫೋರ್ಸ್ ಅಕ್ಸೆಲೆರೊಮೀಟರ್ (high g‑force accelerometer) ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವೈಶಿಷ್ಟ್ಯಗಳು ಅಪಘಾತದ ಸಂದರ್ಭದಲ್ಲಿ ತುರ್ತು ಸಂಪರ್ಕಗಳನ್ನು ಸಂಪರ್ಕಿಸಿ ಅಪಘಾತದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ಇಷ್ಟೇ ಅಲ್ಲದೇ, ಈ ವೈಶಿಷ್ಟ್ಯಗಳ ಸಹಾಯದಿಂದ ನಿಖರವಾದ ಡ್ರೈವಿಂಗ್ ಡೇಟಾ ಸಹ ಸಿಗಲಿದೆ. ವೇಗವರ್ಧನೆಗಳನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿರುವ iPhone 14 ಸ್ಮಾರ್ಟ್ಫೋನ್ಗಳು ಒತ್ತಡದ ಬದಲಾವಣೆಗಳನ್ನು ಪತ್ತೆಹಚ್ಚಿ ಮೊದಲೇ ಮಾಹಿತಿ ಒದಗಿಸುವಷ್ಟು ಶಕ್ತವಾಗಿವೆ.
ನೀವು ವಾಹನ ಚಾಲನೆ ಮಾಡುವಾಗ, ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವು ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು, ಆಪಲ್ "ಹೆಡ್-ಆನ್, ರಿಯರ್-ಎಂಡ್, ಸೈಡ್-ಇಂಪ್ಯಾಕ್ಟ್ ಮತ್ತು ರೋಲ್ಓವರ್ ಕ್ರ್ಯಾಶ್ ಟೆಸ್ಟ್ಗಳನ್ನು ನಿರ್ವಹಿಸುವ ಮೂಲಕ ಸುಧಾರಿತ ಚಲನೆಯ ಅಲ್ಗಾರಿದಮ್ಗಳನ್ನು ಅಭಿವೃದ್ಧಿಪಡಿಸಿದೆ. ಈ ವೈಶಿಷ್ಟ್ಯವು 1 ಮಿಲಿಯನ್ ಗಂಟೆಗಳ ನೈಜ-ಜಗತ್ತಿನ ಡ್ರೈವಿಂಗ್ ಡೇಟಾದಿಂದ ಅಭಿವೃದ್ಧಿಗೊಂಡಿದೆ ಎಂದು ಆಪಲ್ ಹೇಳಿಕೊಂಡಿದೆ. ಈ ಎಲ್ಲಾ ಹೊಸ ಅಲ್ಗಾರಿದಮ್ಗಳು ಮತ್ತು ಹ್ಯಾಂಡ್ಸೆಟ್ ಘಟಕಗಳು ಕಾರ್ ಕ್ರ್ಯಾಶ್ಗಳನ್ನು ಪತ್ತೆಹಚ್ಚಲು iPhone 14 ಫೋನ್ಗಳಿಗೆ ಸಹಾಯ ಮಾಡುತ್ತವೆ. ಇನ್ನು ಈ ಹೊಸ iPhone 14 ಸರಣಿಯಲ್ಲಿನ ಮೈಕ್ರೊಫೋನ್ ಸಾಮಾನ್ಯವಾಗಿ ಘರ್ಷಣೆಯಿಂದ ಉಂಟಾಗುವ ತೀವ್ರ ಶಬ್ದಗಳನ್ನು ಪತ್ತೆಹಚ್ಚಲು ಧ್ವನಿ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಆಪಲ್ ಹೇಳುತ್ತದೆ ಮತ್ತು ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುವ ಭರವಸೆಯನ್ನು ಸಹ ನೀಡಿದೆ.
Apple Iphone 14 Saves Life Of 2 Full Details.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm