ಬ್ರೇಕಿಂಗ್ ನ್ಯೂಸ್
29-10-22 08:59 pm Source: Vijayakarnataka ಡಿಜಿಟಲ್ ಟೆಕ್
ಚೀನಾ ಮೂಲದ ಹೆಸರಾಂತ ಟೆಕ್ ಬ್ರ್ಯಾಂಡ್ Xiaomi ತನ್ನ ಅತ್ಯಾಧುನಿಕ Xiaomi Mi TV ES70 ಸ್ಮಾರ್ಟ್ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಧುನಿಕ ಸ್ಮಾರ್ಟ್ಟಿವಿ ಉದ್ಯಮದಲ್ಲಿ ಗಮನಸೆಳೆಯುವಂತಹ ಮಲ್ಟಿ-ಪಾರ್ಟಿಶನ್ ಬ್ಯಾಕ್ಲೈಟಿಂಗ್ ವೈಶಿಷ್ಟ್ಯದಲ್ಲಿ ಈ ಹೊಸ ಸ್ಮಾರ್ಟ್ಟಿವಿಯನ್ನು ಪರಿಚಯಿಸಲಾಗಿದ್ದು, ಇದರ ಜೊತೆಗೆ ಗಮನಸೆಳೆಯುವಂತಹ 70 ಇಂಚಿನ 4K ಡಿಸ್ಪ್ಲೇ, 97.8% ಸ್ಕ್ರೀನ್ ಟು ಬಾಡಿ ಅನುಪಾತ, 1.07 ಶತಕೋಟಿ ಕಲರ್ ಸಪೋರ್ಟ್, ಮೀಡಿಯಾಟೆಕ್ MT9638 A55 ಕ್ವಾಡ್-ಕೋರ್ ಪ್ರೊಸೆಸರ್ ಮತ್ತು ಸ್ಕ್ರೀನ್ ಪ್ರೊಜೆಕ್ಷನ್ ನಂತಹ ವೈಶಿಷ್ಟ್ಯಗಳನ್ನು ಸಹ ಹೊತ್ತು ಬಂದಿದೆ. ಹಾಗಾದರೆ, ನೂತನ Xiaomi Mi TV ES70 ಸ್ಮಾರ್ಟ್ಟಿವಿ ಹೇಗಿದೆ?, ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Xiaomi Mi TV ES70 ಸ್ಮಾರ್ಟ್ಟಿವಿಯ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, ನೂತನ Xiaomi Mi TV ES 70 ಸ್ಮಾರ್ಟ್ಟಿವಿಯಲ್ಲಿ 70 ಇಂಚಿನ 4K ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್ಪ್ಲೇಯು 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಜೊತೆಗೆ 97.8% ಸ್ಕ್ರೀನ್ ಟು ಬಾಡಿ ಅನುಪಾತದಲ್ಲಿದೆ. ಡಿಸ್ಪ್ಲೇಯ ಇತರೆ ವೈಶಿಷ್ಟ್ಯಗಳಲ್ಲಿ, DCI-P3 94% ವೈಡ್ ಕಲರ್ ಗ್ಯಾಮಟ್, 1.07 ಶತಕೋಟಿ ಕಲರ್ ಸಪೋರ್ಟ್, MEMC ಮೋಷನ್ ಸಂಪ್ಲಿಮೆಂಟರಿ ಫ್ರೇಮ್ ಮತ್ತು ಯೋಗ್ಯವಾದ ವೃತ್ತಿಪರ ಪ್ರದರ್ಶನ-ಮಟ್ಟದ ಬಣ್ಣದ ನಿಖರತೆಯಂತಹ ವೈಶಿಷ್ಟ್ಯಗಳಿವೆ.
ಈ Xiaomi Mi TV ES70 ಸ್ಮಾರ್ಟ್ಟಿವಿಯ ಪ್ರಮುಖ ವಿಶೇಷತೆಯಾಗಿ ಆಧುನಿಕ ಮಲ್ಟಿ ಪಾರ್ಟಿಶನ್ ಬ್ಯಾಕ್ಲೈಟ್ ಟೆಕ್ನಾಲಜಿಯನ್ನು ತರಲಾಗಿದೆ. ಈ ತಂತ್ರಜ್ಞಾನವು ಇದು 700 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಜೊತೆಗೆ 4,096-ಲೆವೆಲ್ ಡಿಮ್ಮಿಂಗ್ ಬೆಂಬಲಿಸುತ್ತದೆ. ಜೊತೆಗೆ ಇದರ ಎಂಬೆಡೆಡ್ ಸೂಪರ್-ರೆಸಲ್ಯೂಶನ್ ಅಲ್ಗಾರಿದಮ್ ಇಮೇಜನ್ನು ರಿಯಲ್ ಟೈಂನಲ್ಲಿ ವಿಶ್ಲೇಷಿಸಲಿದೆ ಮತ್ತು ನಾಯ್ಸ್ ಕಂಟ್ರೋಲ್ ಹೊಂದಿದೆ. ಇದು ಲೋ-ರೆಸಲ್ಯೂಶನ್ ಚಲನಚಿತ್ರವನ್ನು ನೋಡುವಾಗಲೂ ಸಹ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡಲಿದೆ.
Xiaomi Mi TV ES70 ಸ್ಮಾರ್ಟ್ಟಿವಿಯಲ್ಲಿ 2GB RAM+32GB ಇಂಟರ್ ಸ್ಟೋರೇಜ್ ಜೊತೆಗೆ ಜೋಡಲಾಗಿರುವ ಸಾಮಾನ್ಯ ಮೀಡಿಯಾಟೆಕ್ MT9638 A55 ಕ್ವಾಡ್-ಕೋರ್ ಪ್ರೊಸೆಸರ್ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ, ಮೂರು HDMI ಮತ್ತು ಎರಡು USB ಪೋರ್ಟ್ಗಳು, AV ಇನ್ಪುಟ್, 2,4GHz/5GHz ಡ್ಯುಯಲ್-ಬ್ಯಾಂಡ್ Wi-Fi ಬೆಂಬಲ, ನೆಟ್ವರ್ಕ್ ಪೋರ್ಟ್ ಮತ್ತು ಆಂಟೆನಾ ಇಂಟರ್ಫೇಸ್ನಂತಹ ವೈಶಿಷ್ಟ್ಯಗಳಿವೆ. ಜೊತೆಗೆ ಎರಡು 12.5W ಹೈ-ಪವರ್ ಆಡಿಯೊ ಸಿಸ್ಟಮ್ಗಳನ್ನು ಸಹ ನಾವು ನೋಡಬಹುದು.
Xiaomi Mi TV ES70 ಸ್ಮಾರ್ಟ್ಟಿವಿಯ ಬೆಲೆ ಎಷ್ಟು?
ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿರುವ Xiaomi Mi TV ES70 ಸ್ಮಾರ್ಟ್ಟಿವಿಯ ಬೆಲೆಯನ್ನು 4,499 ಯುವಾನ್ (ಅಂದಾಜು 51,046 ರೂಪಾಯಿಗಳು) ಬೆಲೆಗೆ ನಿಗಧಿಪಡಿಸಲಾಗಿದೆ. ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಈ ಸ್ಮಾರ್ಟ್ಟಿವಿಯನ್ನು ಬಿಡುಗಡೆ ಮಾಡುವ ಬಗ್ಗೆ ಶಿಯೋಮಿ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಆದರೆ, ನಾವು ಜನವರಿ 2023ರ ವೇಳೆಗೆ ದೇಶದಲ್ಲಿ ಈ ಸ್ಮಾರ್ಟ್ಟಿವಿ ಬಿಡುಗಡೆಯನ್ನು ಎದುರುನೋಡಬಹುದು ಎಂದು ಹಲವು ವರದಿಗಳು ಹೇಳಿವೆ.
Xiaomi Tv Es70 With A 4k 70 Display Launched In China For 4,499 Check Details.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm