ಬ್ರೇಕಿಂಗ್ ನ್ಯೂಸ್
03-10-22 07:54 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಪ್ರೀಮಿಯಂ ಸ್ಮಾರ್ಟ್ಫೋನ್ ಬ್ರ್ಯಾಂಡ್ OnePlus ತನ್ನ ಬಳಕೆದಾರರಿಗೆ 5ಜಿ ತಂತ್ರಜ್ಞಾನ ವ್ಯವಸ್ಥೆಯನ್ನು ತರಲು ಯಶಸ್ವಿಯಾಗಿ ಸಜ್ಜಾಗಿರುವುದಾಗಿ ಹೇಳಿದೆ. ದೇಶದಲ್ಲಿ 5ಜಿ ಸೇವೆಗಳಿಗೆ ಆರಂಭ ದೊರೆತಿದ್ದು, OnePlus ಬಳಕೆದಾರರು ಸಹ ಉತ್ತಮ ಸಾಧನಗಳೊಂದಿಗೆ ತಡೆ ರಹಿತ ಹಾಗೂ ವೇಗದ ಇಂಟರ್ನೆಟ್ ಅನುಭವವನ್ನು ಆನಂದಿಸುತ್ತಾರೆ. ಹಾಗೂ ತಾವು ಊಹಿಸಿದ್ದಕ್ಕಿಂತ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಪಡೆಯುತ್ತಾರೆ ಎಂದು OnePlus ಇಂಡಿಯಾದ ಸಿಇಒ ನವನೀತ್ ನಕ್ರಾ ತಿಳಿಸಿದ್ದಾರೆ.
OnePlus ಸಂಸ್ಥೆ ಜಗತ್ತಿನಾದ್ಯಂತ ಗ್ರಾಹಕರಿಗೆ 5ಜಿ ಸೇವೆ ಒದಗಿಸುವಲ್ಲಿ ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. 2016 ರಲ್ಲೇ 5ಜಿ ಸಂಶೋಧನೆಯ ಪ್ರಯತ್ನಗಳನ್ನು ಆರಂಭಿಸಿ, ಜಾಗತಿಕವಾಗಿ ಬಳಕೆದಾರರಿಗೆ 5ಜಿ ಸೇವೆ ನೀಡುತ್ತಿರುವ ಟೆಕ್ ಕಂಪನಿಗಳಲ್ಲಿ OnePlus ಕೂಡ ಒಂದಾಗಿದೆ. 2020ರಲ್ಲಿ OnePlus 8 ಸರಣಿಯೊಂದಿಗೆ ಭಾರತದಲ್ಲಿ 5ಜಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ OnePlus ಒದಗಿಸಿರುವ ಎಲ್ಲಾ ಸ್ಮಾರ್ಟ್ಫೋನ್ಗಳು 5ಜಿ ಸೇವೆಗೆ ಸಿದ್ಧವಾಗಿವೆ ಎಂದು ನವನೀತ್ ಅವರು ಹೇಳಿದ್ದಾರೆ.
ಈ ವರ್ಷ ಆನ್ಲೈನ್ನಲ್ಲಿ 20,000 ರೂ. ರಿಂದ 30,000 ರೂ. ಬೆಲೆಗೆ ಲಭ್ಯವಿರುವ ಪ್ರಮುಖ 5G ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿ OnePlus ಹೊರಹೊಮ್ಮಿದ್ದು, ದೇಶದಲ್ಲಿ OnePlus Nord CE 2 Lite 5G ಸ್ಮಾರ್ಟ್ಫೋನ್ ಇದೀಗ OnePlus ಕಂಪೆನಿಯ ಅತ್ಯಂತ ಕೈಗೆಟುಕುವ ಸಾಧನವಾಗಿ 18,500 ರೂ. ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದೆ. ಹಾಗಾದರೆ, ಕಂಪೆನಿ ಇತ್ತೀಚಿಗಷ್ಟೇ ಬಿಡುಗಡೆಗೊಳಿಸಿರುವ ನೂತನ OnePlus Nord CE 2 Lite 5G ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಅತ್ಯಂತ ಕಡಿಮೆ ಬೆಲೆಯಲ್ಲಿ ಭರ್ಜರಿ ಎನ್ನುವಂತಹ ವೈಶಿಷ್ಟ್ಯಗಳನ್ನು ಹೊತ್ತು OnePlus Nord CE 2 Lite 5G ಸ್ಮಾರ್ಟ್ಫೋನ್ ಬಿಡುಗಡೆಗೊಂಡಿದೆ. ಈ ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳಲ್ಲಿ, 20:9 ಆಕಾರ ಅನುಪಾತ, 202ppi ಪಿಕ್ಸೆಲ್ ಸಾಂದ್ರತೆ ಮತ್ತು 120Hz ನ ಡೈನಾಮಿಕ್ ರಿಫ್ರೆಶ್ ದರದೊಂದಿಗೆ 6.59-ಇಂಚಿನ ಫುಲ್ HD+ (1,080x2,412 ಪಿಕ್ಸೆಲ್ಗಳು) ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಇದರ ಪ್ರದರ್ಶನವು sRGB ಕಲರ್ ಗ್ಯಾಮೆಟ್ ಅನ್ನು ಬೆಂಬಲಿಸುತ್ತದೆ ಮತ್ತು ಉತ್ತಮ ಗೇಮಿಂಗ್ ಅನುಭವಕ್ಕಾಗಿ 240Hz ಸ್ಪರ್ಶ ಪ್ರತಿಕ್ರಿಯೆ ದರವನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಸ್ಮಾರ್ಟ್ಫೋನಿನ ಡಿಸ್ಪ್ಲೇಯು ಶಕ್ತಿಯುತ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಈ ಹೊಸ OnePlus Nord CE 2 Lite 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್ ಜೊತೆಗೆ Adreno 619 GPU ಮತ್ತು 8GB ವರೆಗಿನ LPDDR4X RAM ನಿಂದ ಚಾಲಿತವಾಗಿದೆ.
ನೂತನ OnePlus Nord CE 2 Lite 5G ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು f/1.7 ಅಪಾರ್ಚರ್ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಹಾಗೂ f/1.7 ಅಪಾರ್ಚರ್ನೊಂದಿಗೆ 2-ಮೆಗಾಪಿಕ್ಸೆಲ್ ಶೂಟರ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ, ಸ್ಮಾರ್ಟ್ಫೋನಿನಲ್ಲಿ f/2.0 ಅಪಾರ್ಚರ್ನೊಂದಿಗೆ 16-ಮೆಗಾಪಿಕ್ಸೆಲ್ Sony IMX471 ಕ್ಯಾಮೆರಾವನ್ನು ಅಳವಡಿಸಲಾಗಿದೆ. ನೈಟ್ಸ್ಕೇಪ್ ಮೋಡ್ ಮತ್ತು ಬೊಕೆ ಮೋಡ್ ಸೇರಿದಂತೆ ಕ್ಯಾಮೆರಾ ಮೋಡ್ಗಳ ಪಟ್ಟಿಯೊಂದಿಗೆ ಸ್ಮಾರ್ಟ್ಫೋನ್ ಮೊದಲೇ ಲೋಡ್ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. OnePlus Nord CE 2 Lite 5G ಸ್ಮಾರ್ಟ್ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, 3.5mm ಆಡಿಯೋ ಜಾಕ್, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ.
ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥ್ಯದ ಈ ನೂತನ OnePlus Nord CE 2 Lite 5G ಸ್ಮಾರ್ಟ್ಫೋನ್ Android 12 ನಲ್ಲಿ OxygenOS 12.1 ನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ. ಮೊದಲೇ ಹೇಳಿದಂತೆ, OnePlus Nord CE 2 Lite 5G ಸ್ಮಾರ್ಟ್ಫೋನಿನ ಪ್ರಮುಖ ವಿಶೇಷತೆಯಾಗಿ, ಫೋನಿನಲ್ಲಿ 33W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ಫೋನಿನಲ್ಲಿನ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದಷ್ಟು ಚಾರ್ಜ್ ಅನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕವನ್ನು ಒಳಗೊಂಡಿರುವ OnePlus Nord CE 2 Lite 5G ಸ್ಮಾರ್ಟ್ಫೋನಿನಲ್ಲಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಹಾಗೂ 128GB ಯಷ್ಟು UFS 2.2 ಆಂತರಿಕ ಸಂಗ್ರಹಣೆಯನ್ನು ನೀಡಿರುವುದನ್ನು ನಾವು ನೋಡಬಹುದು.
Oneplus Says Successfully Geared Up For 5g Launch With 5g Ready.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm