ಬ್ರೇಕಿಂಗ್ ನ್ಯೂಸ್
12-09-22 07:23 pm Source: Vijayakarnataka ಡಿಜಿಟಲ್ ಟೆಕ್
ದಕ್ಷಿಣ ಕೊರಿಯಾ ಮೂಲದ ಜಾಗತಿಕ ಎಲೆಕ್ಟ್ರಾನಿಕ್ಸ್ ದೈತ್ಯ ಬ್ರ್ಯಾಂಡ್ ಎಲ್ಜಿ (LG Electronics) ಸಂಸ್ಥೆಯು ಹೊಸ ಹೊಸ ಸಾಹಸಗಳನ್ನು ಕೈಗೊಳ್ಳುವಲ್ಲಿ ಸದಾ ಮುಂದು. ಇದೀಗ ಇಂತಹುದೇ ಸಾಹಸಕ್ಕೆ ಕೈ ಹಾಕಿರುವ ಎಲ್ಜಿ (LG Electronics) ಸಂಸ್ಥೆಯು ತನ್ನ ಸ್ಮಾರ್ಟ್ಟಿವಿಗಳ ಮೂಲಕ NFT (ನಾನ್-ಫಂಗಬಲ್ ಟೋಕನ್) ವೈಶಿಷ್ಟ್ಯವನ್ನು ತಂದಿದೆ. ಅಮೆರಿಕಾದ ಜನತೆಗೆ ಮೊದಲು ಇಂತಹದೊಂದು ವೈಶಿಷ್ಟ್ಯವನ್ನು ಪರಿಚಯಿಸಲಾಗಿದ್ದು, ಅಮೆರಿಕದಲ್ಲಿರುವವರು ಈಗ ಒಂದು ಎಲ್ಜಿ ಟಿವಿ (ನಿರ್ದಿಷ್ಟ ಮಾಡೆಲ್) ಹೊಂದಿದ್ದರೆ, ಈ ಸ್ಮಾರ್ಟ್ಟಿವಿ ಮೂಲಕ ‘ಎಲ್ಜಿ ಆರ್ಟ್ ಲ್ಯಾಬ್ ವೇದಿಕೆ’ಯನ್ನು ಪ್ರವೇಶಿಸಬಹುದು ಮತ್ತು ಈ ವೇದಿಕೆಯ ಮೂಲಕ ಎನ್ಎಫ್ಟಿ ಅಥವಾ ನಾನ್ ಫಂಜಿಬಲ್ ಟೋಕನ್ಗಳನ್ನು ಮಾರಲು ಮತ್ತು ಖರೀದಿಸಲು, ಮನೆಯಲ್ಲಿರುವ ಟಿವಿಯನ್ನು ಬಳಸಿ ತೊಡಗಿಕೊಳ್ಳಬಹುದು.!
ಹೌದು, NFT (ನಾನ್-ಫಂಗಬಲ್ ಟೋಕನ್) ತಂತ್ರಜ್ಞಾನವು ದಿನೇ ದನೇ ಬೆಳವಣಿಗೆ ಹೊಂದುತ್ತಿದ್ದು, ಡಿಜಿಟಲ್ ರೂಪದಲ್ಲಿ ಹಾಗೂ ಬ್ಲಾಕ್ಚೈನ್ ತಂತ್ರಜ್ಞಾನದಲ್ಲಿ ಖರೀದಿ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ಕ್ರಿಪ್ಟೋ ಕರೆನ್ಸಿಗಳ ನಂತರ ಡಿಜಿಟಲ್ ಲೋಕವನ್ನು ಬಿರುಗಾಳಿಯಂತೆ ಆಕ್ರಮಿಸಿಕೊಂಡಿರುವುದು ನಾನ್ ಫಂಜಿಬಲ್ ಟೋಕನ್ (ಎನ್ಎಫ್ಟಿ) ಇವು ಶುದ್ದ ಡಿಜಿಟಲ್ ಸ್ವತ್ತುಗಳು. ಒಂದು ಅಂದಾಜು ಪ್ರಕಾರ 2021ರಲ್ಲಿ ಮಾರಾಟವಾದ ಎನ್ಎಫ್ಟಿಯ ಮೌಲ್ಯ ಸುಮಾರು 25 ಶತಕೋಟಿ ಡಾಲರ್ ಆಗಿದೆ. ಡಿಜಿಟಲ್ ತಜ್ಞರು, ಸೆಲೆಬ್ರಿಟಿಗಳು ಮಾತ್ರವಲ್ಲದೇ ಜನಸಾಮಾನ್ಯರು, ಕೂಡ ಈ ಸ್ವತ್ತುಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿರುವ ಕಾರಣ, ಎನ್ಎಫ್ಟಿ ವಹಿವಾಟಿನ ಪ್ರಮಾಣದಲ್ಲೂ ಭಾರಿ ಏರಿಕೆಯಾಗುತ್ತಿದೆ. ಇದರಿಂದ ಎಲ್ಜಿ ಸಂಸ್ಥೆ ತನ್ನ ಸ್ಮಾರ್ಟ್ಟಿವಿಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದೆ.

ವಿಶ್ವದಾದ್ಯಂತ ಪ್ರಖ್ಯಾತ ಕಲಾವಿದರು ತಮ್ಮ ಕೃತಿಗಳನ್ನು, ಅಪರೂ ಪದ ಫೋಟೋಗಳನ್ನು NFT ಯಾಗಿ ಪರಿವರ್ತಿಸಿ ಮಾರಾಟಮಾಡುತ್ತಿದ್ದಾರೆ. ಇನ್ನು ಕೆಲ ಹೆಸರಾಂತ ವ್ಯಕ್ತಿಗಳು ತಮ್ಮ ಟ್ವೀಟ್ಗಳನ್ನೇ NFT ಯಾಗಿ ಪರಿವರ್ತಿಸಿ ಮಾರುತ್ತಿದ್ದಾರೆ. ಇವುಗಳನ್ನು ಖರೀದಿಸಿದವರು, ಮುಂದೊಂದು ದಿನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಈ ಎಲ್ಲಾ ವ್ಯವಹಾರಗಳು ಡಿಜಿಟಲ್ ಆಗಿ ನಡೆಯುತ್ತದೆ. ಇಂತಹ ಕೊಡು ಕೊಳ್ಳುವಿಕೆಯಲ್ಲಿ ಎಲ್ಜಿ ಟಿವಿಗಳನ್ನು ಬಳಸಬಹುದು ಎಂಬುದು ವಿಶೇಷವಾಗಿದೆ. ಇಷ್ಟೇ ಅಲ್ಲದೇ, ಇಂತಹದೊಂದು ಎಲ್ಜಿ ಸ್ಮಾರ್ಟ್ಟಿವಿ ಖರೀದಿಸಿದರೆ ‘ಎಲ್ಜಿ ಆರ್ಟ್ ಲ್ಯಾಬ್ ವೇದಿಕೆ’ ಮೂಕ ಡಿಜಿಟಲ್ ಅಸೆಟ್ಗಳನ್ನು ಸಂಗ್ರಹಿಸಬಹುದು, ಅದನ್ನು ಹಣವನ್ನಾಗಿ ಉಪಯೋಗಿಸಲೂಬಹುದು ಎಂದರೆ ಖಂಡಿತ ಎಲ್ಲರಿಗೂ ಖುಷಿಯಾಗುತ್ತದೆ.!

ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಬಹುದಾದ ಯಾವುದನ್ನೂ ಎನ್ಎಫ್ಟಿ ಮಾಡಬಹುದು. ನೀವು ರಚಿಸಿದ ಪೇಂಟಿಂಗ್, ಫೋಟೋ, ವಿಡಿಯೋ, ಜಿಫ್, ಸಂಗೀತ, ಒಳಾಂಗಣ ಆಟದ ಸಾಮಗ್ರಿ, ಸುಮ್ಮನೇ ಕ್ಲಿಕ್ಕಿಸಿದ ಒಂದು ಸೆಲ್ಫಿ, ನಿಮ್ಮ ಒಂದು ಟ್ವೀಟ್ ಅನ್ನು ಕೂಡ ನೀವು ಎನ್ಎಫ್ಟಿ ಎಂದು ಘೋಷಿಸಬಹುದು. ಇದನ್ನು ಆನ್ಲೈನ್ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಪ್ರತಿಯಾಗಿ ಮಾರಾಟ ಮಾಡಬಹುದು. ಅಂದಹಾಗೆ ಇವುಗಳಿಗೆ ಬೆಲೆ ಕಟ್ಟುವುದು ಕ್ರಿಪ್ಟೋ ಕರೆನ್ಸಿಗಳ ಮೂಲಕ. ಎನ್ಎಫ್ಟಿಗಳು ಬ್ಲಾಕ್ಚೈನ್ ವ್ಯವಹಾರದ ಮೂಲಕ ನಡೆಯುತ್ತವೆ. ಬ್ಲಾಕ್ಚೈನ್ ಎಂದರೆ ಒಂದು ನಿಮ್ಮ ಬ್ಯಾಂಕ್ ಪಾಸ್ಬುಕ್ನಂಥಹ ಎಲ್ಲ ವಹಿವಾಟುಗಳೂ ದಾಖಲಿಸಲಾಗಿರುವ ಡಿಜಿಟಲ್ ಲೆಡ್ಜರ್. ಇದು ಅತ್ಯಂತ ಪಾರದರ್ಶಕ. ಒಮ್ಮೆ ಇದರಲ್ಲಿ ದಾಖಲಾದರೆ ಅದನ್ನು ಯಾರು ಬೇಕಿದ್ದರೂ ನೋಡಬಹುದು, ಆದರೆ ಬದಲಾಯಿಸಲಾಗದು.
LG Launches Nft Platform For Smart Tvs.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm