ಬ್ರೇಕಿಂಗ್ ನ್ಯೂಸ್
02-09-22 08:41 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಗ್ರಾಹಕರ ಮನಗೆದ್ದಿರುವ ಪಾರದರ್ಶಕ ವಿನ್ಯಾಸದ Nothing Phone (1) ಸ್ಮಾರ್ಟ್ಪೋನ್ ಇದೀಗ ಮತ್ತೆ ಸ್ಟಾಕ್ನಲ್ಲಿ ಕಾಣಿಸಿಕೊಂಡಿದೆ. ದೇಶದಲ್ಲಿ Nothing Phone (1) ಸ್ಮಾರ್ಟ್ಪೋನಿನ ಅಧಿಕೃತ ಮಾರಾಟಗಾರ ಜಾಲತಾಣ Flipkart ನಲ್ಲಿ Nothing Phone (1) ಸ್ಮಾರ್ಟ್ಫೋನ್ ಖರೀದಿಗೆ ಮತ್ತೊಮ್ಮೆ ಅವಕಾಶ ದೊರೆತಿದ್ದು, ಗ್ರಾಹಕರು 8GB/128GB, 8GB/256GB, ಮತ್ತು 12GB/256GB ಮೂರು ಮಾದರಿಗಳಲ್ಲಿ Nothing Phone (1) ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದಾಗಿದೆ. ಇವುಗಳಲ್ಲಿ 8GB/256GB ಅಥವಾ 12GB/256GB ಮಾದರಿ ಫೋನ್ಗಳು ಬಿಳಿ ಮತ್ತು ಕಪ್ಪು ಎರಡೂ ಬಣ್ಣಗಳಲ್ಲಿ ಲಭ್ಯವಿದ್ದರೆ, ಮೂಲ 8GB/128GB ಸ್ಟೋರೇಜ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ.
Nothing Phone (1) ಸ್ಮಾರ್ಟ್ಪೋನಿನ 8GB/128GB ಮೂಲ ಮಾದರಿಯು 1 ಸಾವಿರ ರೂ. ಬೆಲೆ ಹೆಚ್ಚಳದ ನಂತರ ಇದೀಗ 33,999 ರೂ. ಬೆಲೆಯಲ್ಲಿ ಖರೀದಿಗೆ ದೊರೆಯುತ್ತಿದ್ದರೆ, 8GB/256GB ಮಾದರಿಯು 36,999 ರೂ. ಬೆಲೆಯಲ್ಲಿ ಮತ್ತು ಟಾಪ್-ಎಂಡ್ 12GB/256GB ಮಾದರಿಯು 39,999 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. HDFC ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇಎಂಐ ಅಲ್ಲದ ವಹಿವಾಟುಗಳಿಗೆ (ಕ್ರೆಡಿಟ್ ಕಾರ್ಡ್ ಮೂಲಕ) 1,000 ರೂ ರಿಯಾಯಿತಿ ಮತ್ತು EMI ವಹಿವಾಟುಗಳ ಮೇಲೆ (ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ) 1,500 ರೂ. ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೇ, ಫೋನ್ ಖರೀದಿಯ ಜೊತೆಗೆ 4,999 ರೂ.ಗೆ Google Nest ಹಬ್ ಮತ್ತು 1,999 ರೂ.ನಲ್ಲಿ Google Nest mini ಸಾಧನಗಳು ದೊರೆಯುತ್ತಿವೆ.
'Nothing Phone 1' ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು ಹೀಗಿವೆ!
'Nothing Phone 1' ಸ್ಮಾರ್ಟ್ಫೋನ್ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ 6.55-ಇಂಚಿನ ಪೂರ್ಣ-HD+ (1,080x2,400 ಪಿಕ್ಸೆಲ್ಗಳು) OLED ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್ಪ್ಲೇಯು HDR10+ ಬೆಂಬಲ, 402 ppi ಪಿಕ್ಸೆಲ್ ಸಾಂದ್ರತೆ ಮತ್ತು 1,200 nits ಗರಿಷ್ಠ ಹೊಳಪಿನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಾಮರ್ಥ್ಯದಲ್ಲಿದೆ. ವಿಶೇಷವಾಗಿ, ಈ 'Nothing Phone 1' ಸ್ಮಾರ್ಟ್ಫೋನಿನ ಸ್ಮಾರ್ಟ್ಫೋನ್ನ ಹಿಂಭಾಗವು ಸಹ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದ್ದು, ವೈಯಕ್ತಿಕ ಸಂಪರ್ಕಗಳು ಮತ್ತು ಇತರ ಅಧಿಸೂಚನೆಗಳಿಗಾಗಿ ಫೋನ್ನ ಹಿಂಭಾಗದಲ್ಲಿ ಬೆಳಕಿನ ಪರಿಣಾಮಗಳನ್ನು ವೈಯಕ್ತೀಕರಿಸಲು ಬಳಕೆದಾರರಿಗೆ ಅನುಮತಿಸುವ ಗ್ಲಿಫ್ ಇಂಟರ್ಫೇಸ್ ಅನ್ನು ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ Nothing Phone 1' ಸ್ಮಾರ್ಟ್ಫೋನ್ ಧೂಳು ಮತ್ತು ನೀರಿನ ಪ್ರತಿರೋಧದ IP53 ರೇಟಿಂಗ್ ಅನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, 'Nothing Phone 1' ಸ್ಮಾರ್ಟ್ಫೋನ್ ಎರಡು 50-ಮೆಗಾಪಿಕ್ಸೆಲ್ ಸಂವೇದಕಗಳೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್ನೊಂದಿಗೆ ಬರುತ್ತದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ Samsung JN1 ಸೆನ್ಸಾರ್ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಮ್ಯಾಕ್ರೋ ಮೋಡ್ ಅನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಸ್ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸೀನ್ ಡಿಟೆಕ್ಷನ್, ಎಕ್ಸ್ಟ್ರೀಮ್ ನೈಟ್ ಮೋಡ್ ಮತ್ತು ಎಕ್ಸ್ಪರ್ಟ್ ಮೋಡ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿರುವ Nothing Phone 1' ಸ್ಮಾರ್ಟ್ಫೋನ್ ಸಂಪೂರ್ಣ ಮನರಂಜನಾ ಕೇಂದ್ರಿ ಕ್ಯಾಮೆರಾ ವಿಭಾಗವನ್ನು ಹೊಂದಿರುವಂತೆ ಕಾಣುತ್ತಿದೆ.
ಹುಡ್ ಅಡಿಯಲ್ಲಿ, 'Nothing Phone 1' ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G+ SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು 12GB ವರೆಗೆ LPDDR5 RAM ಮತ್ತು 256GB UFS 3.1 ಅಂತರ್ಗತ ಸಂಗ್ರಹಣೆಯನ್ನು ನೀಡುತ್ತದೆ. ಸ್ಮಾರ್ಟ್ಫೋನ್ನಲ್ಲಿನ ಸಂಪರ್ಕ ಆಯ್ಕೆಗಳಲ್ಲಿ, 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, GLONASS, GALILEO, QZSS, ಮತ್ತು USB ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳು ಸೇರಿವೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್, ಅಕ್ಸಿಲೆರೊಮೀಟರ್, ಎಲೆಕ್ಟ್ರಾನಿಕ್ ಕಂಪಾಸ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಮತ್ತು ಫೇಸ್ ಅನ್ಲಾಕ್ ಬೆಂಬಲವನ್ನು ಕೂಡ ಹೊಂದಿದೆ. Nothing Phone 1' ಸ್ಮಾರ್ಟ್ಫೋನ್ 33W ವೈರ್ಡ್ ಚಾರ್ಜಿಂಗ್, 15W Qi ವೈರ್ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ಗೆ ಬೆಂಬಲದೊಂದಿಗೆ 4,500mAh ಬ್ಯಾಟರಿಯ ಶಕ್ತಿಯನ್ನು ಹೊಂದಿದೆ.
Nothing Phone 1 Back In Stock In India.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm