ಬ್ರೇಕಿಂಗ್ ನ್ಯೂಸ್
24-08-22 07:53 pm Source: Vijayakarnataka ಡಿಜಿಟಲ್ ಟೆಕ್
ಚೀನಾದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳಿಂದ ಬೇಸತ್ತಿರುವ ವಿಶ್ವ ಟೆಕ್ ದೈತ್ಯ ಬ್ರ್ಯಾಂಡ್ 'ಆಪಲ್' ಭಾರತದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಚೀನಾದಲ್ಲಿನ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಕಂಗೆಟ್ಟಿರುವ ಆಪಲ್ ಕಂಪೆನಿ ಅದಕ್ಕೆ ಪರ್ಯಾಯವಾಗಿ ಭಾರತದಲ್ಲಿ ತನ್ನ ಐಫೋನ್ ಸಾಧನಗಳ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದ್ದು, ಇದೇ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದ ವೇಳೆಗೆ ಭಾರತದಿಂದ ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳ ಮೊದಲ ಬ್ಯಾಚ್ ಉತ್ಪಾದನೆಯಾಗಲಿವೆ ಎಂದು ಉದ್ಯಮ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳು ತಯಾರಾಗುತ್ತವೆ ಎಂಬ ಸುದ್ದಿಗೆ ಮತ್ತಷ್ಟು ಬಲ ಬಂದಿದೆ.
ಇತ್ತೀಚಿನ ವರದಿಯ ಪ್ರಕಾರ, ಚೀನಾದಲ್ಲಿನ ಕೋವಿಡ್ ನಿರ್ಬಂಧಗಳು, ಭೌಗೋಳಿಕ ರಾಜಕೀಯ ಸಮಸ್ಯೆಗಳು ಮತ್ತು ಆರ್ಥಿಕ ಚಟುವಟಿಕೆ ಕುಸಿತದ ಪರಿಣಾಮಗಳು ಆಪಲ್ ಕಂಪೆನಿಯ ಮೇಲೆ ನೇರ ಪರಿಣಾಮ ಬೀರಿವೆ. ಈ ಅಡ್ಡಿ ಆಂತಕಗಳ ನಡುವೆ ಐಫೋನ್ 14 ಉತ್ಪಾದನೆ ಮತ್ತು ಪೂರೈಕೆ ಕಷ್ಟ ಸಾಧ್ಯವಾಗಿದೆ. ಇನ್ನು ಭವಿಷ್ಯದಲ್ಲೂ ಈ ಸಮಸ್ಯೆಗಳಿಗೆ ಕೊನೆ ಇಲ್ಲ ಎಂಬುದನ್ನು ಅರಿತಿರುವ ಆಪಲ್ ಕಂಪೆನಿ ಇದಕ್ಕಾಗಿ ಮತ್ತೊಂದು ಬಹುದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಭಾರತವನ್ನು ಆಯ್ದುಕೊಂಡಿದೆ. ಪ್ರಸ್ತುತ ಭಾರತದಲ್ಲಿ ಆಪಲ್ ಹೊಂದಿರುವ ಫಾಕ್ಸ್ಕಾನ್ನ ಐಫೋನ್ ಉತ್ಪಾದನಾ ಕೇಂದ್ರದಲ್ಲಿ ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳನ್ನು ಅಸೆಂಬಲ್ ಮಾಡಲು ಮತ್ತು ವಿಶ್ವದಾದ್ಯಂತ ರಪ್ತು ಮಾಡುವ ಗುರಿಯನ್ನು ಆಪಲ್ ಹೊಂದಿದೆ. ಭಾರತದಲ್ಲಿ ಕೆಲವು ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳನ್ನು ಅಸೆಂಬಲ್ ಮಾಡಬಹುದು ಎಂದು ಹೇಳಲಾಗಿದೆ.
ಇತ್ತೀಚಿಗಷ್ಟೆ, ಭಾರತದಲ್ಲಿ ಆಪಲ್ ಹೊಂದಿರುವ ಫಾಕ್ಸ್ಕಾನ್ನ ಐಫೋನ್ ಉತ್ಪಾದನಾ ಕೇಂದ್ರದಲ್ಲಿ ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳನ್ನು ಅಸೆಂಬಲ್ ಮಾಡಲು ಮತ್ತು ವಿಶ್ವದಾದ್ಯಂತ ರಪ್ತು ಮಾಡುವ ಗುರಿಯನ್ನು ಆಪಲ್ ಹೊಂದಿದೆ. ಇದಲ್ಲದೇ, ಚೀನಾ ಮೇಲಿನ ತನ್ನ ಅವಲಂಬನೆಯನ್ನು ತಗ್ಗಿಸುವ ಸಲುವಾಗಿ ಆಪಲ್ ಭಾರತದಲ್ಲಿ ಕೆಲವು ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳನ್ನು ಅಸೆಂಬಲ್ ಮಾಡಲಿದೆ ಎಂದು ಜನಪ್ರಿಯ ಉದ್ಯಮ ವಿಶ್ಲೇಷಕ ಮಿಂಗ್-ಚಿ ಕುವೊ ತಮ್ಮ ಟ್ವೀಟ್ಗಳಲ್ಲಿ ಉಲ್ಲೇಖಿಸಿದ್ದರು. ಇತ್ತೀಚಿನ ಭೌಗೋಳಿಕ ರಾಜಕೀಯ ವಿಷಯಗಳ ಹಿನ್ನೆಲೆಯಲ್ಲಿ ಆಪಲ್ ಈ ತೀರ್ಮಾನಕ್ಕೆ ಬಂದಿದೆ ಎಂದು ಮಿಂಗ್-ಚಿ ಕುವೊ ಅವರು ಹೇಳಿದ್ದು, ಕೆಲವು ಐಫೋನ್ 14 ಫೋನ್ಗಳನ್ನು ಭಾರತದಲ್ಲಿ ತಯಾರಿಸುವ ಮೂಲಕ ಚೀನಾ ಅಲ್ಲದ ಉತ್ಪಾದನಾ ತಾಣವನ್ನು ಸ್ಥಾಪಿಸುವುದು ಆಪಲ್ನ 'ಪ್ರಮುಖ ಮೈಲಿಗಲ್ಲು' ಆಗಿರಬಹುದು ಎಂದು ಹೇಳಿದ್ದರು.
ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದಲ್ಲಿ ಆಪಲ್ ತನ್ನ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಚೀನಾದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಭಾರತೀದ ಮಾರುಕಟ್ಟೆಯಲ್ಲಿ ಆಪಲ್ ನೆಲೆಯೂರುವಂತಹ ವಾತಾವರಣವನ್ನು ಸೃಷ್ಟಿಸುತ್ತಿದೆ. ಚೀನಾ ಅಲ್ಲದ ಐಫೋನ್ ಉತ್ಪಾದನಾ ತಾಣವನ್ನು ಸ್ಥಾಪಿಸುವುದು ಆಪಲ್ ಕಂಪೆನಿಯ ಪ್ರಮುಖ ಗುರಿಗಳಲ್ಲಿ ಒಂದು. ಇದಕ್ಕಾಗಿಯೇ ಜನಸಂಪನ್ಮೂಲ ಮತ್ತು ಸುಸ್ಥಿರ ಮಾರುಕಟ್ಟೆ ಬೆಳವಣಿಗೆಯನ್ನು ಕಾಣುತ್ತಿರುವ ಭಾರತವನ್ನು ಆಯ್ದುಕೊಳ್ಳಲು ಬಯಸುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಉದ್ಯಮ ವಿಶ್ಲೇಷಕ ಮಿಂಗ್-ಚಿ ಕುವೊ ಅವರು ಹಂಚಿಕೊಂಡಿರುವ ಮಾಹಿತಿ ಹಾಗೂ ಉದ್ಯಮ ಮೂಲಗಳ ಮಾಹಿತಿಗಳಿಂದ ಸುದ್ದಿಯಿಂದ ಇದು ನಿಜವಾದಂತಿದೆ. ಆದರೆ, ಈ ಬಗ್ಗೆ ಆಪಲ್ ಕಂಪೆನಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದನ್ನು ಸಹ ನಾವಿಲ್ಲಿ ಗಮನಿಸಬೇಕು.
2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲು ಆಪಲ್ ಮುಂದಾಗಿದೆ. ಈ ಹೊಸ ಸರಣಿಯು ಚಿಪ್ಸೆಟ್, ಕ್ಯಾಮೆರಾ ಮತ್ತು ಇತರ ವಿಷಯಗಳ ವಿಷಯದಲ್ಲಿ ಪ್ರಮುಖ ನವೀಕರಣಗಳನ್ನು ಪಡೆಯುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರಬಿದ್ದಿವೆ. ಫೇಸ್ಐಡಿ ಕಟೌಟ್ನೊಂದಿಗೆ ಪಂಚ್ ಹೋಲ್ ಡಿಸ್ಪ್ಲೇ ವಿನ್ಯಾಸಲ್ಲಿ ಐಫೋನ್ 14 ಸರಣಿಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿವೆ. ಇದರ ಪ್ರೊ ಮಾದರಿ ಸ್ಮಾರ್ಟ್ಫೋನ್ಗಳು ಎ 16 ಬಯೋನಿಕ್ ಚಿಪ್ಸೆಟ್ ಅನ್ನು ಹೊಂದಿರಲಿವೆ. ಹಾಗೂ ಸುಮಾರು 30 ನಿಮಿಷಗಳಲ್ಲಿ 0 ರಿಂದ 100 ಪ್ರತಿಶತದವರೆಗೆ ಚಾರ್ಜ್ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇವೆಲ್ಲವಕ್ಕಿಂತ ಹೆಚ್ಚಾಗಿ, ಐಫೋನ್ 14 ಸರಣಿ ಸ್ಮಾರ್ಟ್ಫೋನ್ಗಳು 30-ವ್ಯಾಟ್ ಚಾರ್ಜಿಂಗ್ ಬೆಂಬಲವನ್ನು ನೀಡಬಹುದು. ಎಂದು ಹೇಳಲಾಗಿದೆ.
Iphone 14 May Also Be Made In India.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm