ಬ್ರೇಕಿಂಗ್ ನ್ಯೂಸ್
26-07-22 09:02 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Realme ದೇಶದಲ್ಲಿಂದು ತನ್ನ ಮೊಟ್ಟ ಮೊದಲ 5G ಬೆಂಬಲಿತ ಟ್ಯಾಬ್ಲೆಟ್ ಅನ್ನು ಪರಿಚಯಿಸಿದೆ. Realme Pad X ಎಂಬ ಹೆಸರಿಯಲ್ಲಿ ಪರಿಚಯಗೊಂಡಿರುವ ಈ ಹೊಸ ಟ್ಯಾಬ್ಲೆಟ್ ಸಾಧನವು 11-ಇಂಚಿನ WUXGA+ ರೆಸಲ್ಯೂಶನ್ ಡಿಸ್ಪ್ಲೇ, ಕ್ವಾಡ್ ಸ್ಪೀಕರ್ ಸೆಟಪ್, 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಹಾಗೂ ವಿಶೇಷವಾಗಿ 8,340mAh ಸಾಮರ್ಥ್ಯದ ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. Realme ಪೆನ್ಸಿಲ್ ಮತ್ತು Realme ಸ್ಮಾರ್ಟ್ ಕೀಬೋರ್ಡ್ ಬಿಡಿಭಾಗಗಳಿಗೆ ಬೆಂಬಲವನ್ನು ಸಹ ಹೊಂದಿರುವ Realme Pad X ಟ್ಯಾಬ್ಲೆಟ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.
Realme Pad X ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Realme Pad X ಟ್ಯಾಬ್ಲೆಟ್ ಅನ್ನು ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಕೇವಲ ವೈ-ಫೈ ಸಂಪರ್ಕವನ್ನು ಹೊಂದಿರುವ ಮೂಲ 4GB + 64GB ಸ್ಟೋರೇಜ್ ಮಾದರಿಯ ಟ್ಯಾಬ್ 19,999 ರೂ.ಗಳಿಗೆ ಬಿಡುಗಡೆಯಾಗಿದ್ದರೆ, 5G ಸಾಮರ್ಥ್ಯದ ಇದೇ ಮಾದರಿಯ 25,999 ರೂ. ಬೆಲೆಯಲ್ಲಿ ಹಾಗೂ 5G ಸಂಪರ್ಕ ಮತ್ತು 6GB + 128GB ಹೈ ಎಂಡ್ ಮಾದರಿಯು 27,999 ರೂ.ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಇದೇ ಆಗಸ್ಟ್ 1 ರಿಂದ ಫ್ಲಿಪ್ಕಾರ್ಟ್, Realme.com ಮತ್ತು ಆಫ್ಲೈನ್ ಮೂಲಕ ಗ್ಲೇಸಿಯರ್ ಬ್ಲೂ ಮತ್ತು ಗ್ಲೋಯಿಂಗ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಟ್ಯಾಬ್ಲೆಟ್ ಅನ್ನು ಖರೀದಿಸಲು ಅವಕಾಶವಿದ್ದು, SBI ಮತ್ತು HDFC ಬ್ಯಾಂಕ್ ಕಾರ್ಡ್ ವಹಿವಾಟುಗಳ ಮೇಲೆ ಎಲ್ಲಾ ಮೂರು ಶೇಖರಣಾ ಮಾದರಿ ಟ್ಯಾಬ್ಗಳಿಗೆ 2,000 ರೂ. ರಿಯಾಯಿತಿಯನ್ನು ಒದಗಿಸಲಾಗಿದೆ.

Realme Pad X ಟ್ಯಾಬ್ಲೆಟ್ ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, Realme Pad X ಟ್ಯಾಬ್ 11-ಇಂಚಿನ WUXGA+ ಡಿಸ್ಪ್ಲೇಯನ್ನು (1,200x2,000 ಪಿಕ್ಸೆಲ್ಗಳು) ಹೊಂದಿದೆ. ಈ ಟ್ಯಾಬ್ ಸ್ನಾಪ್ಡ್ರಾಗನ್ 695 SoC ನಿಂದ ಚಾಲಿತವಾಗಿದ್ದು, 6GB RAM ನೊಂದಿಗೆ ಜೋಡಿಸಲಾಗಿದೆ. ಕಂಪನಿಯ ಪ್ರಕಾರ, ಈ ಟ್ಯಾಬ್ಲೆಟ್ ಸುಧಾರಿತ ಕಾರ್ಯಕ್ಷಮತೆಗಾಗಿ ವರ್ಚುವಲ್ RAM ಆಗಿ 5GB ಆಂತರಿಕ ಸಂಗ್ರಹಣೆಯನ್ನು ಬಳಸುವ ವೈಶಿಷ್ಟ್ಯವನ್ನು ಹೊಂದಿದೆ. Realme Pad X ಟ್ಯಾಬ್ ಟ್ಯಾಬ್ಲೆಟ್ 128GB ವರೆಗಿನ ಅಂತರ್ಗತ ಸಂಗ್ರಹಣೆಯನ್ನು ಹೊಂದಿದ್ದು, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ನಾಲ್ಕು ಸ್ಪೀಕರ್ಗಳನ್ನು ಹೊಂದಿರುವ ಈ Realme Pad X ಟ್ಯಾಬ್ 33W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ 8,340mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಹಾಗೂ Android 12-ಆಧಾರಿತ Realme UI 3.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Realme Pad X ಟ್ಯಾಬ್ 13-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಫ್ರಂಟ್-ಫೇಸಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು 105-ಡಿಗ್ರಿ ಕ್ಷೇತ್ರ ವೀಕ್ಷಣೆಯೊಂದಿಗೆ ಬರುತ್ತದೆ. ಇಷ್ಟೇ ಅಲ್ಲದೇ, Realme Pad X ಟ್ಯಾಬ್ ಕಡಿಮೆ ಲೇಟೆನ್ಸಿ Realme ಪೆನ್ಸಿಲ್ಗೆ ಬೆಂಬಲವನ್ನು ಹೊಂದಿದ್ದು, ಇದನ್ನು ಟಿಪ್ಪಣಿಗಳನ್ನು ಸೆಳೆಯಲು ಮತ್ತು ತೆಗೆದುಕೊಳ್ಳಲು ಬಳಸಬಹುದಾಗಿದ್ದು, ಈ ಸಾಧನವು 10.6 ಗಂಟೆಗಳ ಬ್ಯಾಟರಿ ಬ್ಯಾಕಪ್ನೊಂದಿಗೆ ಮ್ಯಾಗ್ನೆಟಿಕ್ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೂ Realme ಟ್ಯಾನ್ ಸ್ಮಾರ್ಟ್ ಕೀಬೋರ್ಡ್ ಅನ್ನು ಸಹ ಬೆಂಬಲಿಸಲಿದ್ದು, ವಿವಿಧ ಕೀಬೋರ್ಡ್ ಶಾರ್ಟ್ಕಟ್ಗಳು ಮತ್ತು ಸಂಯೋಜನೆಗಳನ್ನು ಬೆಂಬಲಿಸುತ್ತದೆ. Realme ಕಂಪನಿಯ ಪ್ರಕಾರ ಈ ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕು.
Realme Pad X With 5g Support Launched In India.
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 10:47 pm
Mangalore Correspondent
ಕೊಳಲನ್ನೂದುತ್ತ ಈಜಿನಲ್ಲಿ ವಿಶ್ವದಾಖಲೆ ; ಅಲೋಶಿಯಸ್...
29-10-25 06:55 pm
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm