ಬ್ರೇಕಿಂಗ್ ನ್ಯೂಸ್
22-07-22 07:49 pm Source: Vijayakarnataka ಡಿಜಿಟಲ್ ಟೆಕ್
ಆಧುನಿಕ ಯುವ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು HP ತನ್ನ ಅತ್ಯಂತ ಜನಪ್ರಿಯ ಪೆವಿಲಿಯನ್ ಲ್ಯಾಪ್ಟಾಪ್ ಶ್ರೇಣಿಯ ತೆಳುವಾದ ಆವೃತ್ತಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಯುವಜನರು ತಮ್ಮ ಗೃಹ ಕಚೇರಿಯಿಂದ ತಮ್ಮ ಹಿತ್ತಲಿನಲ್ಲಿ ಅಥವಾ ಪ್ರಯಾಣಿಸುತ್ತಿರುವಾಗ ಕೆಲಸ ಮಾಡಲು ಮತ್ತು ಆಡಲು ಅನುಮತಿಸುವ ಸಾಧನಗಳನ್ನು ಬಯಸುತ್ತಾರೆ. ಈ ವರ್ಗವನ್ನು ಗಮನದಲ್ಲಿಟ್ಟುಕೊಂಡು ಹೊಚ್ಚ-ಹೊಸ HP ಪೆವಿಲಿಯನ್ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, HP ಪೆವಿಲಿಯನ್ ಪ್ಲಸ್ -ಮತ್ತು HP Pavilion x360 ಲ್ಯಾಪ್ಟಾಪ್ಗಳನ್ನು ಈ ಶ್ರೇಣಿಯಲ್ಲಿ ಬಿಡುಗಡೆಗೊಳಿಇಸಿದೆ. ಈ ಹೊಸ HP ಪೆವಿಲಿಯನ್ ಪ್ಲಸ್ 14-ಇಂಚಿನ ಲ್ಯಾಪ್ಟಾಪ್ಗಳಲ್ಲಿ 12 th Gen Intel® H ಕೋರ್ ಪ್ರೊಸೆಸರ್ಗಳನ್ನು ಅಳವಡಿಸಿದ್ದು, ಗ್ರಾಹಕರ ವೇಗದ ಜೀವನಶೈಲಿ ಮತ್ತು ವೈವಿಧ್ಯಮಯ ಕಂಪ್ಯೂಟಿಂಗ್ ಅಗತ್ಯಗಳಿಗಾಗಿ ಹೆಚ್ಚಿನ ಚಲನಶೀಲ ಕಾರ್ಯಕ್ಷಮತೆಯನ್ನು ಒದಗಿಸುತ್ತಿದೆ ಎಂದು ಕಂಪೆನಿ ತಿಳಿಸಿದೆ. .
HP ಪೆವಿಲಿಯನ್ ಲ್ಯಾಪ್ಟಾಪ್ ಶ್ರೇಣಿಯಯಲ್ಲಿ HP ಪೆವಿಲಿಯನ್ ಪ್ಲಸ್ 14-ಇಂಚಿನ ಲ್ಯಾಪ್ಟಾಪ್ ಅತ್ಯಂತ ತೆಳುವಾಗಿದ್ದು, 16.5mm ನಲ್ಲಿ ಲೋಹದಿಂದಲೇ ಮಾಡಲಾದ ಚಾಸಿಸ್, ಗ್ರಾಹಕರಿಗೆ ಪೋರ್ಟಬಿಲಿಟಿ ಮತ್ತು ಉತ್ಪಾದಕತೆಯನ್ನು ವರ್ಧಿಸುತ್ತದೆ. HP ಪೆವಿಲಿಯನ್ x360 14-ಇಂಚಿನ ಲ್ಯಾಪ್ಟಾಪ್ ಹೈಬ್ರಿಡ್ ಜಗತ್ತಿನಲ್ಲಿ ವರ್ಧಿತ ಗೌಪ್ಯತೆ ಮತ್ತು ಸುರಕ್ಷತೆಯನ್ನು ಒದಗಿಸಲು ಮ್ಯಾನುಯಲ್ ಕ್ಯಾಮೆರಾ ಶಟರ್ ಡೋರ್ ಅನ್ನೂ ಇದೇ ಮೊದಲ ಬಾರಿಗೆ ಪರಿಚಯಿಸಿದೆ. ಈ ಸಾಧನಗಳು HP ಕಮಾಂಡ್ ಸೆಂಟರ್, ಪರ್ಫಾರ್ಮೆನ್ಸ್ ಮೋಡ್ ಮತ್ತು ಬ್ಯಾಲೆನ್ಸ್ಡ್ ಮೋಡ್ನೊಂದಿಗೆ ಸಜ್ಜುಗೊಂಡಿವೆ ಮತ್ತು ಪ್ರಯಾಣದಲ್ಲಿರುವಾಗಲೂ ಸೃಜನಶೀಲತೆಯನ್ನು ಸಕ್ರಿಯಗೊಳಿಸುತ್ತವೆ. Eyesafe ಪ್ರಮಾಣಿತ ಡಿಸ್ಪ್ಲೇ ಒಳಗೊಂಡಿದ್ದು, ಕಣ್ಣಿನ ಒತ್ತಡವನ್ನು ಕಡಿಮೆ ಮಾಡುವ ಜತೆಗೆ, ಆಹ್ಲಾದಕರ ಕೆಲಸದ ವಾತಾವರಣವನ್ನು ನೀಡಲಿರುವ ಈ ಎರಡೂ ಮಾದರಿ ಲ್ಯಾಪ್ಟಾಪ್ಗಳ ವೈಶಿಷ್ಟ್ಯಗಳು ಮತ್ತು ಬೆಲೆಗಳ ಮಾಹಿತಿ ಈ ಕೆಳಕಂಡಂತಿವೆ.
HP ಪೆವಿಲಿಯನ್ ಪ್ಲಸ್ 14-ಇಂಚಿನ ಲ್ಯಾಪ್ಟಾಪ್
12th Gen Intel® Core™ H-ಸರಣಿ ಪ್ರೋಸೆಸರ್ಗಳು, OMEN ಗೇಮಿಂಗ್ ಹಬ್ ಹೊಂದಿದ್ದು, ಹೆಚ್ಚಿನ ಕೆಲಸ ಮತ್ತು ಆಟಗಳಿಗೆ ಸೂಕ್ತವಾಗಿದೆ.
ಎರಡು ಫ್ಯಾನ್ಗಳನ್ನು ಮತ್ತು ಎರಡು ಹೀಟ್ ಪೈಪ್ಗಳನ್ನು ಅಳವಡಿಸಿದ್ದು, ಗೇಮಿಂಗ್, ಕ್ರಿಯೆಟಿಂಗ್, ಸ್ಟ್ರೀಮಿಂಗ್ ಅಥವಾ ಮಲ್ಟಿ-ಟಾಸ್ಕಿಂಗ್ ಸಂದರ್ಭದಲ್ಲಿ ಸಾಧನವು ಬಿಸಿಯಾಗದಂತೆ ತಡೆಯುತ್ತದೆ.
2.2k ರೆಸಲ್ಯೂಶನ್ ಮತ್ತು 16:10 ಆಸ್ಪೆಕ್ಟ್ ರೇಶಿಯೋದ ಜತೆಗೆ ವೆಬ್ ಬ್ರೌಸಿಂಗ್ಗಾಗಿ ಉತ್ತಮ ವೀಕ್ಷಣೆಯ ಅನುಭವಗಳನ್ನು ಒದಗಿಸುತ್ತದೆ.
HP ಕಮಾಂಡ್ ಸೆಂಟರ್, ಪರ್ಫಾರ್ಮೆನ್ಸ್ ಮೋಡ್, ಬ್ಯಾಲೆನ್ಸ್ಡ್ ಮೋಡ್ ಮತ್ತು ಪವರ್ ಸೇವರ್ ಮೋಡ್ ಸಹಿತವಾಗಿದೆ.
HP ಪ್ಯಾಲೆಟ್ ಮೊದಲೇ ಅಳವಡಿಸಲಾಗಿದೆ.
ಜೊತೆಗೆ 5 MP ಕ್ಯಾಮೆರಾ HP ಪ್ರೆಸೆನ್ಸ್ ತಂತ್ರಜ್ಞಾನ, AI ಗದ್ದಲ ನಿವಾರಣೆ ಸೌಲಭ್ಯಗಳಿವೆ.
ನಿಮ್ಮ ಶೈಲಿಗೆ ಸರಿಹೊಂದುವಂತೆ ಎರಡು ಬಣ್ಣಗಳಲ್ಲಿ ಲಭ್ಯವಿದೆ: ನ್ಯಾಚುರಲ್ ಸಿಲ್ವರ್ ಮತ್ತು ವಾರ್ಮ್ ಗೋಲ್ಡ್.
HP Pavilion x360 14-ಇಂಚಿನ ಲ್ಯಾಪ್ಟಾಪ್
ಮಲ್ಟಿ ಪ್ಲೇಯರ್ ಗೇಮಿಂಗ್, ಮೂವಿ ಡೌನ್ಲೋಡ್, ಸುಗಮವಾದ ಲೈವ್ ಸ್ಟ್ರೀಮಿಂಗ್ ಮತ್ತು ಆನ್ಲೈನ್ನಲ್ಲಿ ಕಡಿಮೆ ಸುಪ್ತತೆಗಾಗಿ 12th Gen Intel® Core™ U-ಸರಣಿ ಪ್ರೋಸೆಸರ್ಗಳನ್ನು ಅಳವಡಿಸಲಾಗಿದೆ.
ಮ್ಯಾನ್ಯುವಲ್ ಕ್ಯಾಮೆರಾ ಶಟರ್ ಡೋರ್ ಹೊಂದಿರುವ HP ಯ ಮೊದಲ ಗ್ರಾಹಕ ಲ್ಯಾಪ್ಟಾಪ್ ಇದಾಗಿದ್ದು, ನಿಮ್ಮ ಕ್ಯಾಮರಾ ಖಾಸಗಿ ಮತ್ತು ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ.
HP ಕಮಾಂಡ್ ಸೆಂಟರ್, ಪರ್ಫಾರ್ಮೆನ್ಸ್ ಮೋಡ್, ಬ್ಯಾಲೆನ್ಸ್ಡ್ ಮೋಡ್ ಮತ್ತು ಪವರ್ ಸೇವರ್ ಮೋಡ್ ಜೊತೆಗೆ ಸಾಧನದ ಕಾರ್ಯಕ್ಷಮತೆಯನ್ನು ನಿಯಂತ್ರಿಸಬಹುದು.
ಸ್ಥಾಪಿತ HP ಪ್ಯಾಲೆಟ್ ಮೂಲಕ ಸೃಜನನಶೀಲ ಕೆಲಸಗಳಿಗೆ ಜೀವ ತುಂಬುತ್ತದೆ.
5 MP ಕ್ಯಾಮೆರಾ ಉತ್ತಮ ವೀಡಿಯೊ ಕರೆ ಅನುಭವ ನೀಡುತ್ತಿದ್ದು, HP ಪ್ರೆಸೆನ್ಸ್ ತಂತ್ರಜ್ಞಾನ, AI ಗದ್ದಲ ನಿವಾರಣೆ ಸೌಲಭ್ಯಗಳು ಅದ್ಭುತವಾಗಿವೆ.
ಬಣ್ಣದ ಆಯ್ಕೆಗಳು: ಸ್ಪೇಸ್ ಬ್ಲೂ, ಪೇಲ್ ರೋಸ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್.
EyeSafe ಪ್ರಮಾಣೀಕೃತ ಡಿಸ್ಪ್ಲೇ:
ಆರಾಮದಾಯಕವಾದ ವೀಕ್ಷಣೆಯ ಅನುಭವವನ್ನು ಒದಗಿಸಲು ಬ್ಲೂ-ಲೈಟ್ ಫಿಲ್ಟರ್ ಸದಾ ಆನ್ ಆಗಿರುತ್ತದೆ.
ಸೆಟ್ಟಿಂಗ್ಗಳನ್ನು ಹೊಂದಿಸುವ ಅಗತ್ಯವಿಲ್ಲದೆಯೇ ಡಿಸ್ಪ್ಲೇಗೆ ಸರಿಯಾಗಿ ನಿರ್ಮಿಸಲಾಗಿದೆ
ಬೆಳಕಿನ ಶಕ್ತಿಯನ್ನು ಮರುಹಂಚಿಕೆ ಮಾಡಿ, ವರ್ಣಮಯ ದೃಶ್ಯ ವೈಭವವನ್ನು ಒದಗಿಸುತ್ತದೆ.
ಬಣ್ಣದ ಕಾರ್ಯಕ್ಷಮತೆ ಅಬಾಧಿತವಾಗಿರುತ್ತದೆ.
ಬೆಲೆ ಮತ್ತು ಲಭ್ಯತೆ
HP ಪೆವಿಲಿಯನ್ ಪ್ಲಸ್ 14-ಇಂಚಿನ ಲ್ಯಾಪ್ಟಾಪ್ ರೂ. 78,999/- ರಿಂದ ಖರೀದಿಗೆ ಲಭ್ಯ
HP Pavilion x360 14-ಇಂಚಿನ ಲ್ಯಾಪ್ಟಾಪ್ ರೂ. 76,999/- ರಿಂದ ಖರೀದಿಗೆ ಲಭ್ಯ
HP ಪೆವಿಲಿಯನ್ ಪ್ಲಸ್ 14-ಇಂಚಿನ ಸಾಧನ ಹಗುರವಾಗಿದೆ, 12th Gen Intel® Core™ H-ಸರಣಿ ಪ್ರೋಸೆಸರ್ಗಳಿಂದ, H-45 ವ್ಯಾಟ್ನೊಂದಿಗೆ.ಸಜ್ಜಾಗಿವೆ. ಹೊಚ್ಚ-ಹೊಸ HP ಪೆವಿಲಿಯನ್ x360 14-ಇಂಚು ಲ್ಯಾಪ್ಟಾಪ್ ಕೇವಲ 1.41 ಕೆಜಿ ತೂಗುತ್ತದೆ ಮತ್ತು ಮೂರು ವರ್ಣಗಳ ರೂಪಾಂತರಗಳಲ್ಲಿ ಲಭ್ಯವಿದೆ: ಸ್ಪೇಸ್ ಬ್ಲೂ, ಪೇಲ್ ರೋಸ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್.
ಈ ಲ್ಯಾಪ್ಟಾಪ್ಗಳ ಬಿಡುಗಡೆ ಕುರಿತಂತೆ HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, "GenZs ಮತ್ತು ಮಿಲೆನಿಯಲ್ಸ್ ಅಗತ್ಯಗಳು ವಿಕಸನಗೊಳ್ಳುತ್ತಿದ್ದು, ಅವುಗಳನ್ನು ಪೂರೈಸಲು ನಾವು ನಮ್ಮ ಪರಿಸರ ವ್ಯವಸ್ಥೆಯನ್ನು ನಿರಂತರವಾಗಿ ವಿಸ್ತರಿಸುತ್ತಿದ್ದೇವೆ ಮತ್ತು ಆವಿಷ್ಕರಿಸುತ್ತಿದ್ದೇವೆ. ಗ್ರಾಹಕರ ಒಳನೋಟಗಳ ಆಧಾರದಲ್ಲಿ ಹೈಬ್ರಿಡ್ ಜೀವನಶೈಲಿಯನ್ನು ಪೂರೈಸಲು ನಾವು ತೆಳುವಾದ HP ಪೆವಿಲಿಯನ್ ಪ್ಲಸ್ 14-ಇಂಚಿನ ಲ್ಯಾಪ್ಟಾಪ್ ನಿರ್ಮಿಸಿದ್ದೇವೆ. ಈ PC ಮತ್ತು ಪೆವಿಲಿಯನ್ x360 14-ಇಂಚಿನ ಸಾಧನಗಳು ಅಸಾಧಾರಣ ಅನುಭವಗಳನ್ನು ನೀಡಲಿದ್ದು, ಬಳಕೆದಾರರು ನಿರಂತರ ಸಂಪರ್ಕದಲ್ಲಿರುತ್ತಾರೆ, ವ್ಯಸ್ತರಾಗಿರುತ್ತಾರೆ ಮತ್ತು ಉತ್ಪಾದಕರಾಗಿರುತ್ತಾರೆ. Eyesafe ಪ್ರಮಾಣಿತ ಡಿಸ್ಪ್ಲೇ ಒಳಗೊಂಡಿದ್ದು, ಕಣ್ಣಿನ ಒತ್ತಡವನ್ನು ಕಡಿಮೆ ಮಾಡುವ ಜತೆಗೆ, ಆಹ್ಲಾದಕರ ಕೆಲಸದ ವಾತಾವರಣವನ್ನು ನೀಡುತ್ತದೆ” ಎಂದರು.
Hp Pavilion Plus 14 And Pavilion X360 14 Laptops Launched In India.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am