ಬ್ರೇಕಿಂಗ್ ನ್ಯೂಸ್
21-07-22 07:54 pm Source: Vijayakarnataka ಡಿಜಿಟಲ್ ಟೆಕ್
ವಿಶ್ವದ ಪ್ರಮುಖ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಲ್ಲಿ ಒಂದಾದ ಚೀನಾ ಮೊಲದ ಮೊಬೈಲ್ ಕಂಪೆನಿ Vivo ದೇಶದಲ್ಲಿಂದು ತನ್ನ ವಿನೂತನ 'Vivo T1x' ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ Vivo T-ಸರಣಿಯ ಸ್ಮಾರ್ಟ್ಫೋನ್ ಕಡಿಮೆ ಬಜೆಟ್ ಬೆಲೆಯ ಗ್ರಾಹಕರನ್ನು ಗುರಿಯಾಗಿಸಿಕೊಂಡಿದ್ದು, 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.58-ಇಂಚಿನ ಫುಲ್ HD+ ಡಿಸ್ಪ್ಲೇ, Qualcomm Snapdragon 680 SoC ಪ್ರೊಸೆಸರ್ ಮತ್ತು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರುವ ವೈಶಿಷ್ಟ್ಯಗಳಲ್ಲಿ Vivo T1x ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೆ, ಬಜೆಟ್ ಬೆಲೆಯಲ್ಲಿ ಬಿಡುಗಡೆಗೊಂಡಿರುವ ನೂತನ Vivo T1x ಸ್ಮಾರ್ಟ್ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟು ಎಂಬೆಲ್ಲಾ ಮಾಹಿತಿಗಳನ್ನು ತಿಳಿಯೋಣ ಬನ್ನಿ.
Vivo T1x ಸ್ಮಾರ್ಟ್ಫೋನಿನ ವೈಶಿಷ್ಟ್ಯಗಳು
ಮೊದಲೇ ಹೇಳಿದಂತೆ, ನೂತನ Vivo T1x ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ ಸಾಮರ್ಥ್ಯದಲ್ಲಿ 6.58-ಇಂಚಿನ ಫುಲ್ HD+ (1,080x2,408 ಪಿಕ್ಸೆಲ್ಗಳು) LCD ಡಿಸ್ಪ್ಲೇಯನ್ನು ಹೊಂದಿದೆ. 90.6 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುವ ಈ ಡಿಸ್ಪ್ಲೇಯು 96 ಪ್ರತಿಶತ NTSC ಕಲರ್ ಗ್ಯಾಮೆಟ್ ಕವರೇಜ್ ಅನ್ನು ಬೆಂಬಲಿಸುತ್ತದೆ. ಹುಡ್ ಅಡಿಯಲ್ಲಿ, ಆಕ್ಟಾ-ಕೋರ್ 6nm Qualcomm Snapdragon 680 SoC ಪ್ರೊಸೆಸರ್ ಅನ್ನು ಹೊಂದಿರುವ Vivo T1x ಸ್ಮಾರ್ಟ್ಫೋನ್ Adreno GPU 610 ಮತ್ತು 6GB LPDDR4x RAM ಅನ್ನು ಹೊಂದಿದೆ. ಈ ಫೋನ್ ಹೆಚ್ಚುವರಿ ಆಂತರಿಕ ಮೆಮೊರಿಯನ್ನು ಬಳಸಿಕೊಂಡು RAM ಅನ್ನು 8GB ವರೆಗೆ ವಿಸ್ತರಿಸಿಕೊಳ್ಳಲಿದೆ. ಈ Vivo T1x ಸ್ಮಾರ್ಟ್ಫೋ 128GBಆನ್ಬೋರ್ಡ್ ಸಂಗ್ರಹಣೆಯನ್ನು ನೀಡಲಾಗಿದ್ದು, ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ, ವಿವೋ ಸುಗಮ ಗೇಮಿಂಗ್ಗಾಗಿ ಈ ಹೊಸ ಸಾಧನದಲ್ಲಿ 4-ಲೇಯರ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಒದಗಿಸಿರುವುದನ್ನು ನಾವು ನೋಡಬಹುದು.
ಕ್ಯಾಮೆರಾ ವಿಭಾಗದಲ್ಲಿ, Vivo T1x ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಲೆನ್ಸ್ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು f/2.4 ಲೆನ್ಸ್ನೊಂದಿಗೆ 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್ಗಳಿಗಾಗಿ, ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸಾಧನದಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.0, GPS, Glonass, OTG, FM ರೇಡಿಯೋ ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳಿವೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್, ಫೇಸ್ ಅನ್ಲಾಕ್ ವೈಶಿಷ್ಟ್ಯ, ಫೋನ್ನ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ಮಲ್ಟಿ-ಟರ್ಬೊ 5.0 ನಂತಹ ಇತರೆ ವೈಶಿಷ್ಟಯಗಳನ್ನು ಸಹ ಹೊಂದಿರುವ Vivo T1x 18W ಸ್ಮಾರ್ಟ್ಫೋನ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ವಿಶೇಷವಾಗಿ, ಈ ಫೋನ್ ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ.
ಭಾರತದಲ್ಲಿ Vivo T1x ಸ್ಮಾರ್ಟ್ಫೋನ್ ಬೆಲೆ, ಲಭ್ಯತೆ
ಭಾರತದಲ್ಲಿ Vivo T1x ಸ್ಮಾರ್ಟ್ಫೋನ್ ಬೇಸ್ 4GB RAM + 64GB ಸ್ಟೋರೇಜ್ ಮಾಡೆಲ್ ಬೆಲೆಯು 11,999 ರೂ.ಗಳಿಂದ ಆರಂಭವಾಗಿದೆ. ಇದರ 4GB RAM + 128GB ಸ್ಟೋರೇಜ್ ಮಾಡೆಲ್ 12,999 ರೂ.ಗಳಿಗೆ ಹಾಗೂ ಟಾಪ್-ಆಫ್-ಲೈನ್ 6GB RAM + 128GB ಸ್ಟೋರೇಜ್ ಮಾಡೆಲ್ ಬೆಲೆಯು 14,999 ರೂ.ಗಳಾಗಿವೆ. ಇದೇ ಜುಲೈ 27 ರಿಂದ ಫ್ಲಿಪ್ಕಾರ್ಟ್ ಮೂಲಕ Vivo T1x ಸ್ಮಾರ್ಟ್ಫೋನ್ ಅನ್ನು ಮಾರಾಟಕ್ಕೆ ತರಲಾಗುತ್ತಿದ್ದು, HDFC ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರು 1,000 ರೂ.ಗಳ ತ್ವರಿತ ರಿಯಾಯಿತಿಯಲ್ಲಿ Vivo T1x ಸ್ಮಾರ್ಟ್ಫೋನ್ ಅನ್ನು ಗ್ರಾವಿಟಿ ಬ್ಲ್ಯಾಕ್ ಮತ್ತು ಸ್ಪೇಸ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
Vivo T1x Launched In India Price, Specifications Details.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm