ಬ್ರೇಕಿಂಗ್ ನ್ಯೂಸ್
14-06-22 08:00 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶಿಯೋಮಿ ತನ್ನ ಜನಪ್ರಿಯ ಸ್ಮಾರ್ಟ್ಬ್ಯಾಂಡ್ Mi Smart Band 6 ಸಾಧನದ ಬೆಲೆಯನ್ನು ಕಡಿತಗೊಳಿಸಿದೆ. ಕಳೆದ ಆಗಸ್ಟ್ 2021 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದ AMOLED ಡಿಸ್ಪ್ಲೇ ಹೊಂದಿರುವ Mi Smart Band 6 ಸಾಧನದ ಬೆಲೆಯನ್ನು 500 ರೂ.ಗಳಷ್ಟು ಇಳಿಕೆ ಮಾಡಲಾಗಿದ್ದು, ಇದೀಗ 2,999 ರೂ.ಗಳಿಗೆ Mi Smart Band 6 ಸಾಧನವನ್ನು ಖರೀದಿಸುವ ಅವಕಾಶವನ್ನು ನೀಡಲಾಗಿದೆ. ಒಂದೇ ಚಾರ್ಜ್ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುವ ಹಾಗೂ ಫಿಟ್ನೆಸ್ ಸೇರಿದಂತೆ ವಿವಿಧ ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಅತ್ಯುತ್ತಮ ಬ್ಯಾಂಡ್ ಅನ್ನು ಖರೀದಿಸಲು ಇದು ಯೋಗ್ಯ ಸಮಯವಾಗಿದೆ.
ಕಲರ್ ಡಿಸ್ಪ್ಲೇ ಮತ್ತು ಬಿಗ್ ಬ್ಯಾಟರಿ ಲೈಫ್ ಫೀಚರ್ಸ್ಗಳನ್ನು ಹೊತ್ತು ಬಿಡುಗಡೆಯಾದಾಗಿನಿಂದ ಸದಾ ಸುದ್ದಿಯಲ್ಲೇ ಇರುವ ಶಿಯೋಮಿಯ Mi Smart Band 6 ಸಾಧನವು, 1.56-ಇಂಚಿನ (152x486 ಪಿಕ್ಸೆಲ್ಗಳು) ಫುಲ್ ಸ್ಕ್ರೀನ್ AMOLED ಟಚ್ ಡಿಸ್ಪ್ಲೇಯನ್ನು ಹೊಂದಿದೆ. 450 ನಿಟ್ಗಳ ಗರಿಷ್ಠ ಹೊಳಪು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರುವ ಈ ಡಿಸ್ಪ್ಲೇಯು ಸಾಧಾರಣ ಬ್ಯಾಂಡ್ಗಳ ಡಿಸ್ಪ್ಲೇ ಗಾತ್ರಕ್ಕಿಂತ ದೊಡ್ಡದಾಗಿರುವುದನ್ನು ನಾವು ನೋಡಬಹುದು. ಇನ್ನು ಈ ಸಾಧನವು 80 ಕ್ಕೂ ಹೆಚ್ಚು ಗ್ರಾಹಕೀಯಗೊಳಿಸಬಹುದಾದ ಬ್ಯಾಂಡ್ ಫೇಸ್ಗಳನ್ನು ಹೊಂದಿದೆ ಹಾಗೂ ಅಂತರ್ನಿರ್ಮಿತ ಸಂವೇದಕಗಳನ್ನು ಬಳಸಿಕೊಂಡು ಒಟ್ಟು 30 ತಾಲೀಮು ಪ್ರಕಾರಗಳನ್ನು ಟ್ರ್ಯಾಕ್ ಮಾಡಲಿದೆ.
Mi Smart Band 6 ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನು ನೀಡುತ್ತದೆ, ಇದು ಬಳಕೆದಾರರಿಗೆ ಅವರ ಹೃದಯ ಬಡಿತ ಮತ್ತು SpO2 ಮಟ್ಟವನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಚಿಕ್ಕನಿದ್ರೆಗಳು, ನಿದ್ರೆಯ ಚಕ್ರಗಳು (ಕ್ಷಿಪ್ರ ಕಣ್ಣಿನ ಚಲನೆಯನ್ನು ಒಳಗೊಂಡಂತೆ) ಮತ್ತು ನಿದ್ರೆಯ ಉಸಿರಾಟದ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಅಂತರ್ನಿರ್ಮಿತ ನಿದ್ರೆಯ ಟ್ರ್ಯಾಕಿಂಗ್ ವೈಶಿಷ್ಟ್ಯವಿದೆ. ಇದರ ಜೊತೆಗೆ ಒತ್ತಡದ ಮೇಲ್ವಿಚಾರಣೆ, ಆಳವಾದ ಉಸಿರಾಟದ ಮಾರ್ಗದರ್ಶನ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಸಹ ನೀಡುತ್ತದೆ. ವೃತ್ತಿಪರ ಕ್ರೀಡೆಗಳಾದ ಕ್ರಿಕೆಟ್ ಮತ್ತು ಜಿಮ್ನಾಸ್ಟಿಕ್ಸ್ ಮತ್ತು ಜುಂಬಾ ಚಟುವಟಿಕೆಗಳು ಸೇರಿದಂತೆ ಹಲವು ಬಗೆಯ ಫಿಟ್ನೆಸ್ ಕಾರ್ಯಗಳನ್ನು ಟ್ರ್ಯಾಕ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ.
Mi Smart Band 6 ಸಾಧನವು 5 ATM ನೀರಿನ ಪ್ರತಿರೋಧವನ್ನು ಪ್ರಮಾಣೀಕರಿಸಿದೆ. ಅಂದರೆ, ಈ ಸಾಧನವನ್ನು ಈಜು ಟ್ರ್ಯಾಕ್ ಮಾಡಲು ಬಳಸಬಹುದು. ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನಲ್ಲಿನ ಕರೆ ಮತ್ತು ಸಂದೇಶಗಳ ಬಗ್ಗೆ ಬ್ಯಾಂಡ್ನಲ್ಲಿ ಅಧಿಸೂಚನೆಗಳನ್ನು ಪಡೆಯಬಹುದು. ಇಷ್ಟೇ ಅಲ್ಲದೇ, ಸಂಗೀತದ ಪ್ಲೇಬ್ಯಾಕ್ ಮತ್ತು ಕ್ಯಾಮರಾ ರಿಮೋಟ್ ಶಟರ್ ಅನ್ನು ನಿಯಂತ್ರಿಸಬಹುದಾದ ಈ ಸಾಧನವು ಬ್ಲೂಟೂತ್ v5.0 (BLE) ಸಂಪರ್ಕದೊಂದಿಗೆ ಬಂದಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಬೆಂಬಲಿಸುತ್ತದೆ. , 47.4x18.6x12.7mm ಅಳತೆ ಮತ್ತು 12.8 ಗ್ರಾಂ ತೂಗುವ ಈ ಸಾಧನವನ್ನು 2,999 ರೂ.ಗಳ ಬೆಲೆಯಲ್ಲಿ ಖರೀದಿಸಲು ಒಂದು ಅತ್ಯುತ್ತಮ ಫಿಟ್ನೆಸ್ ಬ್ಯಾಂಡ್ ಎಂದು ಹೇಳಬಹುದು.
Mi Smart Band 6 Price In India Discounted To Rs. 2,999.
16-03-25 12:11 pm
Bangalore Correspondent
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 02:05 pm
Mangalore Correspondent
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm