ಬ್ರೇಕಿಂಗ್ ನ್ಯೂಸ್
08-06-22 07:23 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್ವಾಚ್ ಬ್ರ್ಯಾಂಡ್ Dizo ಭಾರತೀಯ ಮಾರುಕಟ್ಟೆಗೆ ಇಂದು ತನ್ನ ವಿನೂತನ Dizo Watch D ಸಾಧನವನ್ನು ಅನ್ನು ಬಿಡುಗಡೆಗೊಳಿಸಿದೆ. ಕೆಲವು ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ ಅತ್ಯಾಕರ್ಷಕ 5ATM ಪ್ರಮಾಣಿತವನ್ನು ಹೊಂದಿರುವ Dizo Watch D ಸಾಧನವನ್ನು ಕೇವಲ 1,999 ರೂ.ಗಳಲ್ಲಿ ಪರಿಚಯಿಸಲಾಗಿದ್ದು, 1.8-ಇಂಚಿನ LCD ಪ್ಯಾನೆಲ್, 150 ಕ್ಕೂ ಹೆಚ್ಚು ವಾಚ್ ಫೇಸ್ ಮತ್ತು ನೈಜ-ಸಮಯದಲ್ಲಿ ಹೃದಯ ಬಡಿತ ಮಾನಿಟರ್ ನಂತಹ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ. ಹಾಗಾದರೆ, ನೂತನ Dizo Watch D ಸಾಧನವು ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
Dizo Watch D ಸಾಧನದ ವೈಶಿಷ್ಟ್ಯಗಳು ಹೇಗಿವೆ?
ನೂತನ Dizo Watch D ಸಾಧನವು ಚೌಕಟ್ಟಿನ ಪ್ರೀಮಿಯಂ ವಿನ್ಯಾಸದಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದ್ದು, ಈ ವಾಚ್ 22 ಎಂಎಂ ಸಿಲಿಕೋನ್ ಪಟ್ಟಿಯೊಂದಿಗೆ ಲೋಹದ ಚೌಕಟ್ಟನ್ನು ಹೊಂದಿರುವುದನ್ನು ನಾವು ನೋಡಬಹುದು. 5ATM ಪ್ರಮಾಣೀಕರಣವನ್ನು ಹೊಂದಿರುವ ಬಾಗಿದ ಟೆಂಪರ್ಡ್ ಡಿಸ್ಪ್ಲೇಯನ್ನು ಹೊಂದಿರುವ Dizo Watch D ಸಾಧನವು ನೀರು-ನಿರೋಧಕವಾಗಿದ್ದು, ಈ ಸಾಧನವು 30 ನಿಮಿಷಗಳ ಕಾಲ ನೀರಿನ ಅಡಿಯಲ್ಲಿ 50 ಮೀ ವರೆಗೆ ರಕ್ಷಣೆಯನ್ನು ಒದಗಿಸಬಲ್ಲದು ಎಂದು ಕಂಪೆನಿಯು ಹೇಳಿಕೊಂಡಿದೆ.
Dizo Watch D ಸಾಧನದಲ್ಲಿ ಅಳವಡಿಸಲಾಗಿರುವ ಡಿಸ್ಪ್ಲೇಯ 1.8-ಇಂಚಿನ LCD ಪ್ಯಾನೆಲ್ ಆಗಿದ್ದು, ಇದು 550 nits ಗರಿಷ್ಠ ಹೊಳಪನ್ನು ನೀಡುತ್ತದೆ. ವೈಶಿಷ್ಟ್ಯಗಳಲ್ಲಿ 150 ಕ್ಕೂ ಹೆಚ್ಚು ವಾಚ್ ಫೇಸ್ಗಳನ್ನು ಒಳಗೊಂಡಿರುವ ಈ ಸಾಧನದಲ್ಲಿ ಬಳಕೆದಾರರು ವಿಜೆಟ್ಗಳು ಮತ್ತು ವಾಲ್ಪೇಪರ್ಗಳೊಂದಿಗೆ ಸ್ಮಾರ್ಟ್ವಾಚ್ ಅನ್ನು ಕಸ್ಟಮೈಸ್ ಮಾಡಬಹುದು. ಇದು ಸ್ಟೀಲ್ ವೈಟ್, ಕಾಪರ್ ಪಿಂಕ್, ಕಂಚಿನ ಹಸಿರು, ಗಾಢ ನೀಲಿ ಮತ್ತು ಕ್ಲಾಸಿಕ್ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.
Dizo Watch D ಸಾಧನವು ಸಾಮಾನ್ಯ ಆರೋಗ್ಯ ಕೇಂದ್ರಿತ ವೈಶಿಷ್ಟ್ಯಗಳು ಮತ್ತು ಸಂವೇದಕಗಳೊಂದಿಗೆ ಬಿಡುಗಡೆಯಾಗಿದ್ದು, ಇವುಗಳಲ್ಲಿ ನೈಜ-ಸಮಯದ ಹೃದಯ ಬಡಿತ ಮಾನಿಟರ್, ಸ್ಲೀಪ್ ಟ್ರ್ಯಾಕರ್, SpO2 ಆಮ್ಲಜನಕದ ಮಟ್ಟ ಪರೀಕ್ಷಕ, ಸ್ಟೆಪ್ ಕೌಂಟರ್, ಕ್ಯಾಲೋರಿ ಕೌಂಟರ್ ಮತ್ತು ಸೆಡೆಂಟರಿ ರಿಮೈಂಡರ್ ವೈಶಿಷ್ಟ್ಯಗಳು ಸೇರಿವೆ. ಈ ಸಾಧನದಲ್ಲಿ ಋತುಚಕ್ರದ ಅವಧಿಯ TrackSedentary Reminder ನಂತಹ ಮಹಿಳಾ-ಕೇಂದ್ರಿತ ವೈಶಿಷ್ಟ್ಯಗಳನ್ನು ಸಹ ತರಲಾಗಿದೆ.
ಬಾಳಿಕೆಯ ವಿಷಯದಲ್ಲಿ, Dizo Watch D ಸಾಧನವು ಮ್ಯಾಗ್ನೆಟಿಕ್ ಸಕ್ಷನ್ ಚಾರ್ಜರ್ನೊಂದಿಗೆ 350 mAh ಸಾಮರ್ಥ್ಯದ ಶಕ್ತಿಯುತ ಬ್ಯಾಟರಿ ಬ್ಯಾಕಪ್ನೊಂದಿಗೆ ಬಂದಿದೆ. Dizo ಕಂಪೆನಿ ಹೇಳಿಕೊಳ್ಳುವ ಪ್ರಕಾರ, ಎರಡು ಗಂಟೆಗಳ ಕಾಲ ಚಾರ್ಜ್ನೊಂದಿಗೆ ಎರಡು ವಾರಗಳವರೆಗೆ ಈ ಸಾಧನವು ಕೆಲಸ ನಿರ್ವಹಿಸಲಿದೆ ಹಾಗೂ ವಿಶಿಷ್ಟವಾದ ಬಳಕೆಗಾಗಿ 14 ದಿನಗಳವರೆಗೆ ಬ್ಯಾಟರಿ ಬಾಳಿಕೆ ಇರುತ್ತದೆ ಎಂದು ಡಿಜೊ ಹೇಳಿಕೊಂಡಿದೆ, ಆದರೆ, ಇದು ಬಳಕೆದಾರರ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಗಬಹುದು.
ಇಷ್ಟೇ ಅಲ್ಲದೇ, ಈ ಸಾಧನವು ಕ್ಯಾಮರಾ ಶಟರ್ ನಿಯಂತ್ರಣಗಳು, ಸಂಗೀತ ನಿಯಂತ್ರಣಗಳು ಮತ್ತು ಹೆಚ್ಚಿನವುಗಳಂತಹ ಕೆಲವು ಸಾಮಾನ್ಯ ಧರಿಸಬಹುದಾದ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಬಳಕೆದಾರರು ಡಿಜೊ ಅಪ್ಲಿಕೇಶನ್ ಮೂಲಕ Dizo Watch D ಸಾಧನದ ಚಟುವಟಿಕೆಯನ್ನು ಟ್ರ್ಯಾಕ್ ಮಾಡಬಹುದು, ಇದು ಜಿಪಿಎಸ್ ಮಾರ್ಗ ಟ್ರ್ಯಾಕಿಂಗ್, ಆರೋಗ್ಯ ಡೇಟಾವನ್ನು ಹಂಚಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ಭಾರತದಲ್ಲಿ ಡಿಜೊ ವಾಚ್ ಡಿ ಬೆಲೆ
ಭಾರತದಲ್ಲಿ Dizo Watch D ಸಾಧನವನ್ನು 2,999 ರೂ.ಗಳ ಎಂಆರ್ಪಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಪರಿಚಯಾತ್ಮಕ ಕೊಡುಗೆಯ ಭಾಗವಾಗಿ ಈ ಸಾಧನವನ್ನು 1,999 ರೂ.ಗಳಿಗೆ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಸ್ಮಾರ್ಟ್ ವಾಚ್ ಜೂನ್ 14 ರಿಂದ ಮಧ್ಯಾಹ್ನ 12 ಗಂಟೆಗೆ ಮಾರಾಟಕ್ಕೆ ಬರುತ್ತಿದ್ದು, ಆಸಕ್ತ ಖರೀದಿದಾರರು ಫ್ಲಿಪ್ಕಾರ್ಟ್ನಿಂದ ಹೊಸ Dizo Watch D ಸಾಧನವನ್ನು ಪಡೆಯಬಹುದು.
Dizo Watch D With 5atm Design Launched For Rs. 1,999.
16-03-25 12:11 pm
Bangalore Correspondent
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 02:05 pm
Mangalore Correspondent
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm