ಬ್ರೇಕಿಂಗ್ ನ್ಯೂಸ್
02-10-21 04:14 pm Mangaluru Correspondent ಕ್ರೈಂ
ಉಳ್ಳಾಲ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ದಿನವೇ ಗಾಂಧೀಜಿ ಯುವತಿಯೊಂದಿಗಿದ್ದ ಹಳೆಯ ಫೋಟೊ ಒಂದನ್ನು ತುಳುವಿನ ಸಜ್ಜಿಗೆ, ಬಜಿಲ್ ಹಾಡಿಗೆ ಹೆಜ್ಜೆ ಹಾಕಿದ ರೀತಿ ವೀಡಿಯೊ ಸೃಷ್ಟಿಸಿ ಅದನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್ ಐ ಕಾರ್ಯಕರ್ತರು ದೂರು ನೀಡಿದ್ದಾರೆ.
ದೇಶದೆಲ್ಲೆಡೆ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಜನ್ಮ ದಿನವನ್ನ ಆಚರಿಸುತ್ತಿದ್ದರೆ, ಹರೇಕಳ ಗ್ರಾಮದ ಪ್ರಜ್ವಲ್ ಎಂಬ ಯುವಕ ತನ್ನ ಮೊಬೈಲ್ ನಲ್ಲಿ ಗಾಂಧೀಜಿ ಕುರಿತಾಗಿದ್ದ ಎಡಿಟೆಡ್ ವೀಡಿಯೋವನ್ನ ವಾಟ್ಸಪ್ ಸ್ಟೇಟಸ್ ಹಾಕಿ, ವಿಕೃತಿ ಮೆರೆದಿರುವುದಾಗಿ ಡಿವೈಎಫ್ ಐ ಸಂಘಟನೆ ದೂರಿನಲ್ಲಿ ಆರೋಪಿಸಿದೆ.
ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನ ಅವರ ಜನ್ಮದಿನದಂದೇ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈತನ ಈ ಕೃತ್ಯದಿಂದ ಪ್ರದೇಶದಲ್ಲಿ ಶಾಂತಿ ಕದಡುವ ಸ್ಥಿತಿ ಉಂಟಾಗಲಿದ್ದು ಸಂಘರ್ಷಕ್ಕೆ ಎಡೆಮಾಡಿಕೊಡುವ ಅವಕಾಶಗಳು ಬಹಳಷ್ಟು ಇದೆ. ಈತ ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದನೆಂದರೆ ದೇಶವನ್ನೇ ಅವಮಾನಿಸಿದಂತೆ. ಹಾಗಾಗಿ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಡಿವೈಎಫ್ ಐ ನಿಯೋಗ ಎಚ್ಚರಿಸಿದೆ.
ದೂರು ನೀಡಿದ ನಿಯೋಗದಲ್ಲಿ DYFI ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಮುಖಂಡರಾದ ಅಶ್ರಪ್ ಹರೇಕಳ, ರಿಝ್ವಾನ್ ಖಂಡಿಗ, ರಶೀದ್, ಬದ್ರುದ್ದೀನ್, ಇಸ್ಮಾಯಿಲ್ ಖಂಡಿಗ ಮೊದಲಾದವರು ಇದ್ದರು.
Mangalore Gandhi photo morphed with woman and posted on status complaint filed at Konaje station. Such a status was posted on Whatsapp and had gone viral on social media. The status was put today as a mark of Gandhi Jayanti.
05-04-25 10:17 pm
HK News Desk
HD Kumaraswamy, Congress, D K Shivakumar: ಮಹಮ...
05-04-25 09:43 pm
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಕಾಂ...
05-04-25 08:12 pm
BJP Yatnal; ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗ...
05-04-25 02:47 pm
Kalaburagi Accident Mini Bus and Truck: ಕಲಬುರ...
05-04-25 12:21 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 07:49 pm
Udupi Correspondent
Mangalore Jail, Jammer, Vedavyas Kamath; ಜೈಲಿ...
05-04-25 01:16 pm
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
05-04-25 08:53 pm
Bangalore Correspondent
Cyber Fraud Bangalore, Plusmarts; ಫೇಸ್ಬುಕ್ ಮಹ...
05-04-25 04:27 pm
Anwar Manippady threat, Mangalore crime: ವಕ್ಪ...
04-04-25 03:03 pm
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm