ಬ್ರೇಕಿಂಗ್ ನ್ಯೂಸ್
21-09-21 12:19 pm Mangaluru Correspondent ಕ್ರೈಂ
ಕೊಣಾಜೆ, ಸೆ.21: ಕರ್ನಾಟಕ- ಕೇರಳ ಗಡಿಭಾಗದ ಮರಿಕ್ಕಳ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನ ವಶಕ್ಕೆ ಪಡೆದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳಲ್ಲಿ ಓರ್ವನನ್ನ ಬಂಧಿಸಿದ್ದರು. ಇದೀಗ ಬಜರಂಗದಳ ಕಾರ್ಯಕರ್ತರ ಆಗ್ರಹದ ಮೇರೆಗೆ ಮತ್ತೋರ್ವನನ್ನೂ ಬಂಧಿಸಿದ್ದು ಕಣ್ಣಮುಚ್ಚಾಲೆ ಆಟವನ್ನು ಕೊನೆಗೊಳಿಸಿದ್ದಾರೆ.
ಮಹಮ್ಮದ್ ಶಾಹಿದ್ ಮತ್ತೋರ್ವ ಬಂಧಿತ ಆರೋಪಿ. ಕಳೆದ ಗುರುವಾರ ಬೆಳಗ್ಗೆ ಬಜರಂಗದಳದ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ಮುಡಿಪು ಪೂಪಾಡಿ ಕಲ್ಲು ಕ್ರಾಸ್ ಬಳಿ ಕಸಾಯಿ ಖಾನೆಗೆ ಅಕ್ರಮವಾಗಿ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಎರಡು ಹಸುಗಳನ್ನ ವಶಕ್ಕೆ ಪಡೆದಿದ್ದರು. ಅಲ್ಲದೆ ಇಬ್ಬರು ಆರೋಪಿಗಳನ್ನೂ ವಶಕ್ಕೆ ಪಡೆದಿದ್ದರು. ಆದರೆ ಎಫ್ಐಆರ್ ನಲ್ಲಿ ಕೇವಲ ಓರ್ವ ಆರೋಪಿಯ ವಿರುದ್ಧ ಮಾತ್ರ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸ್ಥಳೀಯ ಪ್ರಭಾವಿ ಬಿಜೆಪಿ ಮುಖಂಡನಿಗೆ ಮಣಿದ ಕೊಣಾಜೆ ಪೊಲೀಸರು ಮತ್ತೋರ್ವ ಆರೋಪಿಯನ್ನ ಬಚಾವ್ ಮಾಡಿರುವ ಬಗ್ಗೆ ಬಜರಂಗದಳ ಆರೋಪಿಸಿತ್ತು. ಅಲ್ಲದೆ ತಪ್ಪಿಸಿಕೊಂಡ ಇನ್ನೋರ್ವ ಆರೋಪಿಯ ಬಂಧನಕ್ಕೆ ಬಜರಂಗದಳ ಆಗ್ರಹಿಸಿತ್ತು. ಬಜರಂಗಿಗಳ ಆಗ್ರಹಕ್ಕೆ ಮಣಿದ ಕೊಣಾಜೆ ಪೊಲೀಸರು ಇದೀಗ ಮತ್ತೋರ್ವ ಆರೋಪಿ ಮಹಮ್ಮದ್ ಶಾಹಿದ್ ನನ್ನ ಬಂಧಿಸಿದ್ದಾರೆ.
ಮಾಹಿತಿ ನೀಡದ ಕೊಣಾಜೆ ಪೊಲೀಸರು
ದನ ಕಳ್ಳತನದ ಮತ್ತೋರ್ವ ಬಂಧಿತ ಆರೋಪಿಯ ಹೆಸರು ಮಹಮ್ಮದ್ ಶಾಹಿದ್ ಎಂದು ನಿನ್ನೆ ಕೊಣಾಜೆ ಪಿಐ ಪ್ರಕಾಶ್ ದೇವಾಡಿಗರು ಹೇಳಿದ್ದು ಬಂಧಿತನ ವಿಳಾಸವನ್ನ ಠಾಣೆಗೆ ಕರೆ ಮಾಡಿ ಕೇಳುವಂತೆ ಹೇಳಿದ್ದರು. ಠಾಣೆಗೆ ವಿವಿಧ ಮಾಧ್ಯಮದ ಮಂದಿ ಪೋನಾಯಿಸಿ ಕೇಳಿದರೂ ಪ್ರತಿಕ್ರಿಯಿಸಿದ ಮಹಿಳಾ ಸಿಬ್ಬಂದಿ, ನಮಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ ಎಂಬ ಉಡಾಫೆಯ ಉತ್ತರ ನೀಡುತ್ತಿದ್ದಾರೆ. ದನ ಕಳ್ಳತನದಂತಹ ಮಾಮೂಲಿ ಸುದ್ದಿಗಳ ಬಗ್ಗೆಯೂ ಮಾಧ್ಯಮ ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಕೇಳುವ ಪರಿಸ್ಥಿತಿಯನ್ನ ಕೊಣಾಜೆ ಠಾಣೆ ಪೊಲೀಸರು ಸೃಷ್ಟಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದಿದ್ದ ಎರಡು ಹಸುಗಳಲ್ಲಿ ಒಂದು ಗರ್ಭಿಣಿಯಾಗಿದ್ದು ಬೀಜಗುರಿಯ ಗೋವನಿತಾಶ್ರಮದಲ್ಲಿ ಆಶ್ರಯ ನೀಡಲಾಗಿದೆ.
Mudipu pick van held for illegal cattle trafficking accused who was set free arrested by police after Bajarang dal demands justice. The prime accused was let free under the influence of some leaders but after social activists demanded justice now the cops have once again arrested the prime accused.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm