ಬ್ರೇಕಿಂಗ್ ನ್ಯೂಸ್
13-09-21 02:16 pm Headline Karnataka News Network ಕ್ರೈಂ
ತುಮಕೂರು, ಸೆ.13: ಸ್ವಂತ ಗಂಡನನ್ನು ಪತ್ನಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದು ಚರಂಡಿಗೆ ತಳ್ಳಿದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಾರಾಯಣ (52) ಎಂದು ಗುರುತಿಸಲಾಗಿದೆ. ಈತನ ಪತ್ನಿ ಅನ್ನಪೂರ್ಣ (45) ಕೊಲೆಗೈದ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.





ಅನ್ನಪೂರ್ಣ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಇದೇ ವಿಚಾರದಲ್ಲಿ ಪತಿ- ಪತ್ನಿ ನಡುವೆ ಜಗಳ ಆಗುತ್ತಿತ್ತು. ನೆಲಮಂಗಲದ ಬಳಿಯ ಟೋಲ್ ಗೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನಾರಾಯಣ ಪ್ರತಿ ದಿನ ಮನೆಗೆ ಬಂದು ಪತ್ನಿಯನ್ನು ಸಂಶಯದಿಂದ ನೋಡಿ, ತರಾಟೆಗೆತ್ತಿಕೊಂಡಿದ್ದ. ಇದರಿಂದ ರೋಸಿ ಹೋಗಿದ್ದ ಪತ್ನಿ ಅನ್ನಪೂರ್ಣ ಈತನ ಕತೆ ಮುಗಿಸಲು ಪ್ಲಾನ್ ಹಾಕಿದ್ದಳು ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ ಜಗಳ ನಡೆಯುತ್ತಿರುವಾಗಲೇ ಪೆಟ್ರೋಲ್ ಎರಚಿದ್ದು, ಬೆಂಕಿ ಕಡ್ಡಿ ಗೀರಿದ್ದಳು. ತೂರಾಡುತ್ತಲೇ ನೀರು ನೀರು ಎನ್ನುತ್ತಾ ಚರಂಡಿಯತ್ತ ಹೋಗಿದ್ದಾನೆ. ಹಿಂದಿನಿಂದ ಪತ್ನಿಯೇ ಚರಂಡಿಗೆ ತಳ್ಳಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಅರೆಸುಟ್ಟ ರೀತಿಯಲ್ಲಿ ಜೀವಂತವಾಗಿಯೇ ದಹಿಸಿ ಚರಂಡಿಯಲ್ಲೇ ನಾರಾಯಣ ಶವವಾಗಿದ್ದಾನೆ. ಕೊಲೆಗಡುಕಿ ಪತ್ನಿಯನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯ ಬೆಳಕಿಗೆ ಬರುತ್ತಲೇ ಭಾರೀ ಸಂಖ್ಯೆಯಲ್ಲಿ ಸ್ಥಳದಲ್ಲಿ ಜನ ಸೇರಿದ್ದರು.
Tumkur Extramarital affair wife sets Husband on fire and kills. The deceased has been identified as Narayana (52). Wife has been arrested by police.
11-05-26 09:36 pm
HK News Staffer
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
11-05-26 08:05 pm
HK News Staffer
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm